ಎಷ್ಟೇ ಸಾಧನೆ ಕೆಲಸವನ್ನು ಮಾಡಿದರೂ ಇನ್ನಷ್ಟು ಹೆಚ್ಚು ಮಾಡುವ ಅಭಿಲಾಷೆ ಹಾಗು ಗುರಿಯೊಂದಿಗೆ ಮುನ್ನಡೆಯಿರಿ…

ಭದ್ರಾವತಿ:ಯಾವುದೇ ಕೆಲಸ ಸಾಧನೆಗಳಿರಲಿ ಅದರಲ್ಲಿ ಯಾವು ದೆ ಕಾರಣಕ್ಕೂ ತೃಪ್ತಿಯನ್ನು ಹೊಂ ದಬಾರದು. ಎಷ್ಟೇ ಸಾಧನೆ ಕೆಲಸ ವನ್ನು ಮಾಡಿದರೂ ಇನ್ನಷ್ಟು ಹೆಚ್ಚು ಮಾಡುವ ಅಭಿಲಾಷೆ ಹಾಗು ಗುರಿಯನ್ನು ಹೊಂದ ಬೇಕು. ಇಲ್ಲದಿದ್ದರೆ ಅಲ್ಲಿಗೆ ನಮ್ಮ ಸಾಧನೆ ಕೊನೆಯಾಗುತ್ತದೆ. ಆದರೆ ಊಟದಲ್ಲಿ ಮಾತ್ರ ತೃಪ್ತಿಯನ್ನು ಹೊಂದಬೇಕು ಎಂದು ಶಿವಭದ್ರ ಟ್ರಸ್ಟ್ ನ ಆಧ್ಯಕ್ಷ ಡಾ.ಟಿ.ನರೇಂದ್ರ ಭಟ್ ತಿಳಿಸಿದರು.
ಅವರು ಇಲ್ಲಿಯ ನ್ಯೂಟೌನ್ ನಲ್ಲಿರುವ ಶಿವಭದ್ರ ಟ್ರಸ್ಟ್ ನ ಆಶ್ರ ಯದಲ್ಲಿ ನಡೆಸುತ್ತಿರುವ ತರಂಗ ಕಿವುಡ ಹಾಗು ಮೂಗರ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ೧೦ ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳ ಸನ್ಮಾನ ಸಮಾರಂ ಭದ ಅಧ್ಯಕ್ಷತೆ ವಹಿಸಿ ಮಾತನಾ ಡಿದರು.


ಸಮಾಜದಲ್ಲಿ ಮಾಮೂಲಿ ಮಕ್ಕಳ ಸಾಧನೆ ಬೇರೆ ಆದರೆ ವಿಕಲಚೇತನರ ಸಾಧನೆ ಬೇರೆ ಬೇರೆ. ಇವರುಗಳ ಜನನ ಸಮಯ ದಲ್ಲಿ ಪಂಚೇದ್ರಿಯಗಳಲ್ಲಿ ತೊಂ ದರೆ ಇದ್ದರೂ ಅವರ eನದಲ್ಲಿ ಭಗವಂತ ವಿಶೇಷ ಶಕ್ತಿಯನ್ನು ಕೊಟ್ಟಿರುತ್ತಾರೆ. ಆ ಮೂಲಕ ಅವ ರಲ್ಲಿನ ಕೊರತೆಯನ್ನು ತುಂಬಿರು ತ್ತಾನೆ. ಅಂತಹವರ ಸಾಧನೆಯನ್ನು ನೋಡಿ ಅವರನ್ನು ಪ್ರೋತ್ಸಾಹಿಸ ಬೇಕು. ಆವರುಗಳು ಸಹ ಎ ಮಕ್ಕಳಂತೆ ತಮ್ಮ ಜೀವನದಲ್ಲಿ ಮುಂದೆ ಬಂದು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
