ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆಗಳು ನಿರಂತರವಿರಬೇಕು…
ಶಿವಮೊಗ್ಗ: ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಒಳ್ಳೆಯ ವಿಷಯಗಳ ಕುರಿತು ಹೊಸ ಹೊಸ ಚಿಂತನೆಗಳು ನಿರಂತರವಾಗಿ ಬರಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಅನವರತ ಅರ್ಪಿಸುವ ಸಿಹಿಮೊಗೆ ಸಂಭ್ರಮ ಮಲೆನಾಡ ಮಣ್ಣಿನ ಸಾಂಸ್ಕೃತಿಕ ಸೊಗಡು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಟ್ಟು ವ್ಯವಸ್ಥೆಯಲ್ಲಿ ಜನ ಪ್ರತಿನಿಧಿಗಳು ಒಂದೇ ತರದ ಕೆಲಸಕ್ಕೆ ಆದ್ಯತೆ ನೀಡದೆ. ಇಂತಹ ಸಾಂಸ್ಕೃತಿಕ ಕಲೆಗಳಿಗೆ ಪ್ರೋತ್ಸಾಹಿಸುವುದು ಹಾಗೂ ವ್ಯಕ್ತಿ ನಿರ್ಮಾಣ ಮಾಡು ವುದು ಅವಶ್ಯವಾಗಿದೆ. ಇಂದಿನ ಯುವ ಪೀಳಿಗೆ ಹಾಗೂ ಸಾರ್ವಜನಿಕರನ್ನು ಒಂದು ಗೂಡಿಸಿಕೊಂಡು ಹೋದಾಗ ಮಾತ್ರ ನಮ್ಮ ವ್ಯವಸ್ಥೆಯಲ್ಲಿ ಸುಂದರ ವಾಗಿಸುವುದು ಸಾಧ್ಯ. ಇಂತಹ ವೇದಿಕೆಗಳನ್ನು ನಾವು ಸೃಷ್ಟಿಸಿಕೊಂಡು ಹೋದಾಗ ಮಾತ್ರ ಅಳಿವಿನಲ್ಲಿರುವ ನಮ್ಮ ಜನಪದ ಕಲೆಗಳನ್ನು ಉಳಿಸಲು ಸಾಧ್ಯ ಎಂದರು. ಶಾಸಕರು ಹಾಗೂ ಅನವರತ ಗೌರವಾಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಡಾ. ವಿಷ್ಣು ಮೂರ್ತಿ. ಶೈಲಜ, ಜಗದೀಶ್ ಇದ್ದರು.