ಸಮಯದ ಸದುಪಯೋಗ ಮಾಡಿಕೊಂಡು ಪರೀಕ್ಷೆಯಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಿ

IMG_20230911_113010

ರಾಣೇಬೆನ್ನೂರು : ವಿದ್ಯಾರ್ಥಿ ಗಳು ಜೀವನದಲ್ಲಿ ಕಷ್ಟಪಟ್ಟರೆ ಸುಖದ ಹೆಬ್ಬಾಗಿಲು ತಾನೇ ತೆರೆದು ಕೊಳ್ಳುತ್ತದೆ. ಇರುವ ಕಡಿಮೆ ಸಮಯದಲ್ಲಿ ಓದು ಬರಹಕ್ಕೆ ಒತ್ತು ನೀಡಿ ಸಮಯದ ಸದುಪಯೋಗ ಮಾಡಿಕೊಂಡು ಪರೀಕ್ಷೆಯಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಿರಿ ಎಂದು ರಾಣೇಬೆನ್ನೂರಿನ ಶ್ರಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ಶ್ರಿ ಪ್ರಕಾಶಾನ ಂದಜಿ ಮಹಾರಾಜ್ ಹೇಳಿದರು.
ಸುಮಾರು ೪೩ ವರ್ಷಗಳಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ನಗರದ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಏರ್ಪ ಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿ ದರು. ಇದೀಗ ಹಚ್ಚಿದ ಈ ಜ್ಯೋತಿ ನಿಮ್ಮ eನದ ಬೆಳಕನ್ನು ಪಸರಿ ಸುವಂಥದು. ಅಷ್ಟದಿಕ್ಕುಗಳಲ್ಲಿ ಬೆಳಕನ್ನು ಬೀರಿದಂತೆ ನಿಮ್ಮ ಪ್ರತಿಭೆ ಬೆಳಗಲಿ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಡಾ.ಶಿವಕುಮಾರ ಬಿ ಮಾತನಾಡಿ ಪಠ್ಯದ ಜೊತೆಗೆ ಪಠ್ಯೇತರ ಚಟು ವಟಿಕೆಗಳಲ್ಲೂ ನಿಮ್ಮ ಪ್ರತಿಭೆ ಯನ್ನು ಬೆಳೆಸಿಕೊಳ್ಳಿ ಹಾಗೆ ನಿಮ್ಮ ಮುಂದಿನ ಜೀವನ ಸುಖ , ನೆಮ್ಮ ದಿಯಿಂದ ಕೂಡಿರಲಿ ಎಂದರು.
ಡೀನ್ ಅಕ್ಯಾಡೆಮಿಕ್ ಡಾ.ಎಸ್.ಎಫ್. ಕೊಡದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಭಾಗದ ಮುಖ್ಯಸ್ಥರಾದ ಪ್ರೊ.ಸಿ.ಎಂ.ಪರಮೇಶ್ವರಪ್ಪ , ಡಾ.ಎಸ್.ಜಿ. ಮಾಕನೂರು, ಡಾ.ಬಿ.ಮಹೇಶ್ವರಪ್ಪ , ಡಾ.ಜೆ. ಓ.ಕಿರಣ್ , ಪ್ರೊ. ಜಗನ್ನಾಥ್ , ಡಾ.ಡಿ.ಎಸ್. ವಿಶ್ವನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು. ಶ್ರೀನಿಧಿ ಬಾಳಿಗರ್ ಪ್ರಾರ್ಥನೆ ಮಾಡಿದರು. ಡಾ.ಎಂ.ಈ.ಶಿವಕುಮಾರ ಹೊನ್ನಾಳಿ ಸ್ವಾಗತಿಸಿದರು. ಪ್ರೊ .ಎಸ್. ವಿಶ್ವನಾಥ್ ವಂದಿಸಿದರು. ಪ್ರೊ.ಎಸ್.ಪಿ.ಭಾವನಾ ಕಾರ್ಯಕ್ರಮ ನಿರೂಪಿಸಿದರು.