40 ಅಡಿ ಎತ್ತರದಿಂದ ಬಿದ್ದ ಪೇಂಟರ್ ಚಿಕಿತ್ಸೆ ಫಲಕಾರಿಯಾಗದೆ ಸಾವು…

ಶಿವಮೊಗ್ಗ : ಶಿವಮೊಗ್ಗದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಮಂಜುನಾಥ್ (೪೨) ಆಯತಪ್ಪಿ ಕೆಳಗೆ ಬಿದ್ದಿದ್ದು ನಿನ್ನೆ ರಾತ್ರಿ ಮಣಿಪಾಲ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದಾರೆ. ಮೃತ ಪತ್ನಿಯ ದೂರಿನ ಮೇರೆಗೆ ಆಸ್ಪತ್ರೆ, ಕಂಟ್ರ್ಯಾಕ್ಟರ್ ಶಬ್ಬೀರ್ ಹಾಗೂ ಕೆಲಸಕ್ಕೆ ಕರೆದು ಕೊಂಡು ಹೋಗಿರುವ ಅಬ್ದುಲ್ ರಹೀಂ ವಿರುದ್ಧ ಕೇಸ್ ದಾಖಲಾಗಿದೆ.
ಜೂ.೨೨ರಂದು ಮ್ಯಾಕ್ಸ್ ಆಸ್ಪತ್ರೆಯಲ್ಲಿ ಪೇಂಟಿಂಗ್ ಕೆಲಸವಿದೆ. ಅಬ್ದುಲ್ ರಹೀಂ ಎಂಬುವರು ಕೆಲಸಕ್ಕೆ ಕರೆದಿzರೆ ಎಂದು ಭದ್ರಾವತಿಯಲ್ಲಿದ್ದ ಮಂಜುನಾಥ್ ಅವರನ್ನು ಪ್ರದೀಪ್ ಮನೆಗೆ ಹೋಗಿ ಕರೆದುಕೊಂಡು ಹೋಗಿರುತ್ತಾರೆ. ಬೆಳಿಗ್ಗೆ ೯.೩೦ರ ಸುಮಾರಿಗೆ ರಮೇಶ್ ಎಂಬುವರು ಮಂಜುನಾಥ್ ಅವರ ಪತ್ನಿಗೆ ಕರೆ ಮಾಡಿ ಮಂಜುನಾಥ್ ಕೆಲಸ ಮಾಡುವಾಗ ಆಯ ತಪ್ಪಿ ಬಿದ್ದಿರುತ್ತಾರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಗಾಗಿ ದಾಖಲಿಸಲಾಗಿದೆ ಎಂದು ತಿಳಿಸಿರುತ್ತಾರೆ.
ಪತ್ನಿ ಲಕ್ಷ್ಮಿ ಘಟನೆ ನಡೆದ ಸ್ಥಳಕ್ಕೆ ತೆರಳಿದಾಗ ಪತಿ ಮಾತನಾಡುವ ಸ್ಥಿಯಲ್ಲಿರಲಿಲ್ಲ. ಈ ಬಗ್ಗೆ ಕೆಲಸಕ್ಕೆ ಕರೆದಿದ್ದ ಅಬ್ದುಲ್ ರಹೀಮ್ ಅವರನ್ನ ವಿಚಾರಿಸಿದಾಗ ಬೆಳಿಗ್ಗೆ ೮ ಗಂಟೆಯ ಸಮಯದಲ್ಲಿ ಮಂಜುನಾಥ್ ೪೦ ಅಡಿ ಎತ್ತರ ದಿಂದ ಕೆಲಸ ಮಾಡುವಾಗ ಕಾಲು ಜರಿ ಬಿದ್ದಿzನೆ ಎಂದು ತಿಳಿಸಿರುತ್ತಾರೆ.
ಮಂಜುನಾಥ್ ಅವರನ್ನು ಕೆಲಸಕ್ಕೆ ನಿಯೋಜಿಸಿದ್ದ ಸ್ಥಳದಲ್ಲಿ ಯಾವುದೇ ರೀತಿಯ ಸುರಕ್ಷತೆ ಇರಲಿಲ್ಲ ಎಂದು ದೂರುದಾರರು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.
ಆಯತಪ್ಪಿ ಬಿದ್ದ ಮಂಜುನಾಥ್ ಅವರ ಕೈ ಕಾಲು, ಮುಖದ ಮೂಳೆಗಳು ಮುರಿದಿದ್ದು ತಲೆಗೆ ತೀವ್ರತರನಾದ ಗಾಯಗಳಾಗಿತ್ತು. ಹೆಚ್ಚಿನ ಚಿಕಿತ್ಸೆ ಗಾಗಿ ಮಣಿಪಾಲ್‌ಗೆ ಸ್ಥಳಾಂತರಿಸಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಪೇಂಟರ್ ಸಾವು ಕಂಡಿzನೆ.
ಪತಿಯ ಜೀವಕ್ಕೆ ಸುರಕ್ಷತೆ ಒದಗಿಸದೆ ಅಪಾಯಕಾರಿ ಎತ್ತರ ದಿಂದ ಕೆಲಸ ಮಾಡಲು ಸೂಚಿಸಿ ಆತನ ಜೀವಕ್ಕೆ ಕುತ್ತು ಬರುವಂತೆ ಮಾಡಿರುವ ಆಸ್ಪತ್ರೆ, ಕಂಟ್ರ್ಯಾಕ್ಟರ್ ಹಾಗೂ ಕೆಲಸಕ್ಕೆ ಕರೆದಿದ್ದ ಅಬ್ದುಲ್ ರಹೀಂ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.