ನ.೩೦: ಕನಕದಾಸರ ಜಯಂತಿ ಆಚರಣೆ
ಶಿವಮೊಗ್ಗ: ಜಿ ಕುರುಬರ ಸಂಘ, ಜಿಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯ ದಲ್ಲಿ ನ.೩೦ರಂದು ಬೆಳಿಗ್ಗೆ ೧೧ ಗಂಟೆಗೆ ಕುವೆಂಪು ರಂಗಮಂದಿರ ದಲ್ಲಿ ವಿಶ್ವ ಮಾನವ ಶ್ರೀ ಕನಕ ದಾಸರ ಜಯಂತಿಯನ್ನು ಆಚರಿ ಸಲಾಗುವುದು ಎಂದು ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ವಿಧಾನ ಪರಿ?ತ್ ಸದಸ್ಯ ಆರ್.ಪ್ರಸನ್ನಕುಮಾರ್ ಹೇಳಿದರು.
ಅವರು ಇಂದು ಹೋಟೆಲ್ ಮಥುರಾ ಪ್ಯಾರಡೈಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಕನ್ನಕದಾಸರು ಈ ನಾಡಿನ ಅತ್ಯಂತ ಶ್ರೇಷ ದಾಸ ಪರಂಪರೆ ಯನ್ನು ಹೊಂದಿದ್ದವರು. ಭಕ್ತಿ ಪಂಥದ ಮೂಲಕ ಮತ್ತು ಸಾಹಿತ್ಯದ ಮೂಲಕ ಸಮಾಜದ ಕಣ್ಣು ತೆರೆಸಿದವರು. ಅವರ ಕೃತಿಗಳು ಇಂದಿಗೂ ವರ್ತಮಾನ ತಲ್ಲಣಗಳನ್ನು ಹೇಳುತ್ತದೆ. ಅವರು ಸಮಾಜ ಸುಧಾರಕರು ಹೌದು. ಅವರು ಕೇವಲ ಒಂದು ಜತಿಗೆ ಸಿಮೀತವಾಗಿಲ್ಲ. ಎ ವರ್ಗದ ಶೋಷಿತರ ಪರವಾಗಿ ಧ್ವನಿ ಎತ್ತಿದ ವರು. ಇಂತಹವರ ಜಯಂತಿ ಯನ್ನು ಸರ್ಕಾರದ ಸಹಕಾರದಲ್ಲಿ ಆಚರಿಸಲಾಗುತ್ತಿದೆ ಎಂದರು.
ಅಂದು ಬೆಳಿಗ್ಗೆ ೧೧ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯ ಲಿದೆ. ಅದಕ್ಕೂ ಮುಂಚೆ ೯.೩೦ಕ್ಕೆ ಶಿವಪ್ಪನಾಯಕ ಪ್ರತಿಮೆಯಿಂದ ಮೆರವಣಿಗೆ ಆಯೋಜಿಸಲಾಗಿದೆ. ಈ ಮೆರವಣಿಗೆಯಲ್ಲಿ ಕಲಾ ತಂಡಗಳು, ಸಮಾಜದ ಗಣ್ಯರು ಭಾಗವಹಿಸಲಿzರೆ. ಸಾರ್ವಜನಿ ಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ ಬೇಕು ಎಂದರು.
ಕಾರ್ಯಕ್ರಮವನ್ನು ಜಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು, ವಿಶೇಷ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್, ಸಂಸದ ಬಿ.ವೈ. ರಾಘವೇಂದ್ರ ಹಾಗೂ ಜಿಯ ಎ ಶಾಸಕರು ಭಾಗವಹಿಸ ಲಿzರೆ. ಶಿವಮೊಗ್ಗ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿzರೆ ಹಾಗೂ ನಿವೃತ ಕನ್ನಡ ಉಪನ್ಯಾಸಕ ಕೆ.ಭಾಸ್ಕರ್ ವಿಶೇಷ ಉಪನ್ಯಾಸ ನೀಡಲಿzರೆ ಎಂದ ಅವರು, ಕಾರ್ಯಕ್ರಮದ ನಂತರ ಕನಕದಾಸರ ಜೀವನ ಚರಿತ್ರೆ ಕುರಿತು ದತ್ತಮೂರ್ತಿ ಭಟ್ ತಂಡದಿಂದ ಯಕ್ಷಗಾನ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕುರುಬ ಸಂಘದ ಪದಾಧಿಕಾರಿಗಳಾದ ಎಸ್.ಕೆ.ಮರಿಯಪ್ಪ, ಕೆ.ರಂಗನಾಥ್, ಪಾಲಾಕ್ಷಿ, ಮಾಲತೇಶ್, ಇಕ್ಕೇರಿ ರಮೇಶ್, ಶರತ್ ಮರಿಯಪ್ಪ, ರಾಮಕೃ?, ಮೋಹನ್, ಲೋಕೇಶ್, ರಾಘವೇಂದ್ರ ಸೇರಿದಂತೆ ಹಲವರಿದ್ದರು.