ಮಾ ಮುಝೆ ಟ್ಯಾಗೋರ್ ಬನಾದೆ ನಾಟಕ ಪ್ರದರ್ಶನ
ಶಿವಮೊಗ್ಗ: ದೇಶಾದ್ಯಂತ ಸುಮಾರು ೮೦೦ ನಗರಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡ ಏಕ ವ್ಯಕ್ತಿ ರಂಗ ಪ್ರಯೋಗವಾದ ಮಾ ಮುಝೆ ಟ್ಯಾಗೋರ್ ಬನಾದೆ ನಾಟಕವನ್ನು ನಟ ಲಕ್ಕಿ ಗುಪ್ತ ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು.
ಕೆಡಬ್ಲ್ಯುಜೆಎ ಜಿ ಶಾಖೆ, ಸಹ್ಯಾದ್ರಿ ಕಲಾ ಕಾಲೇಜಿನ ಕನ್ನಡ ವಿಭಾಗ, ಕಲಾ ತಂಡ ಇವರ ಆಶ್ರಯದಲ್ಲಿ ಆಯೋಜಿ ಸಲಾಗಿದ್ದ ಏಕವ್ಯಕ್ತಿ ರಂಗ ಪ್ರಯೋಗ ಉದ್ಘಾಟಿಸಿ ಮಾತನಾಡಿದ ಸಂಘದ ಉಪಾಧ್ಯಕ್ಷ ಹಾಲಸ್ವಾಮಿ, ನಾಟಕದಿಂದ ಒಂದು ಸಮರ್ಥ ಶಕ್ತಿ ಬರುತ್ತದೆ. ವಿದ್ಯಾರ್ಥಿಗಳು ನಾಟಕ ವನ್ನು ಓದಬೇಕು. ಅಭಿನಯಿಸ ಬೇಕು ಮತ್ತು ಬರೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಅವಿನಾಶ್ ಮಾತನಾಡಿ, ರಂಗ ಭೂಮಿ ಎಂದರೆ ಅದೊಂದು ಕಲಿಕೆಯ ತಾಣ. eನ ವಿಸ್ತರಿಸುವ ಮಾರ್ಗ. ಸಹ್ಯಾದ್ರಿ ಕಾಲೇಜ್ ಕಲೆಗಳ ತವರೂರಾಗಿದೆ. ಇಂತಹ ಕಾಲೇಜಿನಲ್ಲಿ ಈ ರೀತಿಯ ವಿಭಿನ್ನ ವಾದ ನಾಟಕಗಳು ಪ್ರದರ್ಶನವಾ ಗುತ್ತಿರುವುದು ಸ್ವಾಗತಾರ್ಹ ಎಂದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ.ಕೆ. ಎನ್. ಮಂಜುನಾಥ್, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಹಾಲಮ್ಮ, ಸಹ ಪ್ರಾಧ್ಯಾಪಕ ಡಾ. ಮರ್ಗನಳ್ಳಿ ಪ್ರಕಾಶ್, ಡಾ. ಮೋಹನ್ ಚಂದ್ರಗುತ್ತಿ, ಸಹ್ಯಾದ್ರಿ ಕಲಾ ತಂಡದ ಸಂಚಾಲಕ ಜಿ.ಆರ್. ಲವ ಸೇರಿದಂತೆ ಇನ್ನಿತರರಿದ್ದರು.