ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು: ಶಾಸಕ ಶಾಂತನಗೌಡ

ಹೊನ್ನಾಳಿ: ಸರ್ಕಾರಿ ನೌಕರರ ಸೇವಾ ಭದ್ರತೆ ಹಾಗೂ ನಿವೃತ್ತಿ ಜೀವನ ಸುಗಮವಾಗಿ ಸಾಗಲು ಮುಂಬರುವ ಬಜೆಟ್‌ನಲ್ಲಿ ವಿಷಯ ಮಂಡಿಸಿದರೆ ತಮ್ಮ ಎರಡೂ ಕೈಗಳನ್ನು ಎತ್ತುವ ಮೂಲಕ ಎನ್.ಪಿ.ಎಸ್.ನೌಕರರ ಪರವಾಗಿ ನಿಲ್ಲುತ್ತೇನೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಭರವಸೆ ನೀಡಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಅನ್ಯಾಯ, ಅಕ್ರಮಗಳು ಕಂಡೂ ಕೇಳರಿಯದ ಭ್ರಷ್ಟಾಚಾರ ಆಗಿವೆ, ನನ್ನ ಅವಧಿಯಲ್ಲಿ ಅಧಿಕಾರಿ ವರ್ಗ ಮಾನವೀಯತೆಯ ದೃಷ್ಟಿ ಯಿಂದ ಪ್ರಾಮಾಣಿಕ ಸೇವೆಯನ್ನು ಮಾಡುವಂತೆ ಮನವಿ ಮಾಡಿದರು
ಎನ್.ಪಿ.ಎಸ್. ನೌಕರರ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ೧೪ ದಿನಗಳ ಕಾಲ ಎನ್.ಪಿ.ಎಸ್. ನೌಕರರ ವರ್ಗದವರು ತಮ್ಮ ಇಚ್ಚಾ ಶಕ್ತಿ ಪ್ರದರ್ಶಿಸಿ ಮುಷ್ಕರ ನಡೆಸಿ ಸರ್ಕಾರವನ್ನು ಮಣಿಸಿದ್ದೀರಿ. ಚುನಾವಣಾ ಸಮಯದಲ್ಲಿ ಎನ್.ಪಿ.ಎಸ್. ನೌಕರರು ನಮ್ಮ ಜೊತೆಗಿದ್ದಿರಿ. ಇನ್ನು ಮುಂದೆ ನಮ್ಮ ಸರ್ಕಾರ ನಿಮ್ಮ ಜೊತೆಗಿರುತ್ತೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಭರವಸೆ ನೀಡಿದರು.
ಹೊಸ ಪಿಂಚಣಿ ಯೋಜನೆಯ ಬದಲಾಗಿ ಹಳೆಯ ಪಿಂಚಣಿ ಯೋಜನೆಯನ್ನು ಎ ಸರ್ಕಾರಿ ನೌಕರರ ಹಿತದೃಷ್ಠಿಯಿಂದ ನೀವುಗಳು ಕಳೆದ ೧೦ ವರ್ಷಗಳಿಂದ ಸತತವಾಗಿ ಹೋರಾಟ ಮಾಡುತ್ತಾ ಬಂದಿರುವ ಉದ್ದೇಶವನ್ನು ನಮ್ಮ ಕಾಂಗ್ರೆಸ್ ಸರ್ಕಾರ ಈಡೇರಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಿದೆ ಎಂದು ವಿವರಿಸಿದರು.


ಎನ್.ಪಿ.ಎಸ್. ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣ ಮಾತನಾಡಿ, ಈ ಸಂಘಟನೆಯು ಹುಟ್ಟಲಿಕ್ಕೆ ಮೂಲ ಕಾರಣ ದಾವಣಗೆರೆ ಜಿಯಾಗಿದೆ. ಫ್ರೀಡಂ ಪಾರ್ಕಿನಲ್ಲಿ ಸತತ ೧೪ ದಿನಗಳ ಕಾಲ ಐತಿಹಾಸಿಕ ಹೋರಾಟ ಮಾಡಿದ್ದಲ್ಲದೇ ವೋಟ್ ಫಾರ್ ಒಪಿಎಸ್ ಅಭಿಯಾನದ ಮೂಲಕ ನಮ್ಮ ಸಂಘಟನೆಯವರು ಗುಪ್ತಗಾಮಿನಿಯ ರೀತಿಯಲ್ಲಿ ಕಾರ್ಯಪ್ರವೃತ್ತರಾಗಿ ೧೩೫ ಸೀಟು ಗಳಿಂದ ಕಾಂಗ್ರೆಸ್ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯುವ ಹಾಗಾಯಿತು ಎಂದರು.
ನಮ್ಮ ಹೋರಾಟವು ಯಾವುದೇ ಪಕ್ಷ-ವ್ಯಕ್ತಿಯ ವಿರುದ್ಧವಾಗಿರದೇ ನಮ್ಮ ಅಸ್ತಿತ್ವದ ಹೋರಾಟವಾಗಿದ್ದಿತು ಎಂದು ವಿವರಿಸಿದರು.
ಎನ್.ಪಿ.ಎಸ್. ನೌಕರರ ಜಿಧ್ಯಕ್ಷ ಶಿವಕುಮಾರ್ ಮಾತನಾಡಿ, ಎ ಜತಿಯ ನೌಕರರು ಪಕ್ಷಭೇ॒ದ ಮರೆತು ಕಾಂಗ್ರೆಸ್ ಸರ್ಕಾರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿzರೆ. ನಮ್ಮ ಬೇಡಿಕೆಗಳನ್ನು ಈಡೇರಿಸಿದ್ದೇ ಆದರೆ ನಮ್ಮಗಳ ಮನೆ-ಮನೆಗಳಲ್ಲಿ ತಮ್ಮ ಫೋಟೋಗಳು ಶಾಶ್ವತವಾಗಿರುತ್ತವೆ ಎಂದು ತಿಳಿಸಿದರು.
ಎನ್.ಪಿ.ಎಸ್. ನೌಕರರ ತಾಲ್ಲೂಕು ಅಧ್ಯಕ್ಷ ಪ್ರಕಾಶ್ ನಾಯ್ಕ್ ಮಾತನಾಡಿ, ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ತಮ್ಮ ಬೇಡಿಕೆ ಗಳ ಈಡೇರಿಕೆಗಾಗಿ ಹೋರಾಡಿದ ಏಕೈಕ ಸಂಘ ನಮ್ಮ ಎನ್.ಪಿ.ಎಸ್. ನೌಕರರ ಸಂಘವೆಂದು ಹೇಳಿ ಕೊಳ್ಳಲು ಹೆಮ್ಮೆಯಾಗುತ್ತದೆ ಎಂದರಲ್ಲದೇ, ಹಳೆಯ ಪಿಂಚಣಿ ಯೋಜನೆಯವರಿಗೆ ಶೇ.೧೦೦ ವೇತನ ದೊರೆತರೆ ನಮ್ಮ ವೇತನದಲ್ಲಿ ಶೇ.೧೦ ವೇತನ ಕಡಿತಗೊಳ್ಳುತ್ತದೆ. ೫ ವರ್ಷ ಶಾಸಕರಾದವರಿಗೆ ಅವರ ಜೀವಿತಾವಧಿಯವರೆಗೂ ಪಿಂಚಣಿ ದೊರೆಯುತ್ತದೆ ಆದರೆ ನಮಗ್ಯಾಕೆ ಈ ತಾರತಮ್ಯವೆಂದು ಪ್ರಶ್ನಿಸಿದರು.
ಸಭೆಯಲ್ಲಿ ಹಳೆಯ ಪಿಂಚಣಿಗೆ ಒತ್ತಾಯಿಸಿ ಟೋಪಿ ಮತ್ತು ಟೀ- ಶರ್ಟ್ ಧರಿಸಿ ಬಂದದ್ದು ಗಮನ ಸೆಳೆಯಿತು.
ಪ್ರಮುಖರಾದ ಎಚ್.ಜಿ.ಎಂ. ಬಸವರಾಜ್, ಎಸ್.ಎಂ. ಸಂಗಮೇಶ್, ವಿಜಯ್ ಕುಮಾರ್, ಎಚ್.ಸಿ. ಚಂದ್ರಶೇಖರ್, ಕೆ.ಅರುಣ್ ಕುಮಾರ್, ನಾಗರಾಜ್ ದೊಂಕತ್ತಿ, ಎಚ್.ಕೆ. ಚಂದ್ರ ಶೇಖರ್, ಎಚ್.ಜಿ. ಪುರು ಷೋತ್ತಮ್ ಸೇರಿದಂತೆ ಸರ್ಕಾರಿ ನೌಕರರು ಉಪಸ್ಥಿತರಿದ್ದರು.