ಅಡಿಕೆ ಮರ ಕಡಿದ ಅರಣ್ಯಾಧಿಕಾರಿಗಳ ವಿರುದ್ಧ ಕಾನೂನು ಸಮರ: ತೀನಾಶ್ರೀ ಆಕ್ರೋಶ…

ಶಿವಮೊಗ್ಗ : ಹೈಕೋರ್ಟ್ ಆದೇಶವನ್ನು ಸರಿಯಾಗಿ ಅರ್ಥೈಸಿ ಕೊಳ್ಳದೆ ದುರುದ್ದೇಶದಿಂದ ಸೊರಬ ತಾಲೂಕಿನ ತಾಳಗುಪ್ಪದಲ್ಲಿ ಅಡಿಕೆ ತೋಟಗಳನ್ನು ಕಡಿದಿರುವ ನಾಲ್ವರು ಅರಣ್ಯ ಅಧಿಕಾರಿಗಳ ವಿರುದ್ಧ ಕಾನೂನು ಸಮರ ನಡೆಸುವುದಾಗಿ ಮಲೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು ಅರಣ್ಯ ಇಲಾಖೆಗೆ ಈ ಜಗ ಸೇರಿದ್ದರೆ ಸರ್ವೇ ಮಾಡಿ ಜಗವನ್ನು ಸ್ವಾಧೀನಕ್ಕೆ ಪಡೆಯು ವಂತೆ ಸೂಚಿಸಲಾಗಿತ್ತು. ಅಡಿಕೆ ತೋಟವನ್ನು ಕಡಿದು ನಾಶಪಡಿ ಸುವಂತೆ ಆದೇಶದಲ್ಲಿ ಹೇಳಿರಲಿಲ್ಲ. ಅಡಿಕೆ ಮರ ಕಡಿದಿರುವ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿರು ವುದಾಗಿ ವಕೀಲರು ತಿಳಿಸಿzರೆ ಎಂದರು.
ಅಡಿಕೆ ಮರಗಳನ್ನು ಕಡಿ ಯಲು ಕಾರಣರಾದ ಸಾಗರ ಡಿಎಫ್‌ಓ, ಎಸಿಎಫ್ ಶಿರಾಳಕೊಪ್ಪ ಆರ್‌ಎಫ್‌ಓ ಹಾಗೂ ಫಾರೆಸ್ಟರ್ ವಿರುದ್ಧ ಕೇಸು ಹಾಕಿ ಕಾನೂನು ಸಮರ ನಡೆಸಲಾಗುತ್ತದೆ ಎಂದ ಅವರು, ೩ ಎಕರೆ ಒಳಗೆ ಅರಣ್ಯ ಭೂಮಿ ಸಾಗುವಳಿ ಮಾಡಿದ್ದರೆ ಅದಕ್ಕೆ ತೊಂದರೆ ನೀಡಬಾರದೆಂಬ ನಿಯಮ ಇದ್ದರೂ ಕೂಡ ಅದನ್ನು ಪರಿಗಣಿಸಲಿಲ್ಲ. ಜಿಧಿಕಾರಿ ಹಾಗೂ ಸಿಸಿಎಫ್ ಕೂಡ ಕರ್ತವ್ಯಲೋಪ ಮಾಡಿzರೆಂದು ದೂರಿದರು.
ತೋಟ ಕಡಿದಿರುವ ಬಗ್ಗೆ ಅಧಿಕಾರಿಗಳು ಕ್ಷಮೆ ಕೇಳಬೇಕು. ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿ ಸಿದ ಅವರು, ಒತ್ತುವರಿ ತೆರವಿನ ವಿರುದ್ಧ ಮಧು ಬಂಗಾರಪ್ಪ ಕಾಂಗ್ರೆಸ್ ಕಚೇರಿಯಲ್ಲಿ, ಹರ ತಾಳು ಹಾಲಪ್ಪ ವಿಧಾನಸೌಧದಲ್ಲಿ ರಕ್ತ ಕ್ರಾಂತಿ ಮಾಡುವುದಾಗಿ ಘೋ ಷಿಸುತ್ತಾರೆ. ಇವರಿಂದ ಕ್ಷೇತ್ರದ ರೈತರಿಗೆ ನೆಮ್ಮದಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲೆನಾಡು ರೈತ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಧಮೇಂದ್ರ ಶಿರವಾಳ ಮಾತ ನಾಡಿ, ಶಿರಾಳಕೊಪ್ಪ ಅರಣ್ಯಾಧಿಕಾರಿ ವಿಜಯಕುಮಾರ ಜೆ. ಇಲಾ ಖೆಯಲ್ಲಿ ಸಾಕಷ ಭ್ರಷಚಾರ ನಡೆಸಿ ಹಣ ಲಪಟಾಯಿಸಿzರೆ ಎಂದು ದೂರಿದರು.
ಶಿಕಾರಿಪುರ ತಾಲೂಕು ಬಿಸಲಹಳ್ಳಿ ಸರ್ವೆ ನಂಬರ್ ೧೨೮, ದೋಣನಗುಡ್ಡ ಸನಂ ೧೦, ಬಸವ ನಂದಿಹಳ್ಳಿ ಸನಂ ೪೬ರಲ್ಲಿ ೯೦ ಹೆಕ್ಟೇರ್, ಖೌಲಿ ಸನಂ ೧೨೮ರಲ್ಲಿ ೪೦ ಹೆಕ್ಟೇರ್, ಹುಲ್ಲಿನಕೊಪ್ಪ ಸನಂ. ೩೦ ರಲ್ಲಿ ೧೬ ಹೆಕ್ಟೇರ್ ಸೇರಿದಂತೆ ವಿವಿಧ ಕಡೆಗಳಲ್ಲಿ ಗಿಡ ನೆಡಲು ಗುಂಡು ತೋಡಿರುವುದಾಗಿ ಬಿಲ್ ಪಡೆದಿzರೆ ಎಂದರು.
ಸೊರಬ ಮಾರ್ಗದ ಬಾಳೆಕೊಪ್ಪ-ಚಿಕ್ಕಬೋರ್ ೩ ಕಿಮೀಯಲ್ಲಿ ೯೦೦ ಗಿಡ ನೆಡಲು, ತಡಗಣಿ-ಮಳಲಿಕೊಪ್ಪ ರಸ್ತೆಯಲ್ಲಿ ೬ ಕಿಮೀ. ಗಿಡ ನೆಡಲು ೧೨೦೦, ಹಿರೇಮಾಗಡಿ-ಬಾಳೆಕೊಪ್ಪ ಮಾರ್ಗದ ೩ ಕಿಮೀಯಲಿ ೯೦೦ ಗಿಡ ನೆಡಲು ಗುಂಡಿ ತೋಡಿzಗಿ ಹಣ ಪಡೆದಿzರೆ. ಆದರೆ ವಾಸ್ತವವಾಗಿ ಗುಂಡಿಗಳನ್ನೇ ತೋಡಿಲ್ಲ. ಗಿಡಗಳನ್ನು ನೆಟ್ಟಿಲ್ಲ. ಈ ಸಂಬಂಧ ಸಿಸಿಫ್‌ಗೆ ದೂರು ನೀಡಿದರೆ ಭ್ರ?ಚಾರ ಮಾಡಿದ ಅಧಿಕಾರಿಯನ್ನೇ ಕಳಿಸಿ ಪರಿಶೀಲನೆಗೆ ಸೂಚಿಸಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಪುರಾತತ್ವ ಇಲಾಖೆಗೆ ಸೇರಿದ ಕದಂಬರ ಕಾಲದ ದೇವಸ್ಥಾನದ ಬಳಿಯೂ ಗುಂಡಿ ತೆಗೆದು ಪುರಾತತ್ವ ಇಲಾಖೆಗೆ ಸ್ವತ್ತಿಗೆ ಹಾನಿ ಮಾಡಿzರೆ. ಇಂತಹ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳದಿದ್ದರೆ ಸಿಸಿಎಫ್ ಕಚೇರಿ ಮುಂದೆಯೇ ಸಂಘಟನೆಯ ವತಿಯಿಂದ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಧರ ನಾರಗೋಡು, ಮುಕ್ತಿಯಾರ್ ಅಹಮ್ಮದ್, ಲಕ್ಷ್ಮಣ ಸೊರಬ, ನಾ ರಾಯಣಪ್ಪ, ಪ್ರವೀಣ್ ಇದ್ದರು.