ಆಮ್ ಆದ್ಮಿ ಪಕ್ಷದಿಂದ ಮಾತ್ರ ಆರೋಗ್ಯದೊಂದಿಗೆ ಉಚಿತ ಶಿಕ್ಷಣ ನೀಡಲು ಸಾಧ್ಯ…
ಶಿಕಾರಿಪುರ: ಭ್ರಷ್ಟಾಚಾರದ ಸಂಪೂರ್ಣ ನಿರ್ಮೂಲನೆ ಆಮ್ ಆದ್ಮಿ ಪಕ್ಷದ ಧ್ಯೇಯವಾಗಿದ್ದು ಇದರೊಂದಿಗೆ ಜನತೆಗೆ ಆರೋಗ್ಯ ಶಿಕ್ಷಣ ಸಹಿತ ಎಲ್ಲ ಮೂಲ ಸೌಕರ್ಯ ಉಚಿತವಾಗಿ ಕಲ್ಪಿಸುವ ಬಹು ಉನ್ನತ ಗುರಿಯನ್ನು ಹೊಂದಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕಿರಣ್‌ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಆಮ್ ಆದ್ಮಿ ಪಕ್ಷ ಅತ್ಯಂತ ವಿಶಿಷ್ಟವಾಗಿದ್ದು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯನ್ನು ಸಂಪೂರ್ಣ ಈಡೇರಿಸುವ ಏಕೈಕ ಪಕ್ಷ ಎಂಬ ಹೆಗ್ಗಳಿಕೆಯನ್ನು ಹೊಂದಿದೆ ಎಂದರು.
ದೆಹಲಿ ಮತ್ತು ಪಂಜಾಬ್ ರಾಜ್ಯದಲ್ಲಿ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಿದ ಆಶ್ವಾಸನೆ ಯನ್ನು ಬಹುತೇಕ ಈಡೇರಿಸಿದ್ದು ಈ ದಿಸೆಯಲ್ಲಿ ಮತದಾರರ ವಿಶ್ವಾಸ ವನ್ನು ಗಳಿಸಿದೆ ಎಂದ ಅವರು, ಪಕ್ಷದ ಚುನಾವಣಾ ಪ್ರಣಾಳಿಕೆ ಯನ್ನು ಕೇಂದ್ರ ಸಮಿತಿ ನಿಧರಿಸದೆ ರಾಜ್ಯ ಮುಖಂಡರು ಸ್ಥಳೀಯ ಸಮಸ್ಯೆಗಳನ್ನು ಕೇಂದ್ರೀಕರಿಸಿ ಕೊಂಡು ಸೂಕ್ತ ಪರಿಹಾರವನ್ನು ರೂಪಿಸಿ ಸಿದ್ದಪಡಿಸಲಿದ್ದಾರೆ ಜನಸಾಮಾನ್ಯರು, ಮಕ್ಕಳು, ಯುವ ಪೀಳಿಗೆ, ಮಹಿಳೆಯರು, ವೃದ್ದರ ಸಹಿತ ಎಲ್ಲ ವರ್ಗದ ಕಾರ್ಮಿಕರ ಹಿತವನ್ನು ಗಮನದಲ್ಲಿ ರಿಸಿಕೊಂಡು ಪ್ರಣಾಳಿಕೆ ಸಿದ್ದಪಡಿಸ ಲಾಗುವುದು ಎಂದರಲ್ಲದೇ, ಈ ದಿಸೆಯಲ್ಲಿ ದೆಹಲಿಯಲ್ಲಿ ನೀಡಲಾದ ಭರವಸೆಯನ್ವಯ ಆರೋಗ್ಯ ಶಿಕ್ಷಣ ಸಹಿತ ಮೂಲಸೌಕರ್ಯವನ್ನು ಉಚಿತವಾಗಿ ನೀಡಲಾಗುತ್ತಿದ್ದು ಭ್ರಷ್ಟಾಚಾರದ ಸಂಪೂರ್ಣ ನಿರ್ಮೂಲನೆ ಪಕ್ಷದ ಧ್ಯೇಯ ವಾಗಿದೆ ಈ ಹಿನ್ನಲೆಯಲ್ಲಿ ಬಲಿಷ್ಠ ದೇಶ ನಿರ್ಮಾಣಕ್ಕಾಗಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದರು.
ಶಿಕಾರಿಪುರ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ಚಂದ್ರಕಾಂತ್ ರೇವಣ್‌ಕರ್ ಪಕ್ಷದ ಅಭ್ಯರ್ಥಿ ಯಾಗಿ ಸ್ಪರ್ಧಿಸಲಿದ್ದು ಅತ್ಯಧಿಕ ಮತಗಳ ಅಂತರದಿಂದ ಜಯಗಳಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಅಭ್ಯರ್ಥಿ ಚಂದ್ರಕಾಂತ್ ರೇವಣಕರ್ ಮಾತನಾಡಿ, ಆಮ್ ಆದ್ಮಿ ಪಕ್ಷ ಇದೀಗ ರಾಷ್ಟ್ರೀಯ ಪಕ್ಷವಾಗಿ ಚುನಾವಣಾ ಆಯೋಗ ದಿಂದ ಮಾನ್ಯತೆ ಪಡೆದಿದ್ದು ರಾಜ್ಯದ ೨೨೪ ಕ್ಷೇತ್ರಗಳಲ್ಲಿ ೧೬೮ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಪೂರ್ಣ ಗೊಂಡಿದೆ ಭ್ರಷ್ಟಾಚಾರ ನಿರ್ಮೂಲನೆ ಪಕ್ಷದ ಪ್ರಮುಖ ಆದ್ಯತೆಯಾಗಿದ್ದು ಪ್ರಾಮಾಣಿಕ ಜನಸಾಮಾನ್ಯ ವ್ಯಕ್ತಿಯನ್ನು ಕಣಕ್ಕಿಳಿಸಿ ಗೆಲ್ಲಿಸುವ ಪಕ್ಷ ಎಂಬ ಹೆಗ್ಗಳಿಕೆಯನ್ನು ಹೊಂದಿದೆ ಪಂಜಾಬ್‌ನಲ್ಲಿ ಮುಖ್ಯಮಂತ್ರಿ ವಿರುದ್ದ ಸ್ಪರ್ದಿಸಿದ್ದ ಬೀಡಾ ಅಂಗಡಿ ಮಾಲಿಕ ಜಯಗಳಿಸಿ ಚರಿತ್ರೆ ನಿರ್ಮಿಸಿದ್ದಾನೆ. ಮತದಾರರು ಭ್ರಷ್ಟಾಚಾರ ನಿರ್ಮೂಲನೆಗಾಗಿ ಆಮ್ ಆದ್ಮಿ ಪಕ್ಷ ಬೆಂಬಲಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಮುಖಂಡ ಲಕ್ಷ್ಮೀಶ, ತಾಲೂಕು ಮುಖಂಡ ಶೇಖರ್ ನಾಯ್ಕ, ಅಕ್ಬರ್‌ಅಲಿ, ಉಮೇಶಪ್ಪ, ರಮೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.