ಮಾಡಿದುಣ್ಣೋ ಮಹರಾಯ: ಸಿಎಂಗೆ ಕುಟುಕಿದ ಚನ್ನಿ

chi

ಶಿವಮೊಗ್ಗ : ಅಬಕಾರಿ ಇಲಾಖೆಯ ಅಧಿಕಾರಿ ಗಳ ವರ್ಗಾವಣೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಅಬಕಾರಿ ಸಚಿವರ ನಡುವೆ ಪೈಪೋಟಿ ನಡೆದಿದ್ದು, ನೂರಾರು ಕೋಟಿ ಅವ್ಯವಹಾರ ಬಯಲಿಗೆ ಬಂದಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿzರೆ.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಈಗಾಗಲೆ ಮಧ್ಯ ಮಾರಾಟಗಾರರ ಸಂಘವೇ ರಾಜ್ಯಪಾಲರಿಗೆ, ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಲಿಖಿತ ದೂರು ನೀಡಿದೆ. ಅಬಕಾರಿ ಇಲಾಖೆ ಅಧಿಕಾರಿಗಳ ವರ್ಗಾ ವಣೆಯ ವಿಚಾರದಲ್ಲಿ ಅಬಕಾರಿ ಸಚಿವ ಅರ್.ಬಿ ತಿಮ್ಮಾಪುರ್ ಅವರ ಮಕ್ಕಳು ಹಸ್ತಕ್ಷೇಪ ಮಾಡುತ್ತಿದ್ದು, ಮುಖ್ಯಮಂತ್ರಿಗಳು ಈ ಪಟ್ಟಿಯನ್ನು ತಡೆ ಹಿಡಿದಿzರೆ. ಇದರಿಂದ ಕೋಟ್ಯಾಂತರ ರೂಪಾಯಿಗಳ ಹಣದ ಅವ್ಯವಹಾರ ಬಯಲಿಗೆ ಬಂದಿದೆ ಎಂಬ ಮಾಹಿತಿ ತಿಳಿದು ಬಂದಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿ ಕೊಳ್ಳುವಂತಾಗಿದ್ದು, ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿರುವುದಕ್ಕೆ ಸಾಕ್ಷಿಯಾಗಿದೆ ಬಿ.ವೈ ರಾಘವೇಂದ್ರ ಆರೋಪಿಸಿzರೆ.
ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಮಾತನಾಡಿ, ಮಾಡಿದ್ದುಣ್ಣೋ ಮಹಾರಾಯ ಎಂಬ ಸ್ಥಿತಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬಂದಿದೆ ಎಂದು ಕುಟುಕಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಸದನದಲ್ಲಿ ಅವಕಾಶ ಕೊಡಲೇ ಇಲ್ಲ. ಹೊರಗಡೆಗೆ ಚರ್ಚೆ ಮಾಡಿದ್ದರು. ಹಾಗಾಗಿ ಈ ಸ್ಥಿತಿ ಅವರಿಗೆ ಬಂದಿದ್ದು, ಲೋಕಾಯುಕ್ತ ಮುಂದೆ ತನಿಖೆ ನಡೆಸಬೇಕಾಗಿದೆ. ಆದರೆ, ಅವರು ಪರಿಪೂರ್ಣರಾಗಲು ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದು ಸವಾಲು ಹಾಕಿದರು.