ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮಕ್ಕೆ ಸಿಇಓರಿಂದ ಚಾಲನೆ

namma-nade-mathagatte-kade

ಶಿವಮೊಗ್ಗ : ಲೋಕಸಭಾ ಚುನಾವಣೆ -೨೦೨೪ರ ಹಿನ್ನಲೆಯಲ್ಲಿ ಜಿ ಸ್ವೀಪ್ ಸಮಿತಿ ಹಾಗೂ ಮಹಾನಗರಪಾಲಿಕೆ ಶಿವಮೊಗ್ಗ ವತಿಯಿಂದ ಗರದ ಸೈನ್ಸ್ ಮೈದಾನದ ಮತಗಟ್ಟೆಯಲ್ಲಿ ಆಯೋಜಿಸಲಾಗಿದ್ದ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮವನ್ನು ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಮತಗಟ್ಟೆಗಳಲ್ಲಿ ಎ ರೀತಿಯ ಮೂಲಭೂತ ಸೌಕರ್ಯ ಗಳನ್ನು ಮತದಾರರಿಗೆ ಅನುಕೂಲ ಕ್ಕಾಗಿ ಕಲ್ಪಿಸಲಾಗಿದೆ. ಈ ಸೌಲಭ್ಯ ವನ್ನು ಎ ಮತದಾರರು ಸದುಪಯೋಗ ಪಡೆಸಿಕೊಂಡು ಮತದಾನದ ಹಬ್ಬದಲ್ಲಿ ಎಲ್ಲೂರು ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ಜಿ.ಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿಗಳು, ಸ್ವೀಪ್ ತರಬೇತುದಾರ ನವೀದ್ ಪರ್ವೇಜ್ ಹಾಜರಿದ್ದರು.