ಆರೋಗ್ಯವಂತ ಜೀವನಶೈಲಿಗೆ ಎನ್‌ಸಿಸಿ ಸಹಕಾರಿ:ಕರ್ನಲ್ ಭಗಾಸ್ರ

ಸಾಗರ: ಎನ್‌ಸಿಸಿ ವಿದ್ಯಾರ್ಥಿ ಜೀವನದಲ್ಲಿ ಸಿಗುವ ಒಂದು ಅಪೂರ್ವ ಅವಕಾಶ. ಆರೋಗ್ಯ ವಂತ ಜೀವನಶೈಲಿಗೆ ಎನ್‌ಸಿಸಿ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದು ಎನ್‌ಸಿಸಿ ಮಂಗಳೂರು ಗ್ರೂಪ್, ಕರ್ನಾಟಕ-ಗೋವಾ ಡೈರೆಕ್ಟರ್ ಗ್ರೂಪ್ ಕಮಾಂಡರ್ ಕರ್ನಲ್ ಎನ್.ಕೆ.ಭಗಾಸ್ರ ಸಲಹೆ ನೀಡಿದರು.
ಪಟ್ಟಣದ ಎಲ್.ಬಿ. ಮತ್ತು ಎಸ್‌ಬಿಎಸ್ ಕಾಲೇಜಿನ ಆವರಣದಲ್ಲಿ ನೂತನ ಫೈರಿಂಗ್ ರೇಂಜ್ ಉದ್ಘಾಟಿಸಿ ಅವರು ಮಾತನಾಡಿದ ಅವರು, ಎನ್‌ಸಿಸಿ ವಿದ್ಯಾರ್ಥಿಗಳಲ್ಲಿ ಶಿಸ್ತು, ಕ್ರೀಡಾಸಕ್ತಿ ಬೆಳೆಸುತ್ತದೆ ಎಂದರು.
ಎಲ್‌ಬಿ ಕಾಲೇಜಿನಲ್ಲಿ ಫೈರಿಂಗ್ ರೇಂಜ್ ನಿರ್ಮಿಸಿಕೊಟ್ಟಿ ರುವುದು ಜಿಗೇ ಒಂದು ಮಾದರಿ. ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಾರೆ. ಜ.೨೬ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ದಿನದ ಪಥ ಸಂಚಲನಕ್ಕೆ ಆಯ್ಕೆಯಾಗಲು ಇಲ್ಲಿ ಪ್ರೇರಣೆ ದೊರಕಲಿದೆ ಎಂದರು.
ಕರ್ನಲ್ ಅರುಣ್ ಯಾದವ್, ಎಂಡಿಎಫ್ ಪ್ರಧಾನ ಕಾಂiiದರ್ಶಿ ಡಾ.ಎಚ್.ಎಂ. ಶಿವಕುಮಾರ್, ಖಜಂಚಿ ಕೆ.ವೆಂಕಟೇಶ್ ಕವಲಕೋಡು, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ. ಬಿ.ಸಿ.ಶಶಿಧರ್, ಕಾಲೇಜು ಪ್ರಾಂಶುಪಾಲ ಡಾ.ಲಕ್ಷ್ಮೀಶ್, ಲೆಫ್ಟಿನೆಂಟ್ ನೂತನ ಎಚ್.ಡಿ. ಮತ್ತಿತರರು ಹಾಜರಿದ್ದರು.
ಹತ್ತು ದಿನಗಳ ಕಾಲ ನಡೆದ ಶಿಬಿರದಲ್ಲಿ ೪೫೦ಕ್ಕೂ ಹೆಚ್ಚಿನ ಎನ್‌ಸಿಸಿ ವಿದ್ಯಾರ್ಥಿಗಳು ರಾಜ್ಯದ ನಾನಾ ಕಾಲೇಜುಗಳಿಂದ ಭಾಗವಹಿಸಲು ಆಗಮಿಸಿದ್ದರು.