mother-mery-fest

ಕುಂದಾಪುರದ ರೋಜಾರಿ ಅಮ್ಮನವರ ಇಗರ್ಜಿಯಲ್ಲಿ ಮಾತೆ ಮೇರಿಯ ಹುಟ್ಟು ಹಬ್ಬವನ್ನು (ಮೊಂತಿ ಫೆಸ್ತ್) ಶ್ರದ್ಧಾ ಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು. ಆರಂಭದಲ್ಲಿ ಮೇರಿ ಮಾತೆಯ ಗ್ರೊಟ್ಟೊ ಎದುರು ಹೊಸ ಬೆಳೆ ಭತ್ತದ ತೆನೆಗಳನ್ನು ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಆಶಿರ್ವದಿಸುವ ಮೂಲಕ ಚಾಲನೆಯನ್ನು ನೀಡಿದರು. ನಂತರ ಅಲಂಕೃತ ಬಾಲ ಮೇರಿ ಮಾತೆಯ ಪುಥ್ಥಳಿಗೆ ಚಿಕ್ಕ ಮಕ್ಕಳು ಪುಷ್ಪಗಳನ್ನು ಆರ್ಚನೆ ಮಾಡುತ್ತಾ, ವಾದ್ಯದೊಂದಿಗೆ ಭಕ್ತಿ ಗಾಯನ ಮೂಲಕ ಮೆರವಣಿಗೆ ಮೂಲಕ ಇಗರ್ಜಿಗೆ ಬಂದು ದಿವ್ಯ ಬಲಿದಾನವನ್ನು ಅರ್ಪಿಸಲಾಯಿತು. ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆ, ಕಾರ್ಯದರ್ಶಿ ಆಶಾ ಕರ್ವಾ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪ್ರತಿನಿಧಿಗಳು, ಧರ್ಮಭಗಿನಿಯರು ಮತ್ತು ಬಹು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ಮಾತೆಯ ಕೃಪೆಗೆ ಪಾತ್ರರಾದರು. ಚಿತ್ರ: ಬರ್ನಾಡ್ ಡಿಕೋಸ್ತಾ.