ಮಾ.26: ಸಾಧಕಿಯರಿಗೆ ಮಹಿಳಾ ಸ್ಪೂರ್ತಿ ರತ್ನ ಪ್ರಶಸ್ತಿ ಪ್ರದಾನ…

ಶಿವಮೆಗ್ಗ: ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್‌ನಿಂದ ಮಾ.೨೬ರ ನಾಳೆ (ಭಾನುವಾರ) ಬೆಳಿಗ್ಗೆ ೧೦ ಗಂಟೆಗೆ ನಗರದ ಬಿ.ಹೆಚ್. ರಸ್ತೆಯ ಸ್ಕೌಟ್ ಭವನದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕಿ ಯರಿಗೆ ರಾಜ್ಯಮಟ್ಟದ ಮಹಿಳಾ ಸ್ಪೂರ್ತಿ ರತ್ನ ಪ್ರಶಸ್ತಿ ಪ್ರಧಾನ ಹಾಗೂ ಕವಿಗೋಷ್ಟಿ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ ಜಿಧ್ಯಕ್ಷೆ ಅನಿತ ಕಷ್ಣ ಅವರು ತಿಳಿಸಿzರೆ.
ಪರಿಷತ್‌ನ ರಾಜಧ್ಯಕ್ಷ ಬಿ. ಶಿವಕುಮಾರ್ ಉಪಸ್ಥಿತಿಯಲ್ಲಿ ಬೆಂಗಳೂರಿನ ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಪ್ರೊ| ಅನುರಾಧ ಪಟೇಲ್ ಅವರು ಕಾರ್ಯಕ್ರಮ ಉದ್ಘಾಟಿಸ ಲಿದ್ದು, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಪ್ರಶಸ್ತಿ ಪ್ರಧಾನ ಮಾಡಲಿzರೆ.
ಅತಿಥಿಗಳಾಗಿ ಬಿಇಓ ನಾಗರಾಜ್, ಕ.ರಾ.ಪ್ರಾ.ಶಾ. ಶಿ. ಸಂಘದ ರಾಜ್ಯ ಸಹಕಾರ್ಯದರ್ಶಿ ಶ್ರೀಮತಿ ಸುಮತಿ ಕುಮಾರಸ್ವಾಮಿ, ದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಭದ್ರಾವತಿ ಪೇಪರ್‌ಟೌನ್ ಪ್ರೌಢಶಾಲೆ ದೈಹಿಕ ಶಿಕ್ಷಕ ಜ್ಯೂನಿಯರ್ ವಿಷ್ಣುವರ್ಧನ್ ಖ್ಯಾತಿಯ ಅಪೇಕ್ಷಾ ಮಂಜುನಾಥ್, ಸಾಹಿತಿ ರಜಿಯಾ, ಕ.ರಾ.ಶಿ.ಸಾ.ಪ ಗೌರವಾಧ್ಯಕ್ಷ ನಾಗರಾಜ್, ಭದ್ರಾವತಿಯ ಖ್ಯಾತ ವೈದ್ಯರಾದ ಡಾ| ಗಾಯತ್ರಿ, ಜಿಲ್ಲಾ ಖಜಾನೆ ಉಪನಿರ್ದೇಶಕಿ ಸಾವಿತ್ರಿ, ನಿವೃತ್ತ ಶಿಕ್ಷಕಿ ಡಾ| ಎನ್.ಆರ್. ಮಂಜುಳಾ, ನಿರ್ಮಲ ಸೇವಾ ಕೇಂದ್ರದ ಸಂಯೋಜಕಿ ಸಿಸ್ಟರ್ ಎಲಿಸ್ ಲೂರ್ದ್ ಆಗಮಿಸಲಿದ್ದು, ಪರಿಷತ್‌ನ ಜಿಲ್ಲಾಧ್ಯಕ್ಷೆ ಅನಿತ ಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಶಸ್ತಿ ಪುರಸ್ಕೃತರು:
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರಾದ ಪ್ರೊ| ಅನುರಾಧ ಪಟೇಲ್ (ನಿರ್ದೇಶಕರು, ಡಿ.ದೇ.ಅ. ಸಂ. ಬೆಂಗಳೂರು), ಶ್ರೀಮತಿ ರಜಿಯಾ (ಸಾಹಿತಿಗಳು, ಶಿವಮೊಗ್ಗ), ಶ್ರೀಮತಿ ಸಾವಿತ್ರಿ (ನಿರ್ದೇಶಕರು, ಜಿ.ಖ.ಇ, ಶಿವಮೊಗ್ಗ), ಶ್ರೀಮತಿ ಜ್ಯೋತಿ ಸೋಮಶೇಖರ್ (ಜಿಲ್ಲಾಧ್ಯಕ್ಷರು, ಕರವೇ, ಶಿವಮೊಗ್ಗ), ಶ್ರೀಮತಿ ಸವಿತಾ (ಸಮಾಜ ಸೇವಕರು, ಸಂಜೀವಿನಿ ವೃದ್ಧಾಶ್ರಮ, ಭದ್ರಾವತಿ), ಶ್ರೀಮತಿ ಲತಾ ರಾಜ್‌ಕುಮಾರ್ (ಶಿಕ್ಷಕಿ, ಅಧ್ಯಕ್ಷರು, ಕ.ರಾ.ಶಿ.ಸಾ.ಪ, ತೀರ್ಥಹಳ್ಳಿ), ಶ್ರೀಮತಿ ಬನಶಂಕರಿ (ಶಿಕ್ಷಕಿ, ಭದ್ರಾವತಿ), ಶ್ರೀಮತಿ ಜಿ. ಸುಮತಿ (ಸಹ ಕಾರ್ಯದರ್ಶಿ, ಕ.ರಾ.ಪ್ರಾ.ಶಾ.ಶಿ.ಸಂ, ಬೆಂಗಳೂರು), ಡಾ| ತ್ರಿವೇಣಿ (ಹಿಂದಿ ಭಾಷಾ ಶಿಕ್ಷಕಿ, ವಿಶ್ವೇಶ್ವರಯ್ಯ ವಿದ್ಯಾ ಸಂಸ್ಥೆ, ಭದ್ರಾವತಿ), ಡಾ| ಎನ್.ಆರ್. ಮಂಜುಳಾ( ನಿವೃತ್ತ ಶಿಕ್ಷಕಿ, ಶಿವಮೊಗ್ಗ), ಸಿಸ್ಟರ್ ಎಲಿಸ್ ಲೂರ್ದ್ (ಸಮಾಜ ಸೇವಕರು, ಶಿವಮೊಗ್ಗ), ಶ್ರೀಮತಿ ಮೇರಿ ಡಿಸೋಜ (ವೃತ್ತಿ ಶಿಕ್ಷಕರು, ಪುಷ್ಪಾಲಂಕೃತ ಕಲಾವಿದೆ, ಶಿವಮೊಗ್ಗ), ಶ್ರೀಮತಿ ಚಂದ್ರಕಾಂತಿ (ಜಾನಪದ ಕಲಾವಿದೆ, ಶಿವಮೊಗ್ಗ), ಶ್ರೀಮತಿ ಕೋಕಿಲ (ಶಿಕ್ಷಕಿ, ಭದ್ರಾವತಿ) ಇವರುಗಳಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು.
ಶ್ರೀಮತಿ ಸುರೇಖ, ಶ್ರೀಮತಿ ಸುಜಾತ ಬಸವರಾಜ್, ಅರಳೇಹಳ್ಳಿ ಅಣ್ಣಪ್ಪ, ರಂಗನಾಥ್, ನಾಗರತ್ನ ಕುಮಾರ್, ವಾಗೀಶ್ ಆರಾಧ್ಯ, ಹಸನ್ ಬೆಳ್ಳಿನಗನೂಡು, ಎಂ.ಬಿ. ಸಾವಿತ್ರಮ್ಮ , ಉಮಾಪತಿ ಗಂಗಾರಾಮ್, ಜೆ.ಎನ್. ಬಸವರಾಜಪ್ಪ, ಚನ್ನಬಸಪ್ಪ ಇವರುಗಳಿಂದ ಕವಿಗೋಷ್ಠಿ ನಡೆಯಲಿದು, ಆಸಕ್ತ ಶಿಕ್ಷಕರು, ಸಾಹಿತಿಗಳು, ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಪರಿಷತ್‌ನ ಪದಾಧಿಕಾರಿಗಳು ಕೋರಿzರೆ.