ಪುಸ್ತಕಗಳ ಅಧ್ಯಯನದಿಂದ ನಿಜ ಬದುಕಿನ ಅರಿವು ಸಾಧ್ಯ:ಲತಾ

ಹೂವಿನಹಡಗಲಿ : ಇಂದಿನ ಜನಾಂಗ ಆಧುನಿಕ ಕಂಪ್ಯೂಟರ್ ಮತ್ತು ಸಾಮಾಜಿಕ ಜಲತಾಣಗಳ ಸುಳಿಯಲ್ಲಿ ಸಿಲುಕಿ ಓದುವ ಹವ್ಯಾ ಸವನ್ನೇ ಮರೆತಿರುವುದು ವಿಷಾಧ ನೀಯ ಸಂಗತಿ.ಹಿಂದಿನ ಇತಿಹಾಸ ವನ್ನ, ಪ್ರೇರಣಾತ್ಮಕ ಜೀವನದ ಕುರುಹುಗಳನ್ನ, ನಿಜ ಬದುಕಿನ ದಾರಿಯನ್ನ, ಸತ್ಚಿಂತನೆಗಳನ್ನ ನಮ್ಮ ಜೀವನದಲ್ಲೂ ಅಳವಡಿಸಿ ಕೊಳ್ಳ ಲು ಪುಸ್ತಕಗಳು ಸಹಕಾರಿ ಎಂದ ಅವರು ತಮ್ಮ ತಂದೆ ಎಂ.ಪಿ. ಪ್ರಕಾಶ್ ರವರು ಓದು ಬರಹದ ಬಗ್ಗೆ ಪತ್ರಿಕೆ ಪುಸ್ತಕಗಳನ್ನ ವ್ಯವಸ್ಥಿತ ವಾಗಿ ಇಡುವ ಶಿಸ್ತು ಇಂದು ನಮಗೆ ಪ್ರೇರಣೆ ಎಂದರು.
ಹರಪನಹಳ್ಳಿಯ ಶ್ರೀ ರೇಣು ಕಾಚಾರ್ಯ ಕಲ್ಯಾಣ ಪಂಟಪದಲ್ಲಿ ಹೂವಿನಹಡಗಲಿ ಬರಹಗಾರರ ಬಳಗ ಹಾಗೂ ಕ.ಸಾ.ಪ. ಹರಪನಹಳ್ಳಿ ಬರಹಗಾರರ ಬಳಗ ಹರಪನಹಳ್ಳಿ ಸಹಯೋಗದಲ್ಲಿ ಆಯೋಜಿಸಿದ್ದ ನೂರು ಕೃತಿಗಳ ಲೋಕಾರ್ಪಣೆ ,ರಾಜ್ಯ ಮಟ್ಟದ ಕವಿಗೋಷ್ಠಿ ಉದ್ಘಾಟಿ ಸಾಹಿತಿ ಅಮರು ,ನಮ್ಮ ಕರ್ನಾಟಕ ಮಹಾನ್ ಸಂತ -ಶರಣ -ಸಾಹಿತಿ -ಕವಿ ಪುಂಗವರಿಗೆ ಜನ್ಮ ನೀಡಿದ ಪುಣ್ಯ ಭೂಮಿ.ಅವರ ಕೃತಿಗಳ ಓದುವಿಕೆಯಿಂದ ಅಪಾರ ಜನ ಸಾಧ್ಯ.ಇಂದೂ ಬರಹಗಾರರಿಗೆ ಕೊರತೆ ಇಲ್ಲ ಆದರೆ ಓದುಗರ ಕೊರತೆ ಅವರ ಬರಹಕ್ಕೆ ಪ್ರೋತ್ಸಾ ಹದ ಕೊರತೆ ಎದ್ದು ಕಾಣುವುದು. ೧೧೮ ವಿವಿಧ ಲೇಖಕರ ಕೃತಿಗಳನ್ನ ಏಕ ಕಾಲದಲ್ಲಿ ಲೋಕಾರ್ಪಣೆ ಮಾಡಿ ,ಇದೊಂದು ದಾಖಲೆಯ ಕಾರ್ಯಕ್ರಮ.ಎಲ್ಲ ಕೃತಿಗಳನ್ನ ಸಮಯಾವಕಾಶ ಮಾಡಿಕೊಂಡು ಓದುವೆ. ಇನ್ನೂ ಹೆಚ್ಚು ಹೆಚ್ಚು ಉತ್ತಮ ಕೃತಿಗಳ ಬರಲಿ ಅದಕ್ಕೆ ಓದುಗರ ಸಹಾಯ ಸಹಕಾರ ಇರಲೆಂದು ಆಶಿಸಿದರು.
ರಾಜ್ಯಧ್ಯಕ್ಷ ಮಧುನಾಯ್ಕ ರವರು,ತಮ್ಮ ಪ್ರಾಸ್ತಾವಿಕ ನುಡಿ ಯಲ್ಲಿ ಬಳಗದ ಸಂಕ್ಷಿಪ್ತವರದಿ, ನಡೆದು ಬಂದ ದಾರಿ ವಿವರಿ ಸುತ್ತ,ಈ ಕಾರ್ಯಕ್ರಮದ ಕ್ರೆಡಿಟ್ ನಮ್ಮೆಲ್ಲ ಬಳಗದ ,ತಾಲೂಕು ಕ ಸ ಪ ದಪದಾಧಿಕಾರಿಗಳಿಗೆ ,ದಾನಿ ಗಳಿಗೆ ಸಲ್ಲಬೇಕಿದೆ. ಅಲ್ಲದೆ ತಮ್ಮ ಕೃತಿಗಳನ್ನ ಬಿಡುಗಡೆಗೆ ಅವಕಾಶ ಕಲ್ಪಿಸಿದ ಕವಿ ಸಾಹಿತಿ ಸಹೃದಯರ ಸಹಕಾರ ಸ್ಮರಿಸಿದರು.ಕೃತಿ ಬಿಡು ಗಡೆ ಸುಮ್ಮನಲ್ಲ ಖರ್ಚು ನಿಭಾ ಯಿಸುವುದು ಕಷ್ಠಸಾಧ್ಯ.೧೧೮ ಕೃತಿಗಳ ಬಿಡುಗಡೆ ಸಂತೃಪ್ತಿ ತಂದಿದೆ.ಕಾರಣ ಇಂಥ ವಿಶಿಷ್ಠ ಕಾರ್ಯಕ್ರಮದ ಮೂಲಕ ಸಹಕರಿ ಸಿರುವ ಎಲ್ಲರಿಗೂ ಅಭಿನಂದಿ ಸಿದರು ಹಿರಿಯ ಸಾಹಿತಿ ರಾಮನ ಮಲಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ೩೦ ಕ್ಕೂ ಅಧಿಕ ಕವಿಗಳು ತಮ್ಮ ಕವನ ವಾಚಿಸಿದರು. ಮುಖ್ಯ ಅತಿಥಿ ಬೆಂಗಳೂರಿನ ಮಾಲ್ಡ್ರೀವ್ ಸಂಸ್ಥೆಯ ಮಾಲಿಕರು ಶ್ರೀ ಲಕ್ಷೀಪತಿ ಅವರು ಮಾತನಾಡಿ ಸಾಹಿತಿಗಳ ಬರಹಗಳಿಗೆ ,ಅವರ ಕೃತಿಗಳ ಮಾರಾಟದ ವ್ಯವಸ್ಥೆಗೆ ,ಜೊತೆಗೆ ಅದರಿಂದ ಬರುವ ಗೌರವಧನ ನಿಮ್ಮ ಸಾಹಿತ್ಯ ಪ್ರಗತಿಗೆ ಸಹಕರಿಸಲಿದ್ದು, ಸಂಪರ್ಕಿ ಸಿಸಲು ತಿಳಿಸಿದರು.
ಮನುಷ್ಯ ಕ್ಷಣಿಕ ಆದರೆ ಆತ ಬರೆದ ಸಾಹಿತ್ಯ ಶಾಶ್ವತ.ಮುಂದಿನ ಜನಾಂಗಕ್ಕೆ ದಾರಿದೀಪ.ಸಾಹಿತ್ಯ ಕ್ಷೇತ್ರಕ್ಕೆ ನಮ್ಮಸಂಸ್ಥಯ ಅಲ್ಪ ಆದರೂ ತೃಪ್ತಿ ಇದೆ..ಇಂದಿನ ಕಾರ್ಯಕ್ರಮ ನಮಗೆ ಹರ್ಷ ತಂದಿದೆ ಎಂದರು.
ಇರಿಯ ಸಾಹಿತಿ ಸುಭದ್ರಮ್ಮ ಮಾಡ್ಲಗೇರಿ ಕವಿಗೋಷ್ಢಿ ಕುರಿತು ಆಶಯ ಮಾತುಗಳನ್ನಾಡಿದರು.ಕ ಸ ಪ ಅಧ್ಯಕ್ಷ ಉಚ್ಚಂಗೆ ಪ್ಪನವರು ಕಾರ್‍ಯಕ್ರಮ ಕುರಿತು ಮಾತನಾಡಿದ ಅವರು ಕಾರ್‍ಯಕ್ರಮದಲ್ಲಿ ವಿಶೇಷ ಸಾಧಕರಿಗೆ ಗೌರವ ಸನ್ಮಾನ ಹಾಗೂ ಕೃತಿಕಾರರು ,ಭಾಗವಹಿಸಿದ ಕವಿಗ ಳಿಗೆ ,ದಾನಿಗಳಿಗೆ, ