ಶಿವನ ವೀರ ಅವತಾರ ರುದ್ರ ಸ್ವರೂಪಿ ವೀರಭದ್ರ…

ಶ್ರೀ ವೀರಭದ್ರ ಸ್ವಾಮಿ ದೇವರೆಂದರೆ ಕೋಪ, ತಾಪ, ಪ್ರತಾಪ, ರುದ್ರ ಸ್ವರೂಪ. ಬೆಂಕಿ ಚೆಂಡೆಂದೇ ಪ್ರಖ್ಯಾತಿ. ಆದರೆ ನಂಬಿದ ಭಕ್ತರಿಗೆ ಶಾಂತಿ, ಕರುಣೆಯ ಮೂರ್ತಿ. ಇಂತಹ ವೈರುದ್ಧ ಹೊಂದಿರುವ ಅಪರೂಪದ ದೇವರಲ್ಲಿ ಶ್ರೀ ವೀರಭದ್ರ ಸ್ವಾಮಿಗೆ ಅಗ್ರಸ್ಥಾನ.
ಅ.. ಹ.. ಹಾ… ರುದ್ರ.. ಅಹಹ ದೇವ.. ವಿಪರೀತ ನಾಯಕ, ಛಲದಂಕ ಮಲ್ಲ, ಭಂಡೇವರ ಗಂಡ, ನವಬ್ರಹ್ಮದೊಳ್ ಮೇಲಾದ ದಕ್ಷ ಬ್ರಹ್ಮನ ಶಿರ ಹರಿದು, ಹರಿದ ತಲೆಗೆ ಟಗರು ತಲೆಯನ್ನಿಟ್ಟ ದೊರೆಯೇ, ನಿನಗಾರು ಸರಿಯೇ? ನಿನ್ನ ಪವಾಡ ಅಂದಿಗುಂಟು ಇಂದಿಗಿಲ್ಲ ಎನ್ನುವ ಶತದ್ರೋಹಿಗಳಿಗೆ ನೀನೇ ಗಂಡ ಕಡೆಕ್ಕಡೆ..!
ಈ ಒಡಪುಗಳನ್ನು ಸಮಾಳದ ಶಬ್ದದೊಂದಿಗೆ ಕೇಳಿದಾಗ ರೋಮಾಂಚನವಾಗುತ್ತದೆ, ಮೈ ಜುಂ ಎನ್ನುತ್ತದೆ, ಮನ ಮುದಗೊಳ್ಳುತ್ತದೆ. ಭಕ್ತರು ಶ್ರೀ ವೀರಭದ್ರ ಸ್ವಾಮಿಯ ನೆನೆಯುತ್ತಾ ಭಕ್ತಿಯ ಭಾವ ಪರವಶತೆ ಯಲ್ಲಿ ತೇಲಿ ಬಿಡುತ್ತಾರೆ. ವೀರಭದ್ರಸ್ವಾಮಿಯೆಂದರೆ ಖಡಕ್ ದೇವರು ಎಂದೇ ಎ ಭಕ್ತರು ನಂಬಿzರೆ. ನಂಬಿದ ಭಕ್ತರನ್ನು ದೇವರು ಎಂದಿಗೂ ಕೈ ಬಿಡುವುದಿಲ್ಲ ಎಂಬುದು ಅಚಲವಾದ ನಂಬಿಕೆ. ಇಂತಹ ಲೋಕಪಾಲಕ ಶ್ರೀ ವೀರಭದ್ರ ಸ್ವಾಮಿಯ ಅದ್ಧೂರಿ ಜಯಂತ್ಯುತ್ಸವಕ್ಕೆ ಮಲೆನಾಡಿನ ಹೆಬ್ಬಾಗಿಲೆಂದೇ ಹೆಸರಗಿರುವ ಶಿವವಮೊಗ್ಗ ಸಜಗಿದೆ. ಸೆ.೨೩ರಂದು ಜಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯು ಅದ್ಧೂರಿಯಾಗಿ ಸಂಗೀತಯುಕ್ತ ಇಷ್ಟಲಿಂಗ ಪೂಜೆ ಹಾಗೂ ಧರ್ಮಸಭೆಯೊಂದಿಗೆ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವವನ್ನು ಹಮ್ಮಿಕೊಂಡಿದೆ.


