sveep--freedom-park

ಶಿವಮೊಗ್ಗ : ಚುನಾವಣೆಯಲ್ಲಿ ಮತದಾನ ಮಾಡುವುದೇ ಒಂದು ಶ್ರೇಷ್ಠವಾದ ಹಬ್ಬ. ನಾವೆಲ್ಲರೂ ಮತದಾನ ಮಾಡುವ ಮೂಲಕ ಈ ಹಬ್ಬವನ್ನು ಆಚರಿಸೋಣ ಎಂದು ನಿವೃತ್ತ ಜಿ ನ್ಯಾಯಾಧೀಶರಾದ ಕೆ. ಚನ್ನಬಸಪ್ಪ ಅವರು ಸಾರ್ವಜನಿಕರಿಗೆ ಕರೆ ನೀಡಿದರು.
ಫ್ರೀಡಂ ಪಾರ್ಕ್‌ನಲ್ಲಿ ಶಿವಮೊಗ್ಗ ಜಿ ಜಾಗೃತ ಮತದಾರರ ವೇದಿಕೆ ಹಾಗೂ ಜಿ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮತದಾನ ಮಾಡುವುದು ನಮ್ಮ ಹಕ್ಕು. ಭಾರತೀಯ ನಮ್ಮ ಸಂವಿಧಾನವು ಯಾವುದೇ ರೀತಿಯ ತಾರತಮ್ಯ ಮಾಡದೆ ಪ್ರತಿಯೊಬ್ಬ ರಿಗೂ ಸಮಾನ ಹಕ್ಕು ನೀಡಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮತದಾನ ಮಾಡೋಣ. ಮತದಾನದ ಮೂಲಕ ದೇಶವನ್ನು ಶ್ರೀಮಂತ ಗೊಳಿಸೋಣ ಎಂದು ಹೇಳಿದರು.
ರಾಜ್ಯ ಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹ್ಮದ್ ಪರ್ವೀಜ್ ಮಾತನಾಡಿ, ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಪ್ರಜಪ್ರಭುತ್ವದ ಹಬ್ಬ ಮಾಡೋಣ. ಮತದಾನ ನಮ್ಮ ಹಕ್ಕು ಮತ್ತು ಜವಾಬ್ದಾರಿ ಎರಡೂ ಎಂದು ಭಾವಿಸಿ ಮತ ಹಾಕೋಣ. ಗ್ರಾಮಿಣ ಭಾಗದಲ್ಲಿ ಶೇ. ೮೦ ರಷ್ಟು ಮತದಾನ ಆಗುತ್ತಿದೆ. ಆದರೆ ನಗರ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗುತ್ತಿದೆ. ಈ ಭಾರಿ ನಗರ ಪ್ರದೇಶದಲ್ಲಿ ಶೇ. ೧೦೦ ರಷ್ಟು ಮತದಾನ ಮಾಡೋಣ ಎಂದು ಕರೆ ನೀಡಿದ ಅವರು ಸಾರ್ವಜನಿಕರಿಗೆ ಮತದಾನ ಕುರಿತಾದ ಪ್ರತಿe ವಿಧಿ ಬೋಧಿಸಿದರು.
ಈ ಸಂಧರ್ಭದಲ್ಲಿ ಜಗತ ಮತದಾರರ ವೇದಿಕೆಯ ಕೆ ಸಿ ಬಸವರಾಜು, ಪಿಎಸ್‌ಐ ವಿನಯ್ ಎಂ, ಸಾಹಿತಿ ಸುಂದರ್ ರಾಜ್ , ಪರಿಸರ ತಜ್ಞ ಶೇಖರ್ ಗೌಳೇರ್ ಇತರರು ಉಪಸ್ಥಿತರಿದ್ದರು.