ಸೇವಾನ್ಯೂನ್ಯತೆ ಪರಿಗಣಿಸಿ ಪರಿಹಾರ ನೀಡಲು ಆಯೋಗದಿಂದ ಆದೇಶ
ಶಿವಮೊಗ್ಗ : ಅರ್ಜಿದಾರರಾದ ಅಫ್ತಾಬ್ ಅಹ್ಮದ್ ಎಂಬುವವರು ಇಫ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪನಿ, ಬೆಂಗಳೂರು ಮತ್ತು ಶಿವಮೊಗ್ಗ ಇವರ ವಿರುದ್ದ ಸೇವಾ ನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ವಿಮಾ ಪಾಲಿಸಿಯ ಮೆತ್ತ ಪಾವತಿಸುವಂತೆ ಎದುರುದಾರರಿಗೆ ಆದೇಶಿಸಿದೆ.
ಅರ್ಜಿದಾರರ ರೆನಾಲ್ಟ್ ಕ್ವಿಡ್ ಮೋಟಾರ್ ಕಾರ್ ಜ.೨೦, ೨೦೨೨ ರಂದು ಅಪಘಾತಕ್ಕೊಳಗಾಗಿ ಹಾನಿ ಯಾಗಿದ್ದು, ಈ ಸಂಬಂಧ ಇಫ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪೆನಿಯನ್ನು ಸಂಪರ್ಕಿಸಿ ರಿಪೇರಿ ಖರ್ಚು ರೂ. ೩,೯೨,೩೫೦/- ಗಳ ವಿಮಾ ಪರಿಹಾರ ಮೊತ್ತ ಸಂದಾಯ ಮಾಡುವಂತೆ ಕೋರಿರುತ್ತಾರೆ. ಆದರೆ ಕಂಪನಿಯವರು ನಿಗದಿತ ಅವಧಿಯೊಳಗೆ ಸೂಕ್ತ ದಾಖಲೆ ಗಳನ್ನು ಒದಗಿಸಿರುವುದಿಲ್ಲ ಹಾಗೂ ಇನ್ಸೂರೆನ್ಸ್ ಮೊತ್ತ ರೂ. ೩.೫೦ಲಕ್ಷಗಳು ಮಾತ್ರ ಆಗಿದೆ ಎಂಬ ಕಾರಣ ನೀಡಿ ಪರಿಹಾರ ಮೊತ್ತ ನೀಡಲು ನಿರಾಕರಿಸಿರುತ್ತಾರೆ.
ಆಯೋಗವು ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ, ಅರ್ಜಿದಾರರ ಸಾಕ್ಷ್ಯ ವಿಚಾರಣೆಯ ವಿವರ ಮತ್ತು ಹಾಜರುಪಡಿಸಲಾದ ದಾಖಲೆಗಳ ಆಧಾರದ ಮೇಲೆ ಅರ್ಜಿದಾರರ ವಾಹನವು ಸರ್ವಿಸ್ ಸೆಂಟರ್‌ನಲ್ಲಿ ರಿಪೇರಿಗೊಂಡಿಲ್ಲವಾದ್ದರಿಂದ ಬಿಲ್ಲುಗಳನ್ನು ಹಾಜರುಪಡಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪಾಲಿಸಿಯ ಷರತ್ತು ಮತ್ತು ನಿಬಂಧನೆಗಳ ಪ್ರಕಾರ ಅರ್ಜಿದಾರರ ಇನ್ಸೂರ್‍ಡ್ ಡಿಕ್ಲೇರ್‍ಡ್ ವ್ಯಾಲ್ಯೂ ರೂ. ೩.೫೦ ಲಕ್ಷಗಳನ್ನು ಪಡೆಯಲು ಅರ್ಹರಾಗಿರುತ್ತಾ ರೆಂದು ಪರಿಗಣಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ.
ಎದುರುದಾರು ಅರ್ಜಿ ದಾರರಿಗೆ ಪಾಲಿಸಿಗೆ ಅನುಗುಣ ವಾಗಿ ಬಸ್ ರಿಪ್ ಇನ್ಸೂರ್‍ಡ್ ಡಿಕ್ಲೇರ್‍ಡ್ ವ್ಯಾಲ್ಯೂ ರೂ. ೩.೫೦ ಲಕ್ಷಗಳನ್ನು ಶೇ.೯ ವಾರ್ಷಿಕ ಬಡ್ಡಿಯೊಂದಿಗೆ ಪಾವತಿಸುವುದು. ಹಾಗೂ ತಮ್ಮ ಸೇವಾ ನ್ಯೂನತೆ ಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರ ಹಾಗೂ ರೂ.೫೦,೦೦೦ಗಳನ್ನು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ರೂ. ೧೦,೦೦೦ಗಳನ್ನು ಈ ಆದೇಶ ವಾದ ೪೫ ದಿನಗಳೊಳಗಾಗಿ ಪಾವತಿಸಬೇಕೆಂದು ನಿರ್ದೇಶಿಸಿ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ, ಮಹಿಳಾ ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಏ.೩೦ ರಂದು ಆದೇಶಿಸಿದೆ.