ಸಂಸಾರದ ಸಾಗರ ದಾಟಲು ಭಗವಂತನೇ ನೌಕೆ…

ಹೊಳೆಹೊನ್ನೂರು : ಸಂಸಾರದ ಸಾಗರವನ್ನು ದಾಟಬೇಕಾದರೆ ಭಗವಂತನ ಪಾದವೇ ನೌಕೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ತಮ್ಮ ೨೮ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ದೇವರ ಪಾದವನ್ನೇ ನೌಕೆ ಯಾಗಿಸಿಕೊಂಡು ನಾವು ದಾಟಬೇಕಿ ರುವುದರಿಂದ ದೇವರ ಬಗ್ಗೆ ನಂಬಿಕೆ ಇಡುವುದು ಮುಖ್ಯ. ಸಕಾಮ ಕರ್ಮಗಳನ್ನು ಮಾಡಿ ಸ್ವರ್ಗವನ್ನು ಪಡೆದರೂ ಶಾಶ್ವತವಲ್ಲ. ಸ್ವಲ್ಪ ಕಾಲದಲ್ಲಿ ಮತ್ತೆ ಜನನ ಮರಣದ ಚಕ್ರದಲ್ಲಿ ಸಿಲುಕಬೇಕಾಗುತ್ತದೆ ಎಂದರು.
ಯಾವ ಅಪೇಕ್ಷೆ ಇಲ್ಲದೆ ದೇವರ ಸೇವೆ ಮಾಡಬೇಕು. ಸಕಾಮ ಕರ್ಮಗಳನ್ನು ಮಾಡುವವರೆಲ್ಲ ದುರ್ಜನರು ಎಂದರ್ಥವಲ್ಲ. ಆದರೆ ಅವರಲ್ಲಿ ಪಕ್ವತೆ ಇರುವುದಿಲ್ಲ. ಇಷ್ಟಾರ್ಥಕ್ಕಾಗಿ ದೇವರಲ್ಲಿ ಭಕ್ತಿ ಮಾಡುತ್ತಾರೆಯೇ ಹೊರತು ಸ್ವಾಭಾವಿಕವಾದ ಭಕ್ತಿ ಅವರಲ್ಲಿ ಇರುವುದಿಲ್ಲ. ದೇವರ ಉಪಕಾರ ಸ್ಮರಣೆ ಮಾಡಿಕೊಳ್ಳುತ್ತ ಸ್ವಾಭಾವಿಕ ವಾದ ಭಕ್ತಿ ಮಾಡಬೇಕು. ಆಗ ದೇವರು ಮೋಕ್ಷವನ್ನೇ ಕೊಡುತ್ತಾನೆ ಎಂದರು.
ಅನಂತ ಜನ್ಮಗಳ ಪುಣ್ಯದಿಂದ ಭಗವಂತ ನಮಗೆ ಉತ್ತಮವಾದ ಜನ್ಮ ಕೊಟ್ಟಿzನೆ. ದೇವರನ್ನು ನೋಡಲು, ಅವನ ಬಗ್ಗೆ ಕೇಳಿ ತಿಳಿಯಲು, ಅವನ ಮಹಾತ್ಮೆ ಓದುವ, ಓದಿ ಸಂತೋಷ ಪಡುವ ಅವಕಾಶ ಕಲ್ಪಿಸಿzನೆ. ಇಂತಹ ಜನ್ಮದಲ್ಲಿ ನಾವು ಅಂಧಕಾರವನ್ನು ದೂರ ಮಾಡಿಕೊಳ್ಳಬೇಕು ಎಂದರು.
ಪಂಡಿತರಾದ ಭೀಮಸೇನಾ ಚಾರ್ಯ ಆತಕೂರು ಪ್ರವಚನ ನೀಡಿದರು.
ಸ್ವಯಂಸೇವಕರ ನಿತ್ಯ ಸೇವೆ:
ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ನೂರಾರು ಸ್ವಯಂಸೇವಕರು ನಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿzರೆ. ವಿವಿಧ ವಿಭಾಗಗಳಲ್ಲಿ ಹಲವು ಪ್ರಮುಖರ ಮಾರ್ಗದರ್ಶನದಲ್ಲಿ ಕಾರ್ಯವೆಸಗಲಾಗುತ್ತಿದೆ. ಶ್ರೀಮಠದ ದಿವಾನರಾದ ಶಶಿ ಆಚಾರ್ ವ್ಯವಸ್ಥೆಯ ಉಸ್ತುವಾರಿ ವಹಿಸಿzರೆ.
ಚಾತುರ್ಮಾಸ್ಯದ ಮಾಹಿತಿ ಕೇಂದ್ರ, ಸೇವಾ ಕೌಂಟರ್, ವಸತಿ ವ್ಯವಸ್ಥೆ, ಸ್ವಚ್ಛತಾ ಕಾರ್ಯ, ಸಭಾ ಕಾರ್ಯಕ್ರಮದ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಅತಿಥಿಗಳಿಗೆ ಉಪಚಾರ ಹೀಗೆ ಹತ್ತು ಹಲವು ವಿಭಾಗದಲ್ಲಿ ಹಲವರು ತೊಡಗಿ zರೆ. ವಿದ್ವಾಂಸರಾದಿಯಾಗಿ ಸಾಮಾನ್ಯರವರೆಗೂ ನಿತ್ಯ ಸೇವೆ ಮಾಡುತ್ತಿzರೆ.
ಇದಲ್ಲದೆ ಶ್ರೀಮಠದ ಹತ್ತಾರು ಪರಿಚಾರಕರು ಸಂಸ್ಥಾನ ಪೂಜೆ ಇತ್ಯಾದಿ ಶ್ರೀಗಳ ನಿತ್ಯದ ದಿನಚರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿzರೆ.
ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾ ಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಪ್ರಕಾಶಾಚಾರ್ ಸವಣೂರು ಮೊದಲಾದವರಿದ್ದರು.