ಮೇ 10: ಬಸವೇಶ್ವರರ ಜಯಂತಿ…
ಪ್ರತಿ ವರ್ಷವೂ ವೈಶಾಖ ಮಾಸದ ೩ನೇ ದಿನ ಬಸವ ಜಯಂತಿ ಆಚರಿಸಲಾಗುತ್ತದೆ.
ಹಿನ್ನೆಲೆ : ಬಸವಣ್ಣನವರು ವಿಜಯಪುರ ಜಿಯ ಬಾಗೇವಾಡಿಯಲ್ಲಿ ೧೨ನೇ ಶತಮಾನದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಮದರಸ ಮತ್ತು ತಾಯಿಯ ಹೆಸರು ಮಾದಲಾಂಬೆ. ಬಸವಣ್ಣನವರು ತಮ್ಮ ಬಾಲ್ಯವನ್ನು ಕೂಡಲಸಂಗಮದಲ್ಲಿ ಕಳೆದರು. ಕಳಚುರಿ ರಾಜ ಬಿಜ್ಜಳನ ಪುತ್ರಿ ಗಂಗಾಂಬಿಕೆಯನ್ನು ಬಸವಣ್ಣ ನವರು ವಿವಾಹ ವಾದರು. ಲೆಕ್ಕಪರಿಶೋಧಕರಾಗಿ ಕೆಲಸ ಮಾಡುತ್ತಿದ್ದ ಬಸವಣ್ಣ ನವರನ್ನು ಬಿಜ್ಜಳನು ತಮ್ಮ ಮುಖ್ಯಮಂತ್ರಿ ಯಾಗಲು ಆಹ್ವಾನಿಸಿದರು. ಕ್ರಮೇಣ ಬಸವಣ್ಣನವರು ಮಹಾನ್ ಕವಿ, ಸಮಾಜ ಸುಧಾರಕ ಮತ್ತು ದಾರ್ಶನಿಕರಾಗಿ ಹೆಸರು ಗಳಿಸಿದರು. ತಮ್ಮ ಕಾವ್ಯಗಳ ಮೂಲಕ ಸಾಮಾಜಿಕ ಜಗತಿಯನ್ನು ಪಸರಿಸಲು ಆರಂಭಿಸಿದರು. ಬಿಜ್ಜಳನ ಸಾಮ್ರಾಜ್ಯದ ಮುಖ್ಯಮಂತ್ರಿ ಯಾಗಿ, ಬಸವಣ್ಣ ಅನುಭವ ಮಂಟಪವನ್ನು ಪ್ರಾರಂಭಿಸಿದರು. ಇದು ನಂತರ ಎ ವರ್ಗದ ಜನರಿಗೆ ಜೀವನದ ಆಧ್ಯಾತ್ಮಿಕ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲು ಸಾಮಾನ್ಯ ಕೇಂದ್ರವಾಯಿತು.
ಸಮಾಜಕ್ಕೆ ಬಸವಣ್ಣನವರ ಕೊಡುಗೆಗಳು :
ಬಸವಣ್ಣನವರನ್ನು ದೇಶದ ಅತ್ಯುತ್ತಮ ಸಮಾಜ ಸೇವಕರಲ್ಲಿ ಒಬ್ಬರು ಎಂದೇ ಹೇಳಬಹುದು. ಮಾದಾರ ಚನ್ನಯ್ಯ ಆರಂಭಿಸಿದ ಭಕ್ತಿ ಆಂದೋಲನವನ್ನು ಬಸವಣ್ಣನವರು ಮುಂದು ವರೆಸಿದರು. ಭಕ್ತಿ ಚಳುವಳಿಯ ಎರಡನೇ ರೂಪವು ವಚನ ಸಾಹಿತ್ಯವನ್ನು ಆಧರಿಸಿದೆ. ಈ ಸುಧಾರಣೆಗಳ ಮೂಲಕ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ತಂದರು. ಜತಿ, ಬಣ್ಣ, ಆರ್ಥಿಕ ಸ್ಥಿತಿಯಲ್ಲಿ ವ್ಯತ್ಯಾಸವಿದ್ದರೂ ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಬಸವಣ್ಣನವರು ಸಾರಿದರು. ಅಕ್ಕಮಹಾದೇವಿ, ಅಲ್ಲಮ ಪ್ರಭುಗಳಂತಹ ಮಹಾನ್ ಸಮಾಜ ಸುಧಾರಕರು ಮತ್ತು ಕವಿಗಳನ್ನು ನಿರ್ಮಿಸಿದ ಶರಣ ಸಮುದಾಯವನ್ನು ಅಭಿವೃದ್ಧಿಪಡಿಸುವಲ್ಲಿ ಬಸವಣ್ಣ ಮಹತ್ವದ ಕೊಡುಗೆ ನೀಡಿzರೆ. ಅವರ ನಂಬಿಕೆಗಳು ಮತ್ತು ಬೋಧನೆಗಳು ಸಮಾಜದ ಮೇಲೆ ಬಹಳ ಪ್ರಭಾವ ಬೀರಿದವು. ಕೆಲವರು ಅವರ ಬೋಧನೆಯನ್ನು ಸಂಪೂರ್ಣವಾಗಿ ಅನುಸರಿಸಿ ದರು. ಬಸವಣ್ಣನವರು ಸಮಾಜದ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿದರು ಮತ್ತು ತಮ್ಮ ಆಳವಾದ ಸಾಮಾಜಿಕ eನ ಮತ್ತು ಕಾವ್ಯದ ಮೂಲಕ ಸಮಾಜವನ್ನು ಬದಲಾಯಿಸಲು ಪ್ರಯತ್ನಿಸಿದರು.
ಬಸವ ಜಯಂತಿಯನ್ನು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಆಚರಿಸುತ್ತಾರೆ.
ಬಸವಣ್ಣನವರು ಸಮಾಜ ದಲ್ಲಿ ಜತಿ, ವರ್ಣ, ಲಿಂಗ ಭೇದ ಎಂಬುದು ಇಲ್ಲ, ನಾವೆಲ್ಲರೂ ಸಮಾನರು ಎಂದು ಸಮಾಜಕ್ಕೆ ಸಂದೇಶ ಸಾರಿದವರು. ಆದ್ದರಿಂದಲೇ ಬಸವೇಶ್ವರರನ್ನು ಬಸವಣ್ಣ, ಬಸವ, ವಿಶ್ವಗುರು ಎಂದು ಕರೆಯಲಾಗುತ್ತದೆ.
ಬಸವ ಜಯಂತಿ ವಿಶೇಷವಾಗಿ ರೈತರಿಗೆ ಇದು ಪ್ರಮುಖ ದಿನವಾಗಿದೆ. ಈ ದಿನ ಲಿಂಗಾಯತ ಸಮಿತಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಹಲವಾರು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ಅನೇಕ ಜನರು ಬಸವಣ್ಣನವರು ಲಿಂಗೈಕ್ಯರಾದ ಕೂಡಲ ಸಂಗಮಕ್ಕೆ ಭೇಟಿ ನೀಡುತ್ತಾರೆ.
ಬಸವಣ್ಣನವರ ವಚನಗಳು :
೧. ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ.. ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ.. ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ.. ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು.. ಕೂಡಲಸಂಗಮದೇವ ||
೨. ನೀನೊಲಿದರೆ ಕೊರಡು ಕೊನರುವುದಯ್ಯ.. ನೀನೊಲಿದರೆ ಬರಡು ಹಯನಹುದಯ್ಯ.. ನೀನೊಲಿದರೆ ವಿಷವಮತವಹುದಯ್ಯ..
ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು.. ಕೂಡಲಸಂಗಮದೇವ||
೩. ಲೋಕದ ಡೊಂಕ ನೀವೇಕೆ ತಿದ್ದುವಿರಿ?.. ನಿಮ್ಮ ನಿಮ್ಮತನವ ಸಂತೈಸಿಕೊಳ್ಳಿ.. ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.. ನೆರೆಮನೆಯ ದುಃಖಕ್ಕೆ ಅಳುವರ ಮೆಚ್ಚ.. ನಮ್ಮ ಕೂಡಲ ಸಂಗಮದೇವ ||
೪. ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ.. ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯ.. ಕೂಡಲ ಸಂಗಮದೇವಯ್ಯ ನಿಮ್ಮ ಮನೆಯ ಮಗನೆಂದೆನಿಸಯ್ಯ ||
೫. ಗಂಡನ ಮೇಲೆ ಸ್ನೇಹ ವಿಲ್ಲದ ಹೆಂಡತಿ, ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ, ಇದ್ದರೇನೋ, ಶಿವಶಿವಾ, ಹೋದರೇನೋ! ಕೂಡಲ ಸಂಗಮ ದೇವ, ಕೇಳಯ್ಯ, ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ!
ಸೇರಿದಂತೆ ಬಸವಣ್ಣನವರು ಅನೇಕ ವಚನಗಳನ್ನು ರಚಿಸಿzರೆ.
ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು..
- ಮುರುಳೀಧರ್ ಹೆಚ್ ಸಿ
ಪತ್ರಕರ್ತರು, ಶಿವಮೆಗ್ಗ