ಭಾಷೆ ಸಂವಹನ ಮಾತ್ರವಲ್ಲ ಅದೊಂದು ಸಂಸ್ಕೃತಿಯ ನೆಲೆ…
ಶಿವಮೊಗ್ಗ: ಭಾಷೆ ಕೇವಲ ಸಂವಹನ ಮಾತ್ರವಲ್ಲ, ಅದು ಸಂಸ್ಕೃತಿಯ ನೆಲೆ ಎಂದು ರಾಜ್ಯ ಶಿಕ್ಷಣ ನೀತಿ ಪರಿಷತ್ತಿನ ಸದಸ್ಯ ಪ್ರೊ| ರಾಜೇಂದ್ರ ಚೆನ್ನಿ ಹೇಳಿದರು.
ಅವರು ಕುವೆಂಪು ವಿವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಹೊಸ ಶಿಕ್ಷಣ ನೀತಿ(ಎಸ್ಇಪಿ) ಕುರಿತ ಕನ್ನಡ ಪಠ್ಯ ಪುಸ್ತಕ ರಚನ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಭಾಷೆ ಕೇವಲ eನದ ಅಥವಾ ಸಂವಹನದ ರೂಪ ಮಾತ್ರವಲ್ಲ. ಸಾಮಾಜಿಕತೆಯ ಸಾಮಾಜಿಕ ವಿeನ ತಿಳುವಳಿಕೆ ಪರಂಪರೆಯನ್ನು ಪ್ರeಯನ್ನು ವಿಸ್ತರಿಸುವ ಕೆಲಸವನ್ನು ಭಾಷೆ ಮಾಡುತ್ತದೆ. ಕನ್ನಡ ಭಾಷೆಯಲ್ಲಿ ಈ ವಿಶಿಷ್ಟತೆಯಿದೆ ಎಂದರು.
ಭಾಷೆಯ ನಿರ್ವಚನದ ಚೌಕಟ್ಟನ್ನು ಬಿಡಿಸಬೇಕಾಗಿದೆ. ಪಠ್ಯ ರಚನೆ ವಿವಿಯ ಆದ್ಯತೆ ಆದರೂ ಕೂಡ ಅದು ರಚನೆಯಾಗಬೇಕಾದರೆ ಕೇವಲ ಆದೇಶ ರೂಪದಲ್ಲಿ ಅಲ್ಲದೆ, ಪ್ರಾತಿನಿಧ್ಯದ ರೂಪದಲ್ಲಿಯೂ ಇರಬೇಕಾಗುತ್ತದೆ. ಭಾಷೆ ಕೇವಲ ಮಾಧ್ಯಮವಲ್ಲ. ಅದು ಅನ್ನ ಕೊಡುವಂತಾಗಬೇಕು ಅಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕುವೆಂಪು ವಿವಿ ಕನ್ನಡ ಅಧ್ಯಾಪಕರ ವೇದಿಕೆಯ ಪ್ರೊ| ಎ.ಬಿ.ಉಮೇಶ್ ಭಾಷೆಯನ್ನು ಜೊತೆಗೆ ಬದುಕನ್ನು ತಲೆಮಾರಿನಿಂದ ತಲೆಮಾರಿಗೆ ಪಠ್ಯಗಳ ಮೂಲಕ ದಾಟಿಸುವ ಕೆಲಸವನ್ನು ಕನ್ನಡ ವೇದಿಕೆ ಮಾಡುತ್ತಾ ಇದೆ. ಹಿರಿ ಕಿರಿಯರನ್ನು ಒಳಗೊಂಡಂತೆ ಹೊಸ ಪಠ್ಯ ಕ್ರಮ ರೂಪಿಸಬೇಕಾಗಿದೆ ಎಂದರು.
ಎನ್ಇಪಿ ವ್ಯವಸ್ಥೆಯಲ್ಲಿ ಸಾಕಷ್ಟು ಗೊಂದಲಗಳಿದ್ದು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಎಸ್ಇಪಿ ವ್ಯವಸ್ಥೆ ಬಂದಿದೆ. ಇದು ಸ್ವಾಗತರ್ಹ ಕೂಡ. ಹೊಸ ರಾಜ್ಯ ಶಿಕ್ಷಣ ನೀತಿಯ ಆಶಯಗಳಿಗೆ ಅನುಗುಣವಾಗಿ ಕನ್ನಡ ಭಾಷೆ ಮತ್ತು ಐಚ್ಛಿಕ ವಿಷಯಗಳಿಗೆ ಪಠ್ಯಗಳನ್ನು ರೂಪಿಸಬೇಕಾದ ಹೊಣೆ ನಮ್ಮ ಮೇಲಿದ್ದು, ಇದು ವಿದ್ಯಾರ್ಥಿ ಸ್ನೇಹಿಯಾಗಬೇಕು ಎಂದರು.
ಕುವೆಂಪು ವಿವಿ ಸ್ನಾತಕ ಕನ್ನಡ ಅಧ್ಯಯನ ಮಂಡಳಿಯ ಅಧ್ಯಕ್ಷ ಪ್ರೊ| ಶಿವಾನಂದ ಕೆಳಗಿನಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಸ್ಇಪಿ ಪಠ್ಯಕ್ರಮ ಚೌಕಟ್ಟಿನ ಹಿನ್ನಲೆಯಲ್ಲಿ ಪಠ್ಯಗಳನ್ನು ರೂಪಿಸಲು ಸಂಪಾದಕರನ್ನು ಆಯ್ಕೆ ಮಾಡುವಾಗ ಪಾರದರ್ಶಕತೆಯನ್ನು ಕಾಪಾಡಬೇಕು. ಮತ್ತು ಪರಿಣಿತಿ ಪಡೆದ ಅಧ್ಯಾಪಕರನ್ನು ಪರಿಗಣಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ| ಬಿ. ಚನ್ನೇಶ್ ವಹಿಸಿದ್ದರು. ಕುವೆಂಪು ವಿವಿ ಕನ್ನಡ ಅಧ್ಯಾಪಕರ ವೇದಿಕೆಯ ಅಧ್ಯಕ್ಷೆ ಪ್ರೊ. ಸವಿತಾ ಬನ್ನಾಡಿ, ಕಾರ್ಯದರ್ಶಿ ಮುತ್ತಯ್ಯ ಸೇರಿದಂತೆ ಹಲವರಿದ್ದರು.