ಶ್ರೀ ವೀರಭದ್ರ ಸ್ವಾಮಿಯ ಚರಿತ್ರೆ:
ಹಿಂದೆ ದಕ್ಷ ಮಹಾರಾಜನು ತನಗೆ ಇಷ್ಟವಿಲ್ಲದಿದ್ದರೂ ತನ್ನ ಮಗಳಾದ ಸತಿಯ ಅಪೇಕ್ಷೆಯಂತೆ ಪರಶಿವನಿಗೆ ಧಾರೆ ಎರೆದು ವೈಭೋಗದೊಂದಿಗೆ ವಿವಾಹ ಮಾಡುತ್ತಾನೆ. ಪರಶಿವನು ಸತಿಗೆ eನದ ಮಾರ್ಗ ಮತ್ತು ಭಕ್ತಿಯ ಮಾರ್ಗದ ಬಗ್ಗೆ ಬೋಧಿಸುತ್ತಾನೆ. ಒಮ್ಮೆ ದಕ್ಷ ಮಹಾರಾಜನು ಲೋಕಕಲ್ಯಾಣಾರ್ಥ ದೊಡ್ಡ ಪ್ರಯಾಗದಲ್ಲಿ ಹೋಮ, ಹವನಗಳನ್ನು ಆಯೋಜಿಸಿದ್ದನು. ಆ ಒಂದು ದೊಡ್ಡ ಯಾಗದಲ್ಲಿ ಬ್ರಹ್ಮ, ವಿಷ್ಣ್ಣು ಮತ್ತು ಎಲ್ಲ ದೇವಾನುದೇವತೆಗಳು, ಋಷಿ ಮುನಿಗಳನ್ನು ವಿಶೇಷವಾಗಿ ಆಹ್ವಾನಿಸಿದ್ದನು. ಆದರೆ, ಪರಶಿವನನ್ನು ಮಾತ್ರ ಆಹ್ವಾನಿಸಿರಲಿಲ್ಲ. ಇದನ್ನು ತಿಳಿದ ಸತಿಯು ಕೋಪಗೊಂಡು ತನ್ನ ತಂದೆ ದಕ್ಷ ಮಹಾರಾಜನು, ತನ್ನ ಪತಿ ಶಿವನನ್ನು ಇಂತಹ ಲೋಕ ಕಲ್ಯಾಣದ ಮಹಾಕಾರ್ಯಕ್ಕೆ ಕರೆಯದೆ ಅವಮಾನಮಾನಿಸಿzರೆ. ಈ ರೀತಿ ಕೆಟ್ಟದಾಗಿ ನಡೆದುಕೊಂಡ ತನ್ನ ತಂದೆ ದಕ್ಷ ಮಹಾರಾಜನನ್ನು ಈ ವಿಚಾರ ವಾಗಿ ಕೇಳಲು, ಪರಶಿವನ ಅನುಮತಿ ಯನ್ನು ಪಡೆದು ಶಿವನ ಅಂಗ ರಕ್ಷಕರು, ಋಷಿಗಳು ಮತ್ತು ನಂದೀಶ್ವರರ ಸಮೇತವಾಗಿ ಅಲ್ಲಿಗೆ ಬರುತ್ತಾಳೆ. ದಕ್ಷ ಮಹಾರಾಜನಿಗೆ ಕೈ ಮುಗಿದು ಸತಿಯು ತನ್ನ ಪತಿಯಾದ ಪರಶಿವನನ್ನು