೧೦ ನೇ ತರಗತಿಯಲ್ಲಿ ಉನ್ನತ ದರ್ಜೆಯಲ್ಲಿ ಪಾಸಾದ ವಿಧ್ಯಾರ್ಥಿ ಗಳ ಭವಿಷ್ಯದ ಬಗ್ಗೆ ಟ್ರಸ್ಟ್ ಹೊಸ ಕೌಶಾಲ್ಯಾಧಾರಿತ ಶಿಕ್ಷಣವನ್ನು ಪ್ರಾರಂಭಿಸುವ ಯೋಜನೆಯನ್ನು ಹೊಂದಿದೆ. ಅದಕ್ಕೆ ತಕ್ಕಂತೆ ಕೆಲ ಪ್ರಯತ್ನಗಳನ್ನು ಮಾಡಲಾಗು ತ್ತಿದೆ. ಆದರೆ ಸರ್ಕಾರದ ಶಿಕ್ಷಣದ ಹೊಸ ನೀತಿಯ ಯೋಜನೆಯ ಪರಿಣಾಮ ನಿಧಾನವಾಗುತ್ತಿದೆ. ಆದರೆ ನಂತರವಾದರೂ ಅದನ್ನು ಪ್ರಾರಂಭಿಸಬೇಕು ಎಂಬ ಉದ್ದೇಶ ಇದೆ. ಇದಕ್ಕೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳವರು ಸಂಸ್ಥೆಗೆ ತಮ್ಮ ಸಂಸ್ಥೆವತಿಯಿಂದ ಸಂಪೂರ್ಣವಾದ ಸಹಾಯ ಸಹಕಾರದ ಭರವಸೆ ನೀಡಿzರೆ ಎಂದು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ಮಕ್ಕಳ ತಮ್ಮ ಶೈಕ್ಷಣಿಕ ವಿಧ್ಯಾಭ್ಯಾಸದ ಮುಗಿಸಿ ಇಲ್ಲಿಂದ ಹೋದ ನಂತರವೂ ಅವರ ಜೀವ ನಕ್ಕೆ ಬೇಕಾದ ಸಹಕಾರ ಸಹಾಯ ವನ್ನು ಮಾಡುವ ಉದ್ದೇಶವನ್ನು ಹೊಂದಿದ್ದೇವೆ ಎಂದರು. ಅದಕ್ಕಾಗಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರುಗಳು ಸಂಸ್ಥೆಯೊಡನೆ ನಿತ್ಯ ತಮ್ಮ ಸಂಪರ್ಕವನ್ನು ಹೊಂದಿ ರಬೇಕು ಎಂದು ಮನವಿ ಮಾಡಿ ದರು.
ಉಪಾಧ್ಯಕ್ಷ ಅನಂತಕೃಷ್ಣ ನಾಯಕ್ ಮಾತನಾಡಿ ಸಂಸ್ಥೆಯ ವಿಧ್ಯಾರ್ಥಿಗಳು ಕೇವಲ ಶಾಲಾ ಶೈಕ್ಷಣಿಕ ಪಠ್ಯಗಳಲ್ಲಿ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಹ ಉತ್ತಮ ಸಾಧನೆ ಮಾಡಿರು ವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದರ ಜೋತೆಯಲ್ಲಿ ತಮ್ಮಲ್ಲಿರುವ ಕೀಳೀರಿಮೆಯನ್ನು ಸಂಕೋಚ ವನ್ನು ತೊಲಗಿಸಿ ನಿಮ್ಮಗಳ ಗುರಿ ಯನ್ನು ಮುಟ್ಟುವ ಬಗ್ಗೆ ಗಮನ ಕೋಡಿ ಎಂದು ಕಿವಿ ಮಾತು ಹೇಳಿ ದರು.


ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಜಗ ದೀಶ್ ಮಾತನಾಡಿ ಕುಟುಂಬದ ಪ್ರತಿಯೊಂದು ಮಗುವು ಸಮಾಜಕ್ಕೆ ಏನಾದರೂ ಉತ್ತಮವಾದ ಕೊಡು ಗೆಯನ್ನು ನೀಡುವಂತೆ ಭಗವಂತ ಸೃಷ್ಟಿ ಮಾಡಿzನೆ. ಇಂತಹ ಮಕ್ಕ ಳ ಭವಿಷ್ಯದ ಬಗ್ಗೆ ಚುಂಚನಗಿರಿ ಸ್ವಾಮಿಗಳವರು ವಿಶೇಷ ಆಸಕ್ತಿ ಯನ್ನು ಹೊಂದಿದ್ದು ಇದನ್ನು ಅಭಿ ವೃಧ್ಧಿ ಮಾಡುವ ಬಗ್ಗೆ ಯೋಜನೆ ಯನ್ನು ಹೊಂದಿzರೆ. ಇದನ್ನು ಹಂತ ಹಂತವಾಗಿ ಅನುಷ್ಠಾನ ಮಾಡಲಾಗುವುದು ಎಂದರು.
೧೦ ನೇ ತರಗತಿ ಪರೀಕ್ಷೆಯಲ್ಲಿ ಸಂಸ್ಥೆಯ ವಿಧ್ಯಾರ್ಥಿಗಳಾದ ಶಿಕಾರಿ ಪುರ ತಾಲ್ಲೂಕಿನ ಕಲ್ಪನಹಳ್ಳಿಯ ಆರ್.ತೇಜಸ್ ೬೭%, ಬಿಸಲಮ ನೆಯ ಮಸ್ಕಾನ್ ೬೭%, ಆನವೇರಿ ಹೋಬಳಿ ಇಟ್ಟಿಗೆಹಳ್ಳಿಯ ವಿ. ಗಣೇಶ್ ೬೬%, ತರೀಕೆರೆ ತಾಲ್ಲೂ ಕು ಗುಳ್ಳದಮನೆಯ ಜಿ.ಕೆ.ದರ್ಶ ನ್ ೬೪%, ಭದ್ರಾವತಿ ತಾಲ್ಲೂಕಿನ ತಡಸ ಗ್ರಾಮದ ಸಾಧಿಕ್ ೬೩%, ಶಿವಮೊಗ್ಗದ ಸುಹಾನ್ ೬೨% ಅಂಕಗಳನ್ನು ಪಡೆದು ಎಲ್ಲರೂ ಪ್ರಥಮ ದರ್ಜೇಯಲ್ಲಿ ಪಾಸಾಗಿ ದ್ದು, ಇವರುಗಳಿಗೆ ಸಮಾರಂಭ ದಲ್ಲಿ ನಗದು ಹಣ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌವಿಸಲಾಯಿತು. ಶಾಲೆಯ ಈ ಸಾಧನೆಯು ಶಿವ ಮೊಗ್ಗ ಜಿಯಲ್ಲಿ ಪ್ರಥಮ ವಾಗಿದೆ.
ನಿರ್ದೇಶಕರುಗಳಾದ ಡಾ.ವೃಂ ದಾ ಭಟ್, ನಿತ್ಯಾನಂದ ಪೈ, ಡಾ. ಜಿ,ಎಂ.ನಟರಾಜ್, ಕಾರ್ಯ ದರ್ಶಿ ಎಸ್.ಎನ್.ಸುಭಾಷ್, ಮಲ್ಲಿಕಾರ್ಜುನ್, ಮುಖ್ಯೋ ಪಾಧ್ಯಾಯಿನಿ ತಾರಾಮಣಿ, ಅಧ್ಯಾ ಪಕರುಗಳಾದ ಕವಿತಾ, ಸುಧಾ, ಅರುಣ್, ವಿಜಯ್ ಸೇರಿದಂತೆ ಇತರರು ಉಪಸ್ಥಿತರಿದ್ದರು.