ಹುತಾತ್ಮ ಯೋಧರ ಸ್ಮಾರಕ ನಗರಸಭೆ ಅಧ್ಯಕ್ಷೆ ಶೃತಿರಿಂದ ಉದ್ಘಾಟನೆ
ಭದ್ರಾವತಿ: ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮೇರಿ ಮಾಟಿ ಮೇರಾ ದೇಶ್ ಅಭಿಯಾನದ ವತಿಯಿಂದ ನಗರಸಭೆ ಕಚೇರಿ ಎದುರು ಇರುವ ಆಚಾರ್ಯ ವಿನೋಭಾ ಪಾರ್ಕ್ ನಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಹಾಗು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರ ಸ್ಮಾರಕವನ್ನು ನಿರ್ಮಿಸಿದ್ದು ನಗರಸಭೆ ಅಧ್ಯಕ್ಷೆ ಶೃತಿ ವಸಂತ ಕುಮಾರ್ ಉದ್ಘಾಟಿಸಿದರು.
ಉಪಾಧ್ಯಕ್ಷೆ ಸರ್ವಮಂಗಳಮ್ಮ, ಆಯುಕ್ತ ಮನುಕುಮಾರ್, ಸುಹಾಸಿನಿ, ಕವಿತಾ ರಾವ್, ನಿವೃತ್ತ ಯೋಧರ ಸಂಘದ ಮೇ.ವಿಕ್ರಂ ಕೆದಿಲಾಯ್, ಅಧ್ಯಕ್ಷ ಸುಭೇದಾರ್ ಎಲ್.ಬಿ. ಅಶೋಕ, ಪ್ರಧಾನ ಕಾರ್ಯದರ್ಶಿ ಗೀರೀಶ್, ಬೋರೇಗೌಡ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಕುಟುಂಬದವರು, ನಗರಸಭೆ ಅಧಿಕಾರಿ ಮತ್ತು ಸಿಬ್ಭಂದಿಗಳು ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಉದ್ಯಾನವನವದಲ್ಲಿ ವನ ಮಹೋತ್ಸವ ಪ್ರಯುಕ್ತ ಸಸಿಗಳನ್ನು ನೆಡಲಾಯಿತು. ನಗರಸಭಾ ವ್ಯಾಪ್ತಿಯ ಮಾಜಿ ಸೈನಿಕರಿಗೆ ನಗರಸಭೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ಸೈನಿಕರು ತಮ್ಮ ಸೇವೆಯ ಸಂದರ್ಭದ ದಿನಗಳ ನೆನಪುಗಳನ್ನು ಎಲ್ಲರೊಂದಿಗೆ ಹಂಚಿ ಕೊಂಡರು.