ಮೇರಾ ಮಿಟ್ಟಿ ಮೇರಾ ದೇಶ್ ಕಾರ್‍ಯಕ್ರಮಕ್ಕೆ ಶಾಸಕರಿಂದ ಚಾಲನೆ…
ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್‌ನಲ್ಲಿ ಇಂದು
ಮೇರಾ ಮಿಟ್ಟಿ ಮೇರಾ ದೇಶ್ (ನನ್ನ ಮಣ್ಣು ನನ್ನ ಭೂಮಿ) ಕಾರ್ಯಕ್ರಮವನ್ನು ಶಾಸಕ ಎಸ್.ಎನ್, ಚನ್ನಬಸಪ್ಪ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತೃ ಭೂಮಿಯ ಘನತೆ ಹಾಗೂ ಸ್ವಾತಂತ್ರ್ಯ ಕಾಪಾಡಲು ತಮ್ಮ ಪ್ರಾಣ ತ್ಯಾಗ ಮಾಡಿದ ವೀರರಿಗೆ ಪ್ರಣಾಮಗಳು ಮತ್ತು ಮಾತೃ ಭೂಮಿಗಾಗಿ ಪ್ರತಿದಿನ, ಪ್ರತಿಕ್ಷಣ ಜೀವನದ ಪ್ರತಿ ಕಣವೂ ಬದುಕು ವುದೇ ಸ್ವಾತಂತ್ರ್ಯ ಹೋರಾಟಗಾ ರರಿಗೆ ನಾವು ಅರ್ಪಿಸುವ ನಿಜವಾದ ಗೌರವ ಎಂಬ ಪ್ರಧಾನಿಯವರ ಹೇಳಿಕೆಯ ಶಾಶ್ವತ ನಾಮಫಲಕ ವನ್ನು ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ಆಯುಕ್ತ ರಾದ ಮಾಯಣ್ಣ ಗೌಡ, ಗೋವಿಂದ ರಾಜ್, ಮಹಾನಗರ ಪಾಲಿಕೆಯ ಉಪ ಆಯುಕ್ತರು ಮತ್ತು ಅಧಿಕಾರಿಗಳು, ಸಿಬ್ಬಂದಿ ಗಳು ಹಾಜರಿದ್ದರು.