ಮತ ವಿಭಜನೆಯಿಂದ ಗೆದ್ದ ಶಾಸಕ ವಿಜಯೇಂದ್ರ; ಚುನಾವಣೆ ಪೂರ್ವ ನೀಡಿದ್ದ ಭರವಸೆ ಈಡೇರಿಸದಿದ್ದಲ್ಲಿ ಪ್ರತಿಭಟನೆ…
ಶಿಕಾರಿಪುರ : ವಿರೋಧಿಗಳ ಮತವಿಭಜನೆಯಿಂದಾಗಿ ಗೆಲುವು ಸಾಧಿಸಿದ ವಿಜಯೇಂದ್ರ ನೈತಿಕವಾಗಿ ಗೆಲುವು ಸಾಧಿಸುವಲ್ಲಿ ವಿಫಲವಾಗಿದ್ದಾರೆ. ಬಿಜೆಪಿಯ ಅಭಿವೃದ್ದಿ ಪರ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಪ್ರಚಂಡ ದಿಗ್ವಿಜಯ ಸಾಧಿಸಿದ್ದು ೧೩೫ ಸ್ಥಾನಗಳಲ್ಲಿ ಜಯಗಳಿಸಿದ ಪಕ್ಷಕ್ಕೆ ಮತ ನೀಡಿದ ಎಲ್ಲ ಮತದಾರರಿಗೆ ಕೃತಜ್ಞತೆ ಸಲ್ಲಿಸುವು ದಾಗಿ ತಿಳಿಸಿ ಜಿಲ್ಲೆಯಲ್ಲಿ ಮಧು ಬಂಗಾರಪ್ಪ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಖಾತೆಯ ಸಚಿವರಾಗಿ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಬಿಜೆಪಿ ವಿರುದ್ದ ವಾಗಿ ಮತದಾರರು ತೀರ್ಪು ನೀಡಿದ್ದು ತಾಲೂಕಿನಲ್ಲಿ ವಿಜಯೇಂದ್ರ ಮತಗಳಿಕೆಯ ಆಧಾರದಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ. ಎಲ್ಲ ವಿರೋಧಿ ಅಭ್ಯರ್ಥಿ ಗಳು ಗಳಿಸಿದ ಒಟ್ಟು ಮತಗಳು ವಿಜಯೇಂದ್ರ ಗಳಿಸಿದ ಮತಕ್ಕಿಂತ ಅಧಿಕವಾಗಿದ್ದು ಈ ದಿಸೆಯಲ್ಲಿ ವಿಜಯೇಂದ್ರ ನೈತಿಕವಾಗಿ ಗೆಲುವು ಸಾಧಿಸುವಲ್ಲಿ ವಿಫಲರಾಗಿ ಕೇವಲ ಮತ ವಿಭಜನೆಯ ಲಾಭದಿಂದ ಜಯಗಳಿಸಿದ್ದಾರೆ ಎಂದರು.
ಸಮಗ್ರ ತಾಲೂಕು ಅಭಿವೃದ್ದಿ ಪಡಿಸಲಾಗಿದ್ದು ಮತದಾರರು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂಬ ಅವರ ನಿರೀಕ್ಷೆ ಹುಸಿಯಾಗಿದೆ ಮತದಾರರು ಬಿಜೆಪಿಯ ಗೊತ್ತುಗುರಿಯಿಲ್ಲದ ಅಭಿವೃದ್ದಿಪರ ರಾಜಕಾರಣವನ್ನು ತಿರಸ್ಕರಿಸಿದ್ದಾರೆಂದು ಟೀಕಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸ್ಪಷ್ಟ ಬಹುಮತದ ಮೂಲಕ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದು ತಾಲೂಕಿನಲ್ಲಿ ಬಗರ್‌ಹುಕುಂ,ಇ ಸ್ವತ್ತು ಸಹಿತ ಹಲವು ಸಮಸ್ಯೆಗಳು ಜೀವಂತವಾಗಿದೆ ಪಕ್ಕದ ಸೊರಬ ಶಾಸಕ ಮಧು ಬಂಗಾರಪ್ಪ ಸಚಿ ರಾಗಿದ್ದು ಬಹುತೇಕ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳುವುದು ಖಚಿತ ಅವರ ಮೂಲಕ ತಾಲೂಕಿನ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಲಾಗುವುದು ಎಂದು ತಿಳಿಸಿದ ಅವರು ಕಾಂಗ್ರೆಸ್ ಪಕ್ಷ ನೀಡಿದ ಎಲ್ಲ ೫ ಗ್ಯಾರೆಂಟಿಯನ್ನು ಈಡೇರಿಸಲು ಸರ್ಕಾರ ಸಿದ್ದವಿದೆ ಎಂದು ತಿಳಿಸಿದರು.
ವಿಜಯೇಂದ್ರ ಚುನಾವಣಾ ಪೂರ್ವದಲ್ಲಿ ನಿರುದ್ಯೋಗ ಸಮಸ್ಯೆ ಪರಿಹಾರ,ಬಗರ್‌ಹುಕುಂ ಸಮಸ್ಯೆ ಪರಿಹಾರ ಮತ್ತಿತರ ವಿವಿಧ ಭರವಸೆಯನ್ನು ಕಡ್ಡಾಯವಾಗಿ ಈಡೇರಿಸಬೇಕು ತಪ್ಪಿದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಹಣ ಬಲದಿಂದ ಸದಾ ಪ್ರಚಾರದಲ್ಲಿರುವ ಶಾಸಕರು, ತಂದೆಯ ಹೆಸರಿನಲ್ಲಿ ಆಯ್ಕೆಯಾಗಿದ್ದಾರೆ ಕ್ಷೇತ್ರಕ್ಕೆ ಮಕ್ಕಳ ಕೊಡುಗೆ ಶೂನ್ಯ ಎಂದು ಕುಟುಕಿದರು.
ಇದೇ ೩೧ ರಂದು ಶಿವಮೊಗ್ಗದ ಈಡಿಗ ಸಮುದಾಯ ಭವನದಲ್ಲಿ ನೂತನ ಸಚಿವ ಮಧು ಬಂಗಾರಪ್ಪ ನವರಿಗೆ ಈಡಿಗ ಸಮಾಜದ ವತಿ ಯಿಂದ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದು ಪಕ್ಷ ಬೇಧ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳು ವಂತೆ ಮನವಿ ಮಾಡಿದರು.
ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಪ್ಪ ಕವಲಿ ಮಾತನಾಡಿ, ಮೋದಿ ಪ್ರಧಾನಿ ಯಾಗಿ ೯ ವರ್ಷ ಕಳೆದಿದ್ದು ಆರಂಭದಲ್ಲಿ ವಿದೇಶದಲ್ಲಿನ ಕಪ್ಪು ಹಣ ವಾಪಾಸ್ ತಂದು ಪ್ರತಿಯೊಬ್ಬರ ಖಾತೆಗೆ ರೂ.೧೫ ಲಕ್ಷ ಜಮಾಗೊಳಿಸುವ ಭರವಸೆ ಜತೆಗೆ ೨ ಕೋಟಿ ಉದ್ಯೋಗ ಸೃಷ್ಟಿ ಮತ್ತಿತರ ಹಲವು ಬೇಡಿಕೆ ಜೀವಂತವಾಗಿದೆ. ಆ ಬಗ್ಗೆ ಚಕಾರ ಎತ್ತದ ಬಿಜೆಪಿ ಮುಖಂಡರು ಕಾಂಗ್ರೆಸ್ ಸರ್ಕಾರ ರಚನೆಯಾಗಿ ವಾರ ಕಳೆದಿಲ್ಲ ಕೂಡಲೇ ಗ್ಯಾರೆಂಟಿ ಈಡೇರಿಕೆ ಬಗ್ಗೆ ಆಗ್ರಹಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ತಿಳಿಸಿ ಸಿದ್ದರಾಮಯ್ಯ ಕಳೆದ ಬಾರಿ ಮುಖ್ಯಮಂತ್ರಿಯಾಗಿ ನುಡಿದಂತೆ ನಡೆದು ತೋರಿಸಿಕೊಟ್ಟಿದ್ದಾರೆ ಅವರ ಬಗ್ಗೆ ಹಗುರವಾಗಿ ಮಾತನಾಡದಂತೆ ಎಚ್ಚರಿಸಿದರು.
ಗೋಷ್ಠಿಯಲ್ಲಿ ಪುರಸಭಾ ಸದಸ್ಯ ಉಳ್ಳಿ ದರ್ಶನ್,ಗೋಣಿ ಪ್ರಕಾಶ್, ರೋಷನ್ ಮುಖಂಡ ಬಿ.ಸಿ ವೇಣುಗೋಪಾಲ್,ಸುರೇಶ್ ಕಲ್ಮನೆ, ವೀಣಾ ಹಿರೇಮಠ್, ತಿಮ್ಮಣ್ಣ, ಮಧು, ಜಂಬೂರು ಚಂದ್ರಣ್ಣ, ಭಂಡಾರಿ ಮಾಲತೇಶ್, ಮುಷೀರ್ ಅಹ್ಮದ್,ಈಶಪ್ಪ ಮತ್ತಿತರರು ಉಪಸ್ಥಿತರಿದ್ದರು.