ಜಿಲ್ಲೆಯಾದ್ಯಂತ ನಾಗರಪಂಚಮಿ ಹಬ್ಬ ಸಂಭ್ರಮದ ಆಚರಣೆ…
ಶಿವಮೊಗ್ಗ: ಶ್ರಾವಣ ಮಾಸದ ಐದನೇ ದಿನಕ್ಕೆ ಬರುವ ಮೊದಲ ಹಬ್ಬವಾದ ಅದರಲ್ಲೂ ಮಹಿಳೆ ಯರ ಪ್ರಮುಖ ಹಬ್ಬ ನಾಗರ ಪಂಚಮಿಯನ್ನು ನಗರ ಸೇರಿದಂತೆ ಜಿಯಾದ್ಯಂತ ಇಂದು ಸಂಭ್ರಮ ದಿಂದ ಆಚರಿಸಲಾಯಿತು.
ಮಹಿಳೆಯರು ಹೊಸ ಬಟ್ಟೆ, ಬಳೆ ತೊಟ್ಟು ಹುತ್ತಕ್ಕೆ ಹಾಲೆರೆದರು. ಮನೆಯವರೆಲ್ಲರೂ ಸೇರಿ ವಿಶೇಷ ಪೂಜೆ ಸಲ್ಲಿಸಿ, ನಾಗ ದೇವರಿಗೆ ನಮಿಸಿದರು. ಈ ಮೂಲಕ ಶ್ರಧ್ಧಾ- ಭಕ್ತಿಯ ಹಬ್ಬ ಆಚರಣೆ ನಡೆಯಿತು.
ಹಬ್ಬದ ನಿಮಿತ್ತ ಬೆಳಗ್ಗೆ ಯಿಂದಲೇ ಮಹಿಳೆಯರು, ಯುವತಿಯರು, ಹಿರಿಯರು ಮತ್ತು ಕಿರಿಯರು ತಂಡೋಪ ತಂಡವಾಗಿ ಆಯಾ ಬಡಾವಣೆಗಳ ನಾಗ ದೇವರ ಮಂದಿರ ಹಾಗೂ ಹುತ್ತಗಳ ತೆರಳಿ ಹಾಲೆರೆದರು.
ನಂತರ ಹುತ್ತದ ಬಳಿ ತೆರಳಿ ಕುಂಕುಮ- ಅರಶಿಣ ಹಚ್ಚಿದರಲ್ಲದೆ, ಕಂಕಣ, ಹೋಳಿಗೆ ತುಪ್ಪ, ಕಡಬು, ಅರಳು, ಹೂ, ಕಾ, ಕರ್ಪೂರ ಹಾಗೂ ಕೊಬ್ಬರಿಯನ್ನು ನಾಗ ದೇವತೆಗೆ ಅರ್ಪಿಸಿದರು.
ಗ್ರಾಮೀಣ ಭಾಗದಲ್ಲಿ ಸಂಜೆ ವೇಳೆ ಮಹಿಳೆಯರು, ಯುವತಿ ಯರು ಒಂದೆಡೆ ಸೇರಿ ಹಾಡು ಗಳನ್ನು ಹಾಡಿ ಸಂಭ್ರಮಿಸಿದರು. ಯುವತಿಯರು, ಮಕ್ಕಳು ಜೋ ಕಾಲಿ ಆಡಿ ನಲಿದರು. ಒಟ್ಟಿನಲ್ಲಿ ಪಂಚಮಿ ಹಬ್ಬವನ್ನು ಸಂಭ್ರಮ ದಿಂದ ಆಚರಣೆ ಮಾಡಲಾಯಿತು.
ನಾಗರಪಂಚಮಿಯಂದು ಹುತ್ತಕ್ಕೆ ಹಾಲೆರೆಯುವುದು ಸಂಪ್ರದಾಯವಾಗಿದೆ. ನಾಗರ ಪಂಚಮಿ ನಾಡಿಗೆ ದೊಡ್ಡದು ಎನ್ನುವ ಮಾತಿದ್ದು, ಈ ಹಬ್ಬವನ್ನು ವಿಶೇಷವಾಗಿ ಮಹಿಳೆಯರ ಹಬ್ಬ ಎಂದೇ ಬಿಂಬಿಸಲಾಗಿದೆ.