ಮೇ ೧೦: ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ…
ಶಿವಮೊಗ್ಗ: ಮೇ ೧೦ರಂದು ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆ ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧವನ್ನು ಹೇರಲಾಗಿದೆ.
ಶಿವಮೊಗ್ಗ ಜಿ ಸಾಗರ ತಾಲೂಕಿನಲ್ಲಿರುವ ಜೋಗ ಜಲಪಾತ ವಿಶ್ವ ವಿಖ್ಯಾತವಾಗಿದೆ. ಮೇ ೧೦ರಂದು ಮತದಾನ ನಡೆಯಲಿದ್ದು, ಸರ್ಕಾರಿ ರಜೆ ನೀಡಲಾಗಿದೆ. ರಜ ದಿನವಾದ್ದ ರಿಂದ ಮತದಾನ ಮಾಡದೇ ಜನರು ಪ್ರವಾಸಕ್ಕೆ ಹೊರಡುತ್ತಾರೆ ಎಂಬ ಕಾರಣಕ್ಕಾಗಿ ಜೋಗ ಜಲಪಾತ ವೀಕ್ಷಣೆಯನ್ನು ನಿರ್ಬಂಧಿಸಿzರೆ.
ಜಲಪಾತ ವೀಕ್ಷಣೆ ನಿರ್ಬಂಧದ ಕುರಿತು ಜಲಪಾತದ ಹೊರ ಭಾಗದಲ್ಲಿ ಜೋಗ ನಿರ್ವಾಹಣಾ ಪ್ರಾಧಿಕಾರವು ಫ್ಲೆಕ್ಸ್ವೊಂದನ್ನು ಹಾಕಿದೆ. ಈ ಮೂಲಕ ಮತದಾನಕ್ಕೆ ಜಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿzರೆ.