ಜಿಲ್ಲಾಡಳಿತದಿಂದ ಮಹಾವೀರ ಜಯಂತಿ ಆಚರಣೆ…

ಶಿವಮೊಗ್ಗ: ಜಿಡಳಿತ ಮತ್ತು ದಿಗಂಬರ ಜೈನ್ ಸಮಾಜದ ವತಿಯಿಂದ ಭಗವಾನ್ ಶ್ರೀ ಮಹಾವೀರ ಜಯಂತಿಯನ್ನು ಇಂದು ಕುವೆಂಪು ರಂಗಮಂದಿರ ದಲ್ಲಿ ಭಗವಾನ್ ಶ್ರೀ ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್. ಪ್ರಮುಖರಾದ ಪ್ರಭಾಕರ ಗೋಗಿ, ಜಯರಾಜ್ ಬಿ., ಪುರುಷೋತ್ತಮ್, ಸಂಪತ್ ಕುಮಾರ್, ಕುಬೇರಪ್ಪ ಹಾಗೂ ಜೈನ್ ಸಮಾಜದ ಪ್ರಮುಖರು ಹಾಜರಿದ್ದರು.