ಎನ್ಎಸ್ಎಸ್ ವ್ಯಕ್ತಿತ್ವ ವಿಕಸನಕ್ಕೆ ದಾರಿ: ಡಾ|ಗಂಗಾಧರಪ್ಪ
ಹರಿಹರ: ವ್ಯಕ್ತಿತ್ವ ವಿಕಸನದ ಮೂಲ ಉದ್ದೇಶದೊಂದಿಗೆ ರಾಷ್ಟ್ರೀಯ ಸೇವಾ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಪ್ರಾಚಾರ್ಯ ಡಾ.ಗಂಗಾಧರಪ್ಪ ಹೇಳಿದರು.
ನಗರದ ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಮಹಾ ವಿದ್ಯಾಲಯದಲ್ಲಿ ಎನ್.ಎಸ್. ಎಸ್. ಘಟಕಗಳು ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ೫೩ನೇ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎನ್.ಎಸ್.ಎಸ್. ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತು, ದೇಶಭಕ್ತಿ, ರಾಷ್ಟ್ರೀಯ ಪ್ರeಯನ್ನು ಮೂಡಿಸು ವುದು. ವಿದ್ಯಾರ್ಥಿಗಳಲ್ಲಿ ಕ್ರಿಯಾತ್ಮಕ ಚಟುವಟಿಕೆಗಳನ್ನು ಬೆಳೆಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗುತ್ತದೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆಯ ಮೊದಲ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ.ರೋಹಿಣಿ ಎಂ.ಶಿರಹಟ್ಟಿ ಮಾತನಾಡಿ, ರಾಷ್ಟ್ರದ ಅತಿದೊಡ್ಡ ಯುವ ಸಂಘಟನೆಯಾಗಿರುವ ಎನ್.ಎಸ್.ಎಸ್. ವಿಸ್ತಾರವಾಗಿ ಬೆಳೆದಿದೆ. ನಮ್ಮ ಮಹಾ ವಿದ್ಯಾಲಯದ ಎನ್.ಎಸ್.ಎಸ್. ಸ್ವಯಂಸೇವಕರು ರಾಜ್ಯಮಟ್ಟದಲ್ಲಿನ ಶಿಬಿರಗಳಲ್ಲಿ ಭಾಗವಹಿಸಿ ಕೀರ್ತಿ ತಂದಿzರೆ ಎಂದು ಹೇಳಿದ ಅವರು ಈ ಹಿಂದಿನ ಎನ್.ಎಸ್.ಎಸ್. ಸಂಯೋಜನಾಧಿಕಾರಿಗಳಾಗಿದ್ದ ಮಂಜುನಾಥ ಅವರನ್ನು ಸ್ಮರಿಸಿದರು. ವಿದ್ಯಾರ್ಥಿಗಳಿಗೆ ಸರ್ವ ರೀತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಎನ್.ಎಸ್.ಎಸ್.ನ ಎರಡನೆಯ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಹೆಚ್.ಎಂ.ಗುರುಬಸವರಾಜಯ್ಯ ಮಾತನಾಡಿ, ಮಹಾತ್ಮ ಗಾಂಧೀಜಿ ಯವರ ಕನಸಿನ ಕಲ್ಪನೆಯ ಕೂಸಾದ ರಾಮರಾಜ್ಯದ ಆಶಯದೊಂದಿಗೆ ಗಾಂಧೀಜಿಯವರ ಜನ್ಮ ದಿನೋತ್ಸವದ ೧೦೦ನೇ ವರ್ಷದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯನ್ನು ಪ್ರಾರಂಭಿಸಲಾಯಿತು. ದೇಶದಲ್ಲಿ ೩೫ ಲಕ್ಷ ವಿದ್ಯಾರ್ಥಿಗಳು ಎನ್.ಎಸ್.ಎಸ್. ಸ್ವಯಂ ಸೇವಕ ರಿzರೆ. ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ಸೇವಾ ಮನೋಭಾವನೆಯ ಧರ್ಮ ಎನ್.ಎಸ್.ಎಸ್. ಒಳಗೊಂಡಿದೆ ಎಂದು ಹೇಳಿದರು.
ರಾಜ್ಯಶಾಸ್ತ್ರ ಉಪನ್ಯಾಸಕ ಹರೀಶ್ ಮಾತನಾಡಿ, ಒಬ್ಬ ವ್ಯಕ್ತಿಯಾಗಿ ಸಮಾಜಕ್ಕೆ ಯಾವ ರೀತಿಯ ಕೊಡುಗೆಯನ್ನು ಕೊಡಬೇಕು ಎಂಬುದನ್ನು ನಮಗೆ ಈ ಎನ್ಎಸ್ಎಸ್ ಯೋಜನೆ ಕಲಿಸುತ್ತದೆ ಎಂದು ಹೇಳಿದರು.
ಸಮಾಜಶಾಸ್ತ್ರ ಉಪನ್ಯಾಸಕ ಜಿ.ಪ್ರವೀಣ್ ಮಾತನಾಡಿ, ಪರಿಸರ ಕಾಳಜಿ ಹಾಗೂ ರಾಷ್ಟ್ರೀಯ ಭಾವೈಕ್ಯತೆಯನ್ನು ಎನ್ಎಸ್ಎಸ್ ಯೋಜನೆ ನಮಗೆ ತಿಳಿಸುತ್ತದೆ ಎಂದರು. ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಮಾಧುರಿ ಪಿ.ಎಚ್, ಪ್ರಿಯಾಂಕ, ಸೌಜನ್ಯ, ಕೃತಿಕಾ, ಎಚ್.ಎಂ.ಭಾರ್ಗವಿ, ಲಾವಣ್ಯ, ತೇಜಸ್ವಿನಿ ಸ್ವಯಂ ಸೇವಕರು ದಾವಣಗೆರೆ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ವಿದ್ಯಾನಿಲಯ ಮಟ್ಟದ ಅಂತರ ಕಾಲೇಜುಗಳ ನಾಯಕತ್ವ ಶಿಬಿರದಲ್ಲಿ ಭಾಗವಹಿಸಿದ್ದು, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕುಮಾರಿ ಮಾಧುರಿ ಪಿ.ಎಚ್ ಹಾಗೂ ವೀಣಾ ಪ್ರಾರ್ಥಿಸಿದರು. ತೃಪ್ತಿ ಖಿರೋಜಿ ಸ್ವಾಗತಿಸಿದರು. ಖಾತುನ್ ಬಿ ಹೆಚ್ ಲೋಹಾರ್ ಕಾರ್ಯಕ್ರಮ ನಿರ್ವಹಿಸಿದರು. ಅನುಷಾ ಸಿ,ಆರ್. ವಂದಿಸಿದರು.