ರಾಷ್ಟ್ರೀಯ ಅಧಿವೇಶನಕ್ಕೆ ರಾಜ್ಯದಿಂದ ೧ಸಾವಿರಕ್ಕೂ ಹೆಚ್ಚು ಸಹಕಾರಿಗಳು:ರಾಜು
ಶಿವಮೊಗ್ಗ: ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಅಧಿವೇಶನವು ಡಿ.೨ ಮತ್ತು ೩ ರಂದು ನವ ದೆಹಲಿಯ ಪುಸಾ ರಸ್ತೆಯ ಭಾರತೀಯ ಕೃಷಿ ಅನುಸಂಧಾನ ಸಂಸ್ಥಾನ ಮೇಳದ ಮೈದಾನದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷ ವಿ. ರಾಜು ತಿಳಿಸಿದರು.
ಅವರು ಇಂದು ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಈ ರಾಷ್ಟ್ರೀಯ ಅಧಿವೇಶನದಲ್ಲಿ ಕರ್ನಾಟಕ ರಾಜ್ಯದಿಂದ ೨ ಸಾವಿರ ಸಹಕಾರಿಗಳು ಪಾಲ್ಗೊಳ್ಳುವ ಗುರಿ ಹೊಂದಿದ್ದು, ಈಗಾಗಲೇ ೧ ಸಾವಿರಕ್ಕೂ ಹೆಚ್ಚು ಮಂದಿ ಹೆಸರು ನೋಂದಣಿ ಮಾಡಿ ದೆಹಲಿಗೆ ಹೊರಟಿದ್ದಾರೆ ಎಂದರು.
ಕ್ರೆಟಿಡ್ ಸೊಸೈಟಿಗಳ ಆಡಳಿ ತಾತ್ಮಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ರಾಷ್ಟ್ರಮಟ್ಟದಲ್ಲಿ ಅಧಿವೇಶನ ಕರೆಯಲಾಗಿದೆ.
ಸಹಕಾರಿ ಸಚಿವರು ಆಗಿರುವ ಗೃಹ ಸಚಿವ ಅಮಿತ್‌ಷಾ ಉಪಸ್ಥಿತಿ ಯಲ್ಲಿ ಅಧಿವೇಶನ ನಡೆಯು ವುದು.
ಎಲ್ಲಾ ಕ್ರೆಡಿಟ್ ಸೊಸೈಟಿಗಳಿಗೆ ಡಿಪಾಸಿಟ್ ಇನ್ಯೂರೆನ್ಸ್ ಲಾಭ ಸಿಗಬೇಕು. ಆದಾಯ ತೆರಿಗೆ ಕಾಯ್ದೆ ಯಲ್ಲಿ ಕ್ರೆಡಿಟ್ ಸೊಸೈಟಿಗಳಿಗೆ ವಿನಾಯತಿ ಸಿಗಬೇಕು. ಎಲ್ಲಾ ರಾಜ್ಯ ಹಾಗೂ ಕೇಂದ್ರಗಳಲ್ಲಿ ಕ್ರೆಡಿಟ್ ಸೊಸೈಟಿಗಳ ನೋಂದಣಿ ಯ ದಾರಿ ಪ್ರಶಸ್ತಿವಾಗಬೇಕು. ಸೊಸೈಟಿಗಳಿಗೆ ರಾಷ್ಟ್ರೀಯ ಪಾವತಿ ಗೇಟ್ ವೇ ವ್ಯವಸ್ಥೆಯ ಸದಸ್ಯತ್ವ ಸಿಗಬೇಕು ಹಾಗೂ ಸಿಬಿಲ್ ವ್ಯವಸ್ಥೆಯ ಲಾಭ ಸಿಗಬೇಕು ಎಂಬ ಪ್ರಮುಖ ಬೇಡಿಕೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುವುದು.
ಈಗಾಗಲೇ ಕ್ರೆಡಿಟ್ ಸೊಸೈಟಿಗಳನ್ನು ಆದಾಯ ತೆರಿಗೆ ಯಿಂದ ವಿನಾಯತಿ ನೀಡಲು ಸುಪ್ರೀಂ ಕೋರ್ಟ್ ಸಹ ಸೂಚನೆ ನೀಡಿರುವುದರಿಂದ ಈ ಬಗ್ಗೆ ಸೂಕ್ತ ನಿರ್ಣಯ ಅಧಿವೇಶನದಲ್ಲಿ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹಕಾರಿ ಗಳಾದ ಪಿ. ಬಾಲಪ್ಪ, ನರಸಿಂಹ ಶ್ರೀಗಂಧದ ಮನೆ ಮೊದಲಾದವರು ಉಪಸ್ಥಿತರಿ ದ್ದರು.