ಲೈನ್‌ಮನ್ ಸಾವು: ಅಧಿಕಾರಿ ಅಮಾನತ್‌ಗೆ ಆಗ್ರಹ

ಶಿವಮೊಗ್ಗ: ವಿದ್ಯುತ್ ಶಾಕ್ ನಿಂದ ಮೃತಪಟ್ಟ ಕೆಇಬಿ ಲೈನ್ ಮ್ಯಾನ್ ಕಿರಣ್ ಅವರ ಸಾವಿಗೆ ಕಾರಣರಾದ ಮೆಸ್ಕಾಂ ಅಧಿಕಾರಿ ಗಳನ್ನು ಅಮಾನತುಗೊಳಿಸುವಂತೆ ರಾಜ್ಯ ಬಂಜರ ಯುವಕರ ಮತ್ತು ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ಡಿ.ಆರ್.ಸುದ್ದಿಗೋಷ್ಟಿ ಯಲ್ಲಿ ಆಗ್ರಹಿಸಿದರು.
ಸೆ.೨೪ರಂದು ಬೆಳಿಗ್ಗೆ ೧೧ ಗಂಟೆಗೆ ಮಾಚೇನಹಳ್ಳಿಯ ಕೈಗಾ ರಿಕಾ ಪ್ರದೇಶಗಳ ಲೈನ್ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಲೈನ್ ಮ್ಯಾನ್ ಕಿರಣ್ ವಿದ್ಯುತ್ ತಗು ಲಿದ ಪರಿಣಾಮವಾಗಿ ಸ್ಥಳದ ಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ವಿದ್ಯುತ್ ಸ್ಥಗಿತಗೊಳಿಸಿ ದುರಸ್ತಿ ಮಾಡುತ್ತಿದ್ದರೂ ಕೂಡ ಲೈನ್ ಚಾರ್ಜ್ ಆಗಿ ಈ ಅವಘಡ ನಡೆದಿದೆ. ಲೈನ್ ಚಾರ್ಜ್ ಆಗಿದ್ದು ಹೇಗೆ, ಯಾವ ರೀತಿ ವಿದ್ಯುತ್ ಹರಿದು ಬಂತು ಎಂಬುದು ನಿಗೂಢವಾಗಿಯೇ ಉಳಿದಿದೆ. ಇ ಬಗ್ಗೆ ಕೇಳಿದರೆ ಅಧಿಕಾರಿಗಳು ಉಡಾಫೆಯ ಮಾತನಾಡುತ್ತಾರೆ ಎಂದು ಅವರು ಆರೋಪಿಸಿದರು.
ಇದೇ ರೀತಿಯ ಘಟನೆಗಳು ಇತ್ತೀಚೆಗೆ ಮಲವಗೊಪ್ಪ ಮತ್ತು ವಿನೋಬನಗರದಲ್ಲಿ ನಡೆದಿತ್ತು. ವಿನೋಬನಗರದಲ್ಲಿ ಹಾಲಸ್ವಾಮಿ ಎಂಬ ಲೈನ್‌ಮ್ಯಾನ್ ಮೃತಪ ಟ್ಟಿದ್ದರು. ಆಗ ಸುಪರಿಂಟೆಂಡೆಂಟ್ ಇಂಜಿನಿಯರ್ ಶಶಿಧರ್ ಅವರು ಬಹಳ ಆಸಕ್ತಿ ವಹಿಸಿ ಸ್ಪಂದಿಸಿದ್ದರು. ಆದರೆ ತಾಂಡಾದ ಹುಡುಗ ಕಿರಣ್ ಮೃತಪಟ್ಟಾಗ ಏಕೆ ಸ್ಪಂದಿಸಲಿಲ್ಲ. ಈ ತಾರತಮ್ಯವೇಕೆ ಸಾವು ಎಲ್ಲರಿಗೂ ಒಂದೇ ಅಲ್ಲವೇ ಎಂದು ಪ್ರಶ್ನೆ ಮಾಡಿದರು.
ಇಂತಹ ಅವಘಡಗಳಿಗೆ ಅಧಿಕಾರಿಗಳ ನಿರ್ಲಕ್ಷ್ಯತನವೇ ಕಾರಣವಾಗಿದೆ. ಏಕೆ ಹೀಗಾಯಿತು, ಇದರಲ್ಲಿ ತಪ್ಪು ಯಾರದು ಎಂಬುದನ್ನು ತನಿಖೆ ನಡೆಸಬೇಕು. ಕರ್ತವ್ಯ ಲೋಪ ಎಸಗಿರುವ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೃಷ್ಣಾ ನಾಯ್ಕ, ಜಯಾ ನಾಯ್ಕ, ಜಗದೀಶ್ ರಾನಡೆ, ಅಭಿರಾಮ್ ಇದ್ದರು.