ಗಣೇಶೋತ್ಸವದ ನಿಮಿತ್ತ ಹಿಂಡ್ಲೆಮನೆಯಲ್ಲಿ ಸೆ.೧೯ರ ಇಂದು ರಾತ್ರಿ ಬಳೆ ಕೋಲಾಟ…

ರಿಪ್ಪನ್‌ಪೇಟೆ : ರಾತ್ರಿಯಿಡೀ ನಡೆಯುವ ಮಲೆನಾಡಿನ ಸುಪ್ರಸಿದ್ಧ ವೈವಿಧ್ಯಮಯ ಜನಪದ ಕಲೆಗಳಂದಾದ ನೃತ್ಯ ಹಾಗು ಹಾಡುಗಾರಿಕೆ ವಿಶಿಷ್ಟ ಲಯದಿಂದ ಆಕರ್ಷಣೀಯವಾಗಿರುವ ಬಳೆ ಕೋಲಾಟ ಕಾರ್ಯಕ್ರಮವನ್ನು ೪೦ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಕೋಡೂರು ಗ್ರಾಪಂ ವ್ಯಾಪ್ತಿಯ ಹಿಂಡ್ಲೆಮನೆಯಲ್ಲಿ ಆಯೋಜಿಸಲಾಗಿದೆ ಎಂದು ಶ್ರೀ ಸಿದ್ದಿವಿನಾಯಕ ಯುವಕ ಸಂಘ ಹಿಂಡ್ಲೆಮನೆ ಇದರ ಪದಾಧಿಕಾರಿಗಳು ತಿಳಿಸಿzರೆ.
ಸೆ.೧೯ರ ಇಂದು ರಾತ್ರಿ ೯:೩೦ ರಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪ್ರಾರಂಭವಾಗುವ ಈ ಕಾರ್ಯಕ್ರಮಕ್ಕೆ ಸಾಗರ ತಾಲೂಕಿನ ಹೆಗ್ಗೋಡಿನ ಶ್ರೀ ಭೂತೇಶ್ವರ ಕಲಾ ಬಳಗ ಮತ್ತು ಹೊಸನಗರ ತಾಲೂಕಿನ ಕೆದ್ದಲುಗುಡ್ಡೆ ಶ್ರೀ ಶನೇಶ್ವರ ಕಲಾ ಸಂಘ ತಂಡಗಳು ಭಾಗವಹಿಸುತ್ತಿವೆ ಎಂದು ತಿಳಿಸಿದ ಅವರು, ಪ್ರಥಮ ಬಹುಮಾನ ವಾಗಿ ೧೬ ಸಾವಿರ ರೂ. ಹಾಗೂ ಬೆಳ್ಳಿ ಬಳೆ ಮತ್ತು ದ್ವಿತೀಯ ಬಹು ಮಾನ ೧೫ ಸಾವಿರ ರೂ. ನಗದನ್ನು ನೀಡಲಾಗುವುದು ಎಂದು ತಿಳಿಸಿzರೆ.
ಇನ್ನೂ ಭಾಗವಹಿಸುವ ಕಲಾ ತಂಡಗಳಿಗೆ ಮತ್ತು ಸಾರ್ವಜನಿಕರಿಗೆ ರಾತ್ರಿ ಊಟದ ವ್ಯವಸ್ಥೆ ಇರಲಿದ್ದು ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಈ ಮೂಲಕ ಕೋರಿzರೆ.
ಸಮಿತಿಯ ಅಧ್ಯಕ್ಷ ಹೆಚ್.ಈ. ಟೀಕಪ್ಪ, ಉಪಾಧ್ಯಕ್ಷ ಉದಯ ಕೆ.ಸಿ., ಖಜಂಚಿ ಶ್ರೀನಿವಾಸ ಹೆಚ್.ಜಿ., ಕಾರ್ಯದರ್ಶಿ ಗುರು ಹೆಚ್.ವೈ., ಸಹ ಕಾರ್ಯದರ್ಶಿ ನಾಗರಾಜ ಹೆಚ್.ಎಲ್., ಸಂಚಾಲಕರಾದ ಪುರುಷೋತ್ತಮ್ ಹೆಚ್.ಎನ್. ಮತ್ತು ಸಮಿತಿಯ ಇನ್ನಿತರ ಪದಾಧಿಕಾರಿಗಳು ಇದ್ದರು.