ರಾಕ್ಷಸ ಗುಣಗಳನ್ನು ನಾಶಪಡಿಸಿ ದೈವೀ ಗುಣಗಳು ಬೆಳೆಯಲು ಧ್ಯಾನ ಸಹಕಾರಿ…

ಶಿವಮೊಗ್ಗ : ಮನುಷ್ಯ ತನ್ನ ದೈನಂದಿನ ಚಟುವಟಿಕೆಯ ಜೊತೆ ಯಲ್ಲಿ ನಿತ್ಯ ಧ್ಯಾನ ಅಭ್ಯಾಸ ಮಾಡುವುದರಿಂದ ತನ್ನ ರಾಕ್ಷಸ ಗುಣಗಳನ್ನು ನಾಶ ಪಡಿಸಿಕೊಂಡು ದೈವೀ ಗುಣಗಳನ್ನು ಬೆಳಸಿಕೊಳ್ಳಲು ಧ್ಯಾನ ಸಹಕಾರಿ ಎಂದು ಆರ್ಟ್ ಆಫ್ ಲಿವಿಂಗ್ ನ ಮಾರ್ಗದರ್ಶಕ ಶಬರೀಶ್ ಕಣ್ಣನ್ ಅಭಿಪ್ರಾಯ ಪಟ್ಟಿzರೆ.
ನಗರದ ಆರ್ಟ್ ಆಫ್ ಲಿವಿಂಗ್ ಆಶ್ರಯದಲ್ಲಿ ಗಾಂಧಿ ನಗರದ ಗೀತಾಮೃತ ಸತ್ಸಂಗ ಕೇಂದ್ರದಲ್ಲಿ ಜೂ.೨೧ ವಿಶ್ವ ಯೋಗ ದಿನ ಅಂಗವಾಗಿ ಮನೆ ಮನೆ ಧ್ಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಜೀವನದ ಒತ್ತಡ ಹಾಗೂ ಸಮಸ್ಯೆಯಿಂದ ಹೊರ ಬರಲು ಯೋಗ ಧ್ಯಾನ ಪ್ರಾಣಾ ಯಾಮದ ನಿರಂತರ ಅಭ್ಯಾಸ ಬೇಕಾಗುತ್ತದೆ, ಇದರ ಪರಿಣಾಮ ಮನಸ್ಸು ಶಾಂತವಾಗಿ ಶಾಂತಿ ಸಮಾ ಧಾನ ಸಾಧ್ಯ ವಾಗುತ್ತದೆ. ನಮ್ಮ ದಿನಚರಿಯಲ್ಲಿ ಒಂದಿಷ್ಟು ಸಣ್ಣ ಸಣ್ಣ ಬದಲಾವಣೆ ಯನ್ನು ನಾವು ಮಾಡಿಕೊಂಡು ಆಹಾರ, ನಿದ್ರೆ, ಉಸಿರಾಟ ಕ್ರಮ ಹಾಗೂ ಯೋಗ ಧ್ಯಾನ ಪ್ರಾಣಾಯಾಮದ ಅಭ್ಯಾಸ ದಿಂದ ನಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು ಎಂದರು.
ಧ್ಯಾನದಲ್ಲಿ ನಿರತವಾದಾಗ ಆಲೋಚನೆಗಳೆಲ್ಲ ನಿಯಂತ್ರಿಸಲ್ಪಟ್ಟು ಮನಸ್ಸಿನಲ್ಲಿ ಹೊಸ ಅರಿವು ಮೂಡಲು ಸಹಾಯವಾಗುತ್ತದೆ. ಈ ಧ್ಯಾನದಿಂದ ಉತ್ಪನ್ನವಾದ ಹೊಸ ಅರಿವಿನ ಜಗೃತಿಯ ಬೆಳಕಿನಲ್ಲಿ ನಿತ್ಯಜೀವನದ ಕರ್ತವ್ಯ ಗಳನ್ನು ಪ್ರeಪೂರ್ವಕವಾಗಿ ಭಗವತಾರ್ಪಣ ಭಾವದಿಂದ ಮತ್ತು ಪರಿಪೂರ್ಣತೆಯಿಂದ ನಿರ್ವಹಿ ಸಲು ಸಾಧ್ಯವಾಗುವುದು ಎಂದ ಅವರು, ಧ್ಯಾನದ ಅಭ್ಯಾಸ ಮತ್ತು ಆಧ್ಯಾತ್ಮಿಕ ವಿeನ ಮನೆ ಮನೆ ಗಳಲ್ಲಿ ಮತ್ತು ಶಾಲಾ- ಕಾಲೇಜು ಗಳಲ್ಲಿ ಶಿಕ್ಷಣದ ಅವಿಭಾಜ್ಯ ಅಂಗ ವಾದಲ್ಲಿ ಪ್ರತಿಯೊಬ್ಬರ ವ್ಯಕ್ತಿಗತ ಜೀವನ ಮತ್ತು ಸಮಾಜದಲ್ಲಿ ಕಂಡು ಬರುವ ಅನೇಕ ಸಮಸ್ಯೆ ಗಳನ್ನು ಪರಿಹರಿಸುವ ಆಂತರಿಕ ಶಕ್ತಿ ಮತ್ತು eನ ನಮ್ಮದಾಗುವುದು ಎಂದರು.

ಆದ್ದರಿಂದ ಈ ಕಲಿಯುಗದಲ್ಲಿ ತಾಳ್ಮೆಯಿಂದ ಬಾಳುವುದು ದೊಡ್ಡ ತಪಸ್ಸು. ಇದು ವ್ಯಕ್ತಿಗತ ಆಧ್ಯಾತ್ಮಿಕ ಜೀವನಕ್ಕೂ ಅವಶ್ಯಕ. ಮನಸ್ಸಿನ ಚಾಂಚಲ್ಯ, ಚಪಲತೆಗಳನ್ನು ಹೋಗ ಲಾಡಿಸ ಬೇಕಾದರೆ ಸಹನಶಕ್ತಿ ಯನ್ನು, ಧ್ಯಾನದ ಅಭ್ಯಾಸದಿಂದ ಬೆಳೆಸಿಕೊಳ್ಳುವುದು ಸುಲಭ. ಧರ್ಮದ ಹೆಸರಿನಲ್ಲಿ, ರಾಜಕೀ ಯದ ಹೆಸರಿನಲ್ಲಿ, ವೈಯ ಕ್ತಿಕ ಆಕಾಂಕ್ಷೆಗಳ ಕಾರಣದಿಂದ, ಮಾನವ ಸಮಾಜದಲ್ಲಿ ಉಂಟಾ ಗುತ್ತಿರುವ ಹಿಂಸೆ, ಕ್ರೌರ್ಯ ಮತ್ತು ನಷ್ಟ ಅಪಾರ. ನಮ್ಮೊಳಗೆ ಉದ್ಭವವಾಗುವ ತೀವ್ರವಾದ ಕ್ಲೇಶ ಭಾವನೆಗಳನ್ನು ಮನಬಂದಂತೆ ಹರಿಯಬಿಡದೆ, ವಿವೇಕದಿಂದ ಅವುಗಳನ್ನು ಪರಿವರ್ತಿಸಿ ಕೊಳ್ಳಬೇಕು. ನಮ್ಮಿಂದಾಗುವ ಅನಾಹುತಗಳನ್ನು ಮನಗಂಡು ವ್ಯಕ್ತಿತ್ವದಲ್ಲಿ ಪ್ರeಪೂರ್ವಕವಾಗಿ ಬದಲಾವಣೆ ತಂದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಗೀತಾಮೃತ ಸತ್ಸಂಗ ಕೇಂದ್ರದ ಶಾರದಾ ಗೋಪಾಲ್ ವಹಿಸಿದ್ದರು. ಸುಧಾ ವಿಶ್ವನಾಥ್ ಪ್ರಾರ್ಥನೆ, ಪುಷ್ಪ ಪ್ರಸಾದ್ ಸ್ವಾಗತ, ಮಾಲಾ ಮಂಜುನಾಥ್ ವಂದಿಸಿದರು.