ಮೇ೩೧: ಮಧು ಬಂಗಾರಪ್ಪರಿಗೆ ಅಭಿನಂದನೆ…
ಶಿವಮೊಗ್ಗ: ಜಿ ಕಾಂಗ್ರೆಸ್ ಸಮಿತಿ ವತಿಯಿಂದ ನೂತನ ಸಚಿ ವರಾಗಿ ಆಯ್ಕೆಯಾಗಿರುವ ಮಧು ಬಂಗಾರಪ್ಪ ಅವರನ್ನು ಮೇ.೩೧ ರಂದು ಅಭಿನಂದಿಸಲಾಗುವುದು ಎಂದು ಜಿ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿ ದರು.
ಅವರು ಇಂದು ಕಾಂಗ್ರೆಸ್ ಕಚೆ ರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆ ಸ್ ಅಧಿಕಾರಕ್ಕೆ ಬಂದಿದೆ. ಪೂರ್ಣ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಶಿವಮೊಗ್ಗ ಜಿಗೂ ಪ್ರಾತಿನಿಧ್ಯ ಸಿಕ್ಕಿದೆ. ಮಧು ಬಂಗಾರಪ್ಪ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಆಯ್ಕೆಯಾಗಿzರೆ. ಸಚಿವರಾದ ಮೇಲೆ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಮೇ ೩೧ ರಂದು ಬರಲಿzರೆ. ಅಂದು ಅವ ರನ್ನು ಜಿ ಕಾಂಗ್ರೆಸ್ ವತಿಯಿಂದ ಹೃತ್ಪೂರ್ವಕವಾಗಿ ಸ್ವಾಗತಿಸಿ ಸನ್ಮಾನಿಸಲಾಗುವುದು ಎಂದರು.
ಮಧು ಬಂಗಾರಪ್ಪ ಅವರು ಅಂದು ಬೆಳಗ್ಗೆ ೯.೩೦ ಕ್ಕೆ ಮಲವ ಗೊಪ್ಪದ ಸರ್ಕಾರಿ ಶಾಲೆಗೆ ಭೇಟಿ ನೀಡಲಿzರೆ. ಮಕ್ಕಳನ್ನು ಸ್ವಾಗತಿಸಿ ಶಾಲೆಯಲ್ಲಿ ಸಿಹಿ ಹಂಚಿ ಸೌಹಾರ್ದ ಭೇಟಿ ನೀಡಲಿzರೆ. ಅದಾದ ನಂತರ ಎಂ.ಆರ್.ಎಸ್. ವೃತ್ತದಿಂ ದ ಅವರನ್ನು ರ್ಯಾಲಿಯ ಮೂಲ ಕ ಮೆರವಣಿಗೆಯಲ್ಲಿ ಕರೆತರಲಾ ಗುವುದು. ಈಡಿಗ ಸಮುದಾಯ ಭವನದಲ್ಲಿ ಅಭಿನಂದಿಸಲಾಗು ವುದು ಎಂದರು.
ಮಧು ಬಂಗಾರಪ್ಪ ಅವರ ಜೊತೆಗೆ ಶಾಸಕರಾಗಿ ಆಯ್ಕೆಯಾಗಿ ರುವ ಬೇಳೂರು ಗೋಪಾಲ ಕೃಷ್ಣ ಮತ್ತು ಬಿ.ಕೆ. ಸಂಗಮೇಶ್ ಅವರನ್ನು ಸನ್ಮಾನಿಸಲಾಗುವುದು. ಈ ಕಾರ್ಯಕ್ರಮಕ್ಕೆ ಪಕ್ಷದ ಹಿರಿಯ ಮುಖಂಡರಾದ ಕಾಗೋ ಡು ತಿಮ್ಮಪ್ಪ ಸೇರಿದಂತೆ ಎ ಜನಪ್ರತಿನಿಧಿಗಳು , ಮಾಜಿ ಸಚಿವರು, ಶಾಸಕರು, ಪದಾಧಿಕಾರಿಗಳು, ಕಾಂಗ್ರೆಸ್ ಕಾರ್ಯ ಕರ್ತರು, ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಆಗಮಿಸಲಿzರೆ ಎಂದರು.
ಗೋಷ್ಠಿಯಲ್ಲಿ ಪ್ರಮುಖ ರಾದ ಜಿ.ಡಿ. ಮಂಜುನಾಥ್, ಕಲಗೋಡು ರತ್ನಾಕರ್, ಇಸ್ಮಾ ಯಿಲ್ ಖಾನ್, ಚಂದ್ರ ಭೂಪಾ ಲ್, ರೇಖಾ ರಂಗನಾಥ್, ಯ ಮುನಾ ರಂಗೇಗೌಡ, ಆರ್.ಸಿ. ನಾಯ್ಕ್, ಕಾಶಿ ವಿಶ್ವನಾಥ್, ಅಕ್ರಂ ಪಾಶಾ, ರವಿಕುಮಾರ್, ಚಂದ್ರ ಶೇಖರ್ ಮತ್ತಿತರರು ಇದ್ದರು.