ರಸ್ತೆ ಸಂಚಾರಿ ನಿಯಮ ಪಾಲನೆ ಆಗತ್ಯ

ಶಿವಮೊಗ್ಗ.೧೫.ಶಿವಮೊಗ್ಗ ನಗರದ ಜೆಸಿಐ ಶಿವಮೊಗ್ಗ ವಿವೇಕ್ ಹಾಗೂ ಜಿ ಕಾನೂನು ಸೇವೆಗಳ ಪ್ರಾಧಿಕಾರ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಶಿವ ಮೊಗ್ಗ ನಗರದ ದುರ್ಗಿಗುಡಿ ಪ್ರೌಢಶಾಲೆಯಲ್ಲಿ ಮಕ್ಕಳ ಕಾನೂ ನು ಅರಿವು ಮಾಹಿತಿ ಶಿಬಿರ ನಡೆಯಿತು.
ಶಿವಮೊಗ್ಗ ಜಿ ನ್ಯಾಯಾಧೀಶರು ಹಾಗೂ ಜಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎನ್. ಚಂದನ್ ಕಾರ್ಯಕ್ರಮವನ್ನು ಉದ್ಟಾಟಿಸಿ, ೧೮ ವರ್ಷಕ್ಕಿಂತ ಮಕ್ಕಳ ಮೊದಲೇ ದ್ವಿಚಕ್ರ ವಾಹನ ಚಲಾಯಿಸಿ ಅಪಘಾತ ಉಂಟಾದಾಗ ಆಗುವ ಗಂಭೀರ ಸಮಸ್ಯೆಗಳು,ಪೋಷಕರ ನಿರ್ಲಕ್ಷದಿಂದ ಮಕ್ಕಳು ಎಸಗುವ ತಪ್ಪುಗಳು, ರಸ್ತೆ ಸಂಚಾರಿ ನಿಯ ಮಗಳ ಪಾಲನೆಗಳ ಬಗ್ಗೆ ವಿಸ್ತ್ರತ ವಾಗಿ ಅರಿವು ಮೂಡಿಸಿದರು.
ಜಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರೇಖಾ ಜಿ.ಎಂ. ಮಾತನಾಡಿ ಮಕ್ಕಳ ಮೇಲೇ ಎಸಗುವ ವಿವಿಧ ದೌರ್ಜನ್ಯಗಳ ಹಾಗೂ ಈ ಬಗ್ಗೆ ಕಾನೂನಿನ ರಕ್ಷಣೆ ಮತ್ತು ಸಹಕಾರದ ಬಗ್ಗೆ ಕಾನೂನಿನ ರಕ್ಷಣೆ ಮತ್ತು ಸಹಕಾರದ ಬಗ್ಗೆ ತಿಳಿಸಿ ದುಶ್ಚಟ ದುರಭ್ಯಾಸಗಳಿಂದ ಮಕ್ಕಳು ದೂರವಿರುವಲ್ಲಿ ಪೋಷ ಕರ ಪಾತ್ರ ಅತ್ಯಂತ ಪ್ರಾಮುಖ್ಯ ವೆಂದರು.ಜೇಸಿಐ ಶಿವಮೊಗ್ಗ ವಿವೇಕ್ ಅಧ್ಯಕ್ಷ ಶ್ರೀಧರ್‌ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಜೇಸಿ ಮಹಿಳಾ ವಿಭಾಗದ ಅಧ್ಯಕ್ಷರಾದ ಪವಿತ್ರಾಹೆಗ್ಡೆ, ಜೇಸಿಐ ವಿವೇಕ್‌ನ ಕಾರ್ಯಕ್ರಮದ ವಿಭಾಗದ ಉಪಾಧ್ಯಕ್ಷರಾದ ಶ್ವೇತಾ ಸಚಿನ್, ಶಾಲಾ ಪ್ರಭಾರ ಮುಖ್ಯೋಪಾದ್ಯಾಯ ಹುಸೇನ್, ಶಿಕ್ಷಕರಾದ ದ್ರಾಕ್ಷಾಯಿಣಿ, ಮಾಹಾದೇವಿ, ಅದ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಲೂ ಉಪಸ್ಥಿತರಿದ್ದರು.