ಬಿಸಿಯೂಟದಲ್ಲಿ ಅವ್ಯವಹಾರ: ಕ್ರಮಕ್ಕೆ ಆಗ್ರಹ

ಹೊನ್ನಾಳಿ: ನ್ಯಾಮತಿ ತಾಲೂಕಿನ ಕೆಪಿಎಸ್ ಶಾಲೆಯಲ್ಲಿ ಅಕ್ಷರದಾಸೋಹ ನಡೆಸುತ್ತಿರುವ ಸಹಶಿಕ್ಷಕ ಎರಗನಾಳ್ ಸಿದ್ಧಪ್ಪ ನ್ಯಾಮತಿ ಶಾಲೆಯಲ್ಲಿ ಪಾಠವನ್ನ ಮಾಡದೆ ಬಿಸಿಯೋಟದ ಆಹಾರ ಪದಾರ್ಥತಗಳ ಅವ್ಯವಹಾರದ ಮೊದಲ ಅರೋಪಿಯಾಗಿದ್ದು ಶಿಕ್ಷಣ ಇಲಾಖೆ ಇವರ ಮೇಲೆ ಕ್ರಮ ಕೈಗೊಳ್ಳಬೇಕಿದೆ ಎಂದು ಹೊನ್ನಾಳಿ ತಾಲೂಕು ಎಸ್‌ಡಿಎಂಸಿ ಅಧ್ಯಕ್ಷ ಹುಣಸಗಟ್ಟ ಶಿವಲಿಂಗಪ್ಪ ಒತ್ತಾಯಿಸಿದರು.
ಬಿಇಒ ನಂಜರಾಜ ಅವರಿಗೆ ಮೆಲ್ಕಂಡ ವಿಷಯದ ಬಗ್ಗೆ ಮನವಿ ಸಲ್ಲಿಸಿ ಮಾತನಾಡಿದ ಶಿವಲಿಂಗಪ್ಪ ನವರು ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ೧೬ ಕೆಪಿಎಸ್ ಶಾಲೆಯಲ್ಲಿ ನಡೆದಿರುವ ದೊಡ್ಡ ಹಗರಣ ಇದಾಗಿದೆ,ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎಂದು ಹೇಳಿಕೊಂಡು ಓಡಾಡುವ ಸಿದ್ದಪ್ಪ ಅವರು ಹಗರಣ ಕುರಿತು ಪ್ರಶ್ನಿಸುವವರಿಗೆ ಉಡಾಪೇ ಹಾಗು ಉದಾಸೀನದ ಉತ್ತರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಮತಿ ಪೊಲೀಸ್ ಠಾಣೆ ವಶದಲ್ಲಿದ್ದ ಆಹಾರ ಪದಾರ್ಥದ ಲಾರಿಯನ್ನು ಠಾಣೆಯಿಂದ ಹತ್ತು ದಿನಗಳ ಹಿಂದೆ ಹೊರಗೆ ತರಲು ಇದೇ ಸಿದ್ಧಪ್ಪ ತನ್ನ ಜಳ್ಮೆ ಮೆರೆದಿzರೆ. ಶಿಕ್ಷಕರ ವರ್ಗಾವಣೆ ದಂದೆಯಲ್ಲಿ ಇವರ ವಿರುದ್ಧ ಹೆಚ್ಚು ಆರೋಪಗಳು ಕೆಳಿಬರುತ್ತಿದೆ ಎಂದರು. ಆಹಾರ ಪದಾರ್ಥದ ಹಗರಣದಲ್ಲಿ ಎರಡನೇ ಆರೋಪಿ ನ್ಯಾಮತಿ ಬಾಲಕಿಯರ ಶಾಲೆಯ ಹರಳಪ್ಪನಾಗಿರುವರೆಂದು ದೂರಿದರು.
೨೦೨೦-೨೧ ಸಾಲಿನಲ್ಲಿ ಬಂದಿರುವ ಶಾಲಾ ಕೊಠಡಿಗಳಲ್ಲಿ ಎಸ್‌ಡಿಎಂಸಿ ಖಾತೆಗೆ ಬಂದಿರುವ ಹಣವನ್ನು ಅಂದಿನ ಎಸ್‌ಡಿಎಂಸಿ ಅಧ್ಯಕ್ಷರಿಗೆ ತಿಳಿಸದೆ ಕಮೀಷನ್ ನೀಡಿಲ್ಲ ಎಂಬ ಕಾರಣದಿಂದಾಗಿ ಅಂದಿನ ಬಿಇಓ ರಾಜೀವ್ ರವರು ಶಾಲಾ ಕಟ್ಟಡದ ಸುಮಾರು ೩೩ ಲಕ್ಷರೂ ಮೊತ್ತದ ಹಣವನ್ನು ಹೆಚ್ಚು ವಿದ್ಯಾರ್ಥಿಗಳು ಇರದ ಕೂಲಂಬಿ ಶಾಲೆಗೆ ವರ್ಗಾಯಿಸಿzರೆಂದು ಆರೋಪಿಸಿ ಯಾವ ಶಾಲೆಗೆ ಹಣ ಬಂದಿರುತ್ತದೆಯೋ ಆ ಶಾಲೆಯ ಅಭಿವೃದ್ಧಿಗೆ ಅಲ್ಲಿನ ವಿದ್ಯಾರ್ಥಿಗಳ ಕಲಿಕೆಗೆ ಉಪಯೋಗವಾಗಬೇಕಿದೆ ಎಂದು ಆಗ್ರಹಿಸಿದರು.
ಸರ್ಕಾರಿ ಶಾಲೆಯಲ್ಲಿನ ಅವ್ಯವಹಾರ ತಡೆದು, ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಇಲಾಖಾಧಿಕಾರಿಗಳು ಸರ್ಕಾರಿ ಶಾಲೆಗಳ ಉಳುವಿಗೆ ಮುಂದಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಇಸಿಓ ಮುದ್ದ ಹನುಮೇಗೌಡ, ಎಸ್‌ಡಿಎಂಸಿ ರಾಜ್ಯ ಕಾರ್ಯದರ್ಶಿ ರುದ್ರನಾಯ್ಕ್, ತಾಲೂಕು ಕಾರ್ಯದರ್ಶಿ ಬನ್ನಿಕೋಡು ಸತೀಶ್, ಮಹಿಳಾ ಅಧ್ಯಕ್ಷೆ ಅಶ್ವಿನಿ, ಶಿಕ್ಷಕಿ ರೇಷ್ಮಾ, ನ್ಯಾಮತಿ ತಾಲೂಕು ಎಸ್‌ಡಿಎಂಸಿ ಅಧ್ಯಕ್ಷ ರಾಹಶೇರ ಇನ್ನಿತರರಿದ್ದರು.