ಮುಖ್ಯಮಂತ್ರಿಹೆಚ್‌ಡಿಕೆ ಸಮಕ್ಷಮ ಜೆಡಿಎಸ್ ಸೇರಿದ ಮುಕ್ತಿಯಾರ್..

ಮಾಜಿ ನಗರಸಭಾ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರೂ ಹಾಗೂ ಮುಸ್ಲಿಂ ಸಮಾಜದ ಗಣ್ಯರೂ ಆಗಿರುವ ಉದ್ಯಮಿ ಮುಕ್ತಿಯಾರ್ ಅಹಮದ್ ಅವರು ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಸಮಕ್ಷಮದಲ್ಲಿ ಜೆಡಿಎಸ್‌ಗೆ ಸೇರ್ಪಡೆಗೊಂಡರು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ. ಶ್ರೀಕಾಂತ್, ಕಾರ್‍ಯಾಧ್ಯಕ್ಷ ದಾದಾಪೀರ್, ಜೆಡಿಎಸ್ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್, ಶಾರದಾ ಪೂರ್‍ಯಾನಾಯ್ಕ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜೆಡಿಎಸ್ ಯುವ ಘಟಕದ ಕಾರ್‍ಯಾಧ್ಯಕ್ಷ ಎಸ್.ಎಲ್. ನಿಖಿಲ್, ಪ್ರಮುಖರಾದ ಸತೀಶ್‌ರಾಜ್, ಭಾಸ್ಕರ್ ಇನ್ನಿತರರು ಉಪಸ್ಥಿತರಿದ್ದರು.