ಮಾ.30: ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಬೃಹತ್ ಕಾಲ್ನಡಿಗೆ ಜಥಾ…

ಶಿವಮೊಗ್ಗ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜರಿಗೊಳಿಸಲು ಆಗ್ರಹಿಸಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವು ದನ್ನು ವಿರೋಧಿಸಿ ಬಂಜರ ವಿದ್ಯಾರ್ಥಿ ಸಂಘಟನೆಯ ನೇತೃತ್ವ ದಲ್ಲಿ ಬಂಜರ ಸಮಾಜ, ಮಾ.೩೦ರಂದು ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಬೃಹತ್ ಕಾಲ್ನಡಿಗೆ ಜಥಾ ಆಯೋಜಿಸಿದೆ ಎಂದು ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಂಚಾಲಕ ಗಿರೀಶ್ ಹೇಳಿದರು.
ಅವರು ಪತ್ರಿಕಾಗೋಷ್ಠಿ ಯಲ್ಲಿ ಮತನಾಡಿ, ರಾಜ್ಯ ಸರ್ಕಾರ ಒಳಮೀಸಲಾತಿಗೆ ಸಂಬಂಧಿಸಿದಂತೆ ಸದಾಶಿವ ಆಯೋಗದ ವರದಿ ಯನ್ನು ಜರಿಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡಿರುವುದು ರಾಜ ಕೀಯ ಪ್ರೇರಿತವಾಗಿದೆ. ವೋಟಿ ಗಾಗಿ ಮೀಸಲಾತಿಯ ವರ್ಗೀ ಕರಣ ಶಿಫಾರುಸ ಮಾಡಿದೆ. ಇದನ್ನು ವಿರೋಧಿಸಿ ಈಗಾಲೇ ಬಂಜರ ಸಮುದಾಯ ಮತ್ತು ಇತರ ಸಮುದಾಯಗಳು ಬಹುದೊಡ್ಡ ಹೋರಾಟವನ್ನೇ ಹಮ್ಮಿಕೊಂಡಿವೆ. ರಾಜ್ಯ ಸರ್ಕಾರದ ಈ ಚುನಾವಣೆಯ ಸಂದರ್ಭದ ಗಿಮಿಕ್ ವಿರೋಧಿಸಿ ನಾವು ಕಾಲ್ನಡಿಗೆ ಜಥಾ ಹಮ್ಮಿಕೊಂಡಿ ದ್ದೇವೆ ಎಂದರು.
ಶಿಕಾರಿಪುರದಲ್ಲಿ ನಡೆದ ಘಟನೆಗೆ ಸಂಬಧಿಸಿದಂತೆ ಮಾತನಾ ಡಿದ ಅವರು, ಇದೊಂದು ದುರ ದೃಷ್ಟಕರ. ನಾವು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ನಿಜ. ಆದರೆ ನಮ್ಮ ಪ್ರತಿಭಟನೆ ತಹಸೀಲ್ದಾರ್ ಕಚೇರಿ ಎದುರು ನಡೆಯುತ್ತಿತ್ತು. ಪ್ರತಿಭಟನೆಯನ್ನು ಹತಿಕ್ಕುವ ಉದ್ದೇಶದಿಂದ ಅಲ್ಲಿ ನಮಗೆ ಅವಕಾಶ ನೀಡದೆ, ಮನವಿ ಸ್ವೀಕರಿಸದೆ ಗೇಟ್ ಹಾಕಿದರು. ಇದನ್ನು ಪ್ರಶ್ನಿಸಲು ನಾವು ನಮ್ಮ ಕ್ಷೇತ್ರದ ಶಾಸಕರು ಹಾಗೂ ಸಂಸದರ ಮನೆಗೆ ಹೋದೆವು ಎಂದರು.
ಆದರೆ ಅಲ್ಲಿನಮ್ಮನ್ನು ಪೊಲೀ ಸರು ತಡೆದುದಲ್ಲದೆ ಪ್ರತಿಭಟ ನಕಾರರ ಮೇಲೆ ಲಾಠಿ ಪ್ರಹಾರ ನಡೆಸಿದರು. ಹವರನ್ನು ಬಂಧಿಸಿದರು. ಇದನ್ನು ನಾವು ಖಂಡಿಸು ತ್ತೇವೆ ಮತ್ತು ಘಟನೆಗೆ ಸಂಬಂಧಿಸಿದಂತೆ ಕೆಲವರು ಯಡಿಯೂರಪ್ಪ ಮನೆ ಮೇಲೆ ಕಲ್ಲು ಬೀಸಿರಬ ಹುದು. ಇದು ದುರದೃಷ್ಟಕರ Wಟನೆ. ಪೊಲೀಸರು ನಿಜವಾಗಿ ಯಾರು ತಪ್ಪು ಮಾಡಿzರೋ ಅವರನ್ನು ಬಂಧಿಸಲಿ ಬೇಡ ಎನ್ನುವುದಿಲ್ಲ. ಆದರೆ ಅಮಾಯಕ ರನ್ನು, ಪ್ರತಿಭಟನೆಯಲ್ಲಿ ಭಾಗವ ಹಿಸದಿರುವವರನ್ನು ಕೂಡ ಬಂಧಿಸಿzರೆ. ಮತ್ತು ಕಾಂಗ್ರೆಸ್ ಕಾರ್ಯ ಕರ್ತರು ಎಂಬ ಕಾರಣಕ್ಕೆ ಬಂಧಿಸಿzರೆ ಇದು ಸರಿಯಲ್ಲ ಎಂದರು.
ಈ ಇಡೀ ಘಟನೆ ಈಗ ರಾಜಕೀಯ ಬಣ್ಣಕ್ಕೆ ತಿರುಗಿದೆ. ಪ್ರತಿಭಟನೆಗೆ ಕಾಂಗ್ರೆಸ್ ಕಾರಣ ಎಂದ ಮುಖ್ಯಮಂತ್ರಿ ಹೇಳುತ್ತಾರೆ. ಆದರೆ ಸ್ವತಃ ಬಿಎಸ್‌ವೈ ಅವರು ನಾನು ಯಾರ ಮೇಲೂ ತಪ್ಪು ಹೊರಿಸುವುದಿಲ್ಲ ಎಂದು ಹೇಳುತ್ತಾರೆ. ನಿಜವಾಗಿಯೂ ಈ ಪ್ರತಿಭಟ ನೆಯಲ್ಲಿ ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಹೀಗೆ ಎ ಪಕ್ಷದ ವರೂ ಇzರೆ. ಇದು ಪಕ್ಷಾತೀತ ಹೋರಾಟ ವಾಗಿದೆ. ಆದರೆ ಬಿಜೆಪಿ ಇದನ್ನು ರಾಜಕಾರಣಗೊಳಿಸು ತ್ತಿರುವುದು ಸರಿಯಲ್ಲ ಎಂದರು.
ನಮ್ಮ ಪ್ರಮುಖ ಬೇಡಿಕೆಗಳೆಂದರೆ, ಶಿಕಾರಿಪುರದಲ್ಲಿ ನಿನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಲಾಗಿದೆ. ಸುಮಾರು ೨೫ಕ್ಕೂ ಹೆಚ್ಚು ಅಮಾಯಕರ ವಿರುದ್ದ ಕೇಸು ದಾಖಲಿಸಲಾಗಿದೆ. ಕೂಡಲೇ ಬಂಧಿತರ ಬಿಡುಗಡೆಯಾಗಬೇಕು. ಕೇಸು ವಾಪಾಸು ತೆಗದುಕೊಳ್ಳ ಬೇಕು. ಮತ್ತು ಕೇಂದ್ರಕ್ಕೆ ನೀಡಿದ ಶಿಫಾರಸನ್ನು ವಾಪಾಸು ಪಡೆಯ ಬೇಕು ಹಾಗೂ ನಮ್ಮ ಸಮಾಜದ ಪ್ರಮುಖರು ಬಿಜೆಪಿಯಲ್ಲಿ ಗುರುತಿಸಿಕೊಂಡಿzರೆ. ವರದಿ ವಾಪಾಸು ತರಿಸಿಕೊಳ್ಳದಿದ್ದರೆ ಅವರು ರಾಜೀನಾಮೆ ಕೊಡಬೇಕು ಮತ್ತು ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸ ಲಾಗುವುದು ಎಂದರು.
ಮಾ.೩೦ರಂದು ಶಿವಮೊಗ್ಗ ದಿಂದ ಶಿಕಾರಿಪುರಕ್ಕೆ ಕಾಲ್ನಡಿಗೆ ಜಥಾದ ಮೂಲಕ ನಾವು ತಲು ಪುತ್ತೇವೆ. ನ ಮಗೆ ಪ್ರತಿಭಟನೆಗೆ ಅವಕಾಶ ನೀಡದೆ ಹೋದರೆ ನಮ್ಮೆಲ್ಲರನ್ನು ಸಾಮೂಹಿಕವಾಗಿ ಬಂಧಿಸಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿನಯ್ ರಾಜವತ್, ಉಮಾಮಹೆಶ್ವರ ನಾಯ್ಕ, ಬಸವರಾಜ ನಾಯ್ಕ, ಶಶಿ ನಾಯ್ಕ, ಚಿತ್ರಪ್ಪ, ಅಭಿಷೇಕ್ ಸೇರಿದಂತೆ ಹಲವರಿದ್ದರು.