ಮಹಾಕಾರ್ಯಕ್ಕೆ ಆಹ್ವಾನಿಸಿಲ್ಲವೇಕೆ ಎಂದು ಪ್ರಶ್ನಿಸುತ್ತಾಳೆ. ಆ ಸಂದರ್ಭ ದಕ್ಷ ಮಹಾರಾಜನು ಕೋಪದಿಂದ ಶಿವನನ್ನು ಹೀಗಳೆದು, ಅವಹೇಳನದ ಮಾತುಗಳನ್ನಾಡಿ ಎಲ್ಲರೆದುರು ಸತಿಯನ್ನು ಅವಮಾನಿಸುತ್ತಾನೆ. ಅವಮಾನಿತಳಾದ ಸತಿಯು ತಂದೆ ದಕ್ಷ ಮಹಾರಾಜನಿಗೆ ನೀನು ನರಕಕ್ಕೆ ಹೋಗು ಎಂದು ಶಾಪವಿತ್ತು ಉರಿಯುತ್ತಿದ್ದ ಹೋಮಕ್ಕೆ ಹಾರಿ ಅಗ್ನಿ ಪ್ರವೇಶಿಸಿ ತನ್ನ ದೇಹವನ್ನು ತ್ಯಾಗ ಮಾಡುತ್ತಾಳೆ. ಇದರಿಂದ ಕೋಪಗೊಂಡು ಸತಿಯ ಅಂಗರಕ್ಷಕರು ಮತ್ತು ಋಷಿಗಳು ದಕ್ಷನ ಸೈನಿಕರ ಮೇಲೆ ಹೋರಾಟಕ್ಕಿಳಿಯುತ್ತಾರೆ. ಇದನ್ನು ನೋಡುತ್ತಿದ್ದ ಬ್ರುಹು ಮಹರ್ಷಿಯು ಹೋಮಕ್ಕೆ ಹವೀಸ್‌ನ್ನು ಸುರಿದಿದ್ದರಿಂದ ಸಾವಿರಾರು ಸೈನಿಕರು ಜನ್ಮ ತಳೆದು ಶಿವನ ಅಂಗ ರಕ್ಷಕರ ಮೇಲೆರಗುತ್ತಾರೆ.
ಅಲ್ಲಿಂದ ತಪ್ಪಿಸಿಕೊಂಡ ಬಂದ ಅಂಗ ರಕ್ಷಕರು ಮತ್ತು ಋಷಿಗಳು, ಕೈಲಾಸಕ್ಕೆ ತೆರಳಿ ನಡೆದ ಘಟನೆಯನ್ನು ಪರಶಿವನಲ್ಲಿ ಹೇಳಿಕೊಳ್ಳುತ್ತಾರೆ. ಇದರಿಂದ ಕೋಪಗೊಂಡ ರೌದ್ರ ತಾಂಡವನಾಡುತ್ತಾ ಶಿವನು ತನ್ನ ತಲೆಯಲ್ಲಿ ಕಟ್ಟಿದ್ದ ಮುಡಿಯನ್ನು ಬಿಚ್ಚಿ ಶಿಖರದ ತುದಿಗೆ ಜೋರಾಗಿ ಬಡಿಯುತ್ತಾನೆ, ಆಗ ಇಡೀ ಲೋಕವೆ ನಡುಗಿ ಭಯಾನಕ ಶಬ್ದದೊಂದಿಗೆ ಶಿಖರವು ಇಬ್ಬಾಗವಾಗುತ್ತದೆ.
ಇದರ ಒಂದು ಭಾಗದಿಂದ ಶ್ರೀ ವೀರಭದ್ರನು, ಇನ್ನೊಂದು ಭಾಗದಿಂದ ಶ್ರೀ ಮಹಾಕಾಳಿಯು ಜನ ತಾಳುತ್ತಾರೆ. ಶ್ರೀ ವೀರಭದ್ರನು ಶಿವನ ಮುಂದೆ ನಮಿಸುತ್ತಾ ಶಿರ ಭಾಗಿ ನಿಂತು ಕೊಳ್ಳುತ್ತಾನೆ. ಆಗ ಶಿವನು ಎಲೈ ವೀರಭದ್ರನೇ ಈಗಿಂದೀಗಲೇ ಹೋಗಿ ದಕ್ಷನನ್ನು ಸಂಹಾರ ಮಾಡಿ ಬಾ ಎಂದು ಆe ಮಾಡುತ್ತಾನೆ. ಶ್ರೀ ವೀರಭದ್ರನು, ಮಹಾಕಾಳಿ ಹಾಗೂ ತನ್ನ ದೊಡ್ಡ ಸೈನ್ಯದೊಂದಿಗೆ ಸೇರಿ ದಕ್ಷನ ವಿರುದ್ಧ ಯುದ್ಧವನ್ನು ಮಾಡುತ್ತಾರೆ, ದಕ್ಷನ ಸೈನ್ಯವು ಸೋತು ಶರಣಾಗುತ್ತದೆ, ಹೇಗೋ ತಪ್ಪಿಸಿಕೊಂಡ ದಕ್ಷನು ವಿಷ್ಣುವಿನ ಬಳಿ ಬಂದು ತನ್ನನ್ನು ಕಾಪಾಡುವಂತೆ ಬೇಡಿಕೊಡಾಗ ವಿಷ್ಣುವು ದಕ್ಷನನ್ನು ರಕ್ಷಣೆ ಮಾಡುತ್ತೇನೆಂದು ಹೇಳುತ್ತಾನೆ. ಇದರಿಂದ ವಿಷ್ಣು ಮತ್ತು ವೀರಭದ್ರನ ನಡುವೆ ಭೀಕರವಾದ ಮಹಾಕಾಳಗವೇ ನಡೆದು ಹೋಗಿ ಬಿಡುತ್ತದೆ. ಆಗ ವೀರಭದ್ರನ ಕೈ ಮೇಲಾಗಿ ವಿಷ್ಣು ಸೋಲುವ ಹಂತಕ್ಕೆ ಬಂದಾಗ ಮಾಯವಾಗಿ ಬಿಡುತ್ತಾನೆ. ಆನಂತರ ವೀರಭದ್ರನು ಜಿಂಕೆಯ ರೂಪ ತಾಳಿ, ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ದಕ್ಷನನ್ನು ಹಿಡಿದು ದಕ್ಷನ ಶಿರಶ್ಛೇದ ಮಾಡಿ ಶಿರವನ್ನು ಹೋಮದ ಅಗ್ನಿಗೆ ಎಸೆಯುತ್ತಾನೆ. ದಕ್ಷನ ತಲೆಯು ಹೋಮದಲ್ಲಿ ಉರಿದು ಬೂದಿಯಾಗುತ್ತದೆ. ಶ್ರೀ ವೀರಭದ್ರ ನಿಂದ ದಕ್ಷ ಮಹಾರಾಜನ ಸಂಹಾರವಾದ ನಂತರ ಬ್ರಹ್ಮ, ವಿಷ್ಣು ಮತ್ತು ಎಲ್ಲ ದೇವಾನುದೇವತೆಗಳು ಕೈಲಾಸಕ್ಕೆ ಬಂದು ದಕ್ಷನ ತಪ್ಪನ್ನು ಮನ್ನಿಸುವಂತೆ ಪರಶಿವನನ್ನು ಪ್ರಾರ್ಥಿಸಿದರು. ಇದರಿಂದ ಸಂತುಷ್ಠಗೊಂಡ ಕರುಣಾಮೂರ್ತಿ ಶಿವನು ದಕ್ಷನ ಶಿರವಿಲ್ಲದ ದೇಹಕ್ಕೆ ಕುರಿಯ ಶಿರವನ್ನು ಇಟ್ಟು ಜೀವದಾನ ಮಾಡುತ್ತಾನೆ. ಬದುಕಿ ಬಂದ ದಕ್ಷನು ಶಿವನಿಗೆ ಶಿರಬಾಗಿ ನಮಿಸಿ, ತಾನು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸುತ್ತಾನೆ. ಶಿವನು ದಕ್ಷನನ್ನು ಕ್ಷಮಿಸಿ ಕೈಲಾಸಕ್ಕೆ ತೆರಳುತ್ತಾನೆ. ಮುಂದೆ ಸತಿಯು ಪರ್ವತ ರಾಜನ ಮಗಳಾಗಿ ಜನಿಸಿ ಪಾರ್ವತಿ ಎನಿಸಿಕೊಳ್ಳುತ್ತಾಳೆ. ಶಿವನ ಕೈ ಹಿಡಿದು ಕೈಲಾಸ ಪುರವನ್ನು ಸೇರುತ್ತಾಳೆ. ಶಿವ ಪಾರ್ವತಿಯರು ಒಂದಾಗಿ ಲೋಕಕಲ್ಯಾಣದಲ್ಲಿ ನಿರತರಾಗುತ್ತಾರೆ. ಶಿವನಿಗೆ ಸಹಾಯ ಮಾಡಿದ ಶಿವನ ಅಂಶಿಜನಾದ ಶ್ರೀ ವೀರಭದ್ರೇಶ್ವರ ಸ್ವಾಮಿಯು ಭುವಿಯಲ್ಲಿ ಪೂಜಿಸಲ್ಪಡುತ್ತಿzನೆ. ಶಿವ ಭಕ್ತರ ಇಷ್ಟಾರ್ಥ, ಕೋರಿಕೆಗಳನ್ನು ಈಡೇರಿಸುತ್ತಿzನೆ.
ಗುಗ್ಗಳ ಪ್ರಿಯ ಶ್ರೀ ವೀರಭದ್ರ:
ಶ್ರೀ ವೀರಭದ್ರ ಸ್ವಾಮಿಯ ಮಹಿಮೆಯನ್ನು ಸಾರುವ ಗುಗ್ಗಳ, ಶರಭಿ ಗುಗ್ಗಳ, ವೀರಗಾಸೆ. ಕೆಂಡಾದರ್ಚನೆ, ಅರ್ಚನೆ ಹೀಗೆ ಹಲವು ಬಗೆಯಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಮಹಿಮೆ, ಪವಾಡ, ಚರಿತ್ರೆಯನ್ನು ಭಕ್ತರಿಗೆ ಒಡಪುಗಳ ಮೂಲಕ ಸಮಾಳ ಬಾರಿಸುತ್ತಾ, ಪುರುವಂತರು ಹೆಜ್ಜೆ ಹಾಕುತ್ತ ಹೇಳುತ್ತಿದ್ದರೆ ನೆರೆದವರ ಮೈಮನ ನವಿರೇಳುತ್ತದೆ. ಮಣ್ಣಿನ ಕೊಡ ಹಾಗೂ ಬಿಳಿ ಹುಲ್ಲಿನಲ್ಲಿ ಅತ್ಯಂತ ಕಲಾತ್ಮಕವಾಗಿ ಹೆಣೆದು ಗುಗ್ಗಳ ಕೊಡಗಳನ್ನು ಕಟ್ಟುವುದು ಅತ್ಯಂತ ವಿಶೇಷ. ಬಾಯಿ, ನಾಲಗೆಗೆ ಶಸ್ತ್ರ್ರಗಳನ್ನು ಹಾಕಿಸಿಕೊಳ್ಳುವ ಮೂಲಕ ಭಕ್ತರು ಅತ್ಯಂತ ಮಡಿಯಿಂದ ಹರಕೆಗಳನ್ನು ತೀರಿಸುವುದು ಇಂದಿಗೂ ಕಟ್ಟು ನಿಟ್ಟಾಗಿ ನಡೆಯುತ್ತಿದೆ. ಹಾಗೆಯೇ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಅಮಾವಾಸ್ಯೆ ಹಾಗೂ ಹುಣ್ಣಿಮೆ, ಪ್ರತಿ ಮಂಗಳವಾರದಂದು ವಿಶೇಷ ಅಲಂಕಾರದೊಂದಿಗೆ ಪೂಜೆ, ಪ್ರಸಾದ ವಿತರಣೆ ನಡೆಯುತ್ತದೆ.
ನಾಡಿನ ಹಲವೆಡೆ
ಶ್ರೀ ವೀರಭದ್ರೇಶ್ವರ ದೇವಸ್ಥಾನಗಳು:
ಶಿವಮೊಗ್ಗ ಚೌಕಿ ಮಠದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನವು ಅಪಾರ ಭಕ್ತ ವೃಂದವನ್ನು ಹೊಂದಿದೆ. ಈ ದೇವಸ್ಥಾನಕ್ಕೆ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಚಿತ್ರದುರ್ಗ, ಬೆಂಗಳೂರು, ಮೈಸೂರು ಭಾಗದಿಂದಲೂ ಭಕ್ತರು ಆಗಮಿಸುತ್ತಾರೆ.
ಹಾಗೆಯೇ ಹಳೇ ಮಂಡ್ಲಿಯಲ್ಲಿಯೂ ಪುರಾತನ ಕಾಲದ ಶ್ರೀ ವೀರಭದ್ರೇಶ್ವರ, ಜಟ್‌ಪಟ್ ನಗರ, ಗಾಡಿಕೊಪ್ಪ, ಮಲ್ಲಿಗೇನ ಹಳ್ಳಿಯಲ್ಲಿ ಶ್ರೀ ವೀರಭದ್ರ ಸ್ವಾಮಿಯ ದೇವಸ್ಥಾನಗಳಿವೆ.
ಇನ್ನು ರಾಜ್ಯದ ರಾಚೋಟೇಶ್ವರ ಶ್ರೀ ವೀರಭದ್ರೇಶ್ವರ ಸ್ವಾಮಿ, ಹಾವೇರಿ ಜಿಯ ರಟ್ಟಿಹಳ್ಳಿ, ಕಾರಡಗಿ, ಬೆಳಗಾಂನ ಗೊಡಚಿ, ದಾವಣಗೆರೆ ಜಿಯ ಆವರಗೊಳ್ಳ, ಆಂಧ್ರದ ರಾಯಚೋಟಿ ಮತ್ತಿತರೆ ದೇವಸ್ಥಾನಗಳು ಅಪಾರ ಸಂಖ್ಯೆಯ ಭಕ್ತ ಸಮೂಹವನ್ನು ಹೊಂದಿವೆ.
ಶ್ರೀ ವೀರಭದ್ರೇಶ್ವರ
ಜಯಂತ್ಯುತ್ಸವ ಹಿನ್ನೆಲೆ:
ಶಿವಮೊಗ್ಗ ಜಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯು ಪ್ರಪ್ರಥಮ ಬಾರಿಗೆ ವಿಶ್ವದಾದ್ಯಂತ ಆಚರಣೆಗೆ ತಂದ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವವನ್ನು ಸೆ.೨೩ರಂದು ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರ ಹಿಂಭಾಗದ ಚೌಕಿಮಠದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಬೆಳಗ್ಗೆ ೭ ಗಂಟೆಗೆ ಕೇದಾರ ಪೀಠದ ಶ್ರೀ ಹಿಮವತ್ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀ ೧೦೦೮ ಜಗದ್ಗುರು ಕೇದಾರನಾಥ ರಾವಲ್ ಪದವಿ ಭೂಷಿತ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರಿಂದ ಸಂಗೀತಯುಕ್ತ ಇಷ್ಠಲಿಂಗ ಪೂಜೆ ಹಾಗೂ ಬೆಳಿಗ್ಗೆ ೧೧ ರಿಂದ ಧರ್ಮಸಭೆ ಆಯೋಜಿಸಲಾಗಿದೆ.
ಶಿವಮೊಗ್ಗದ ಚೌಕಿಮಠದ ಶಕ್ತಪೀಠದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯದಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುನೀತರಾಗಬಹುದಾಗಿದೆ.
ಲೇಖಕರು: ಸಂತೋಷ್ ಎಲಿಗಾರ್,
ಸಂಚಾಲಕರು, ಬಸವ ಸೇನೆ, ಶಿಕಾರಿಪುರ.
ಮೊ: ೭೮೪೮೮೫೧೯೬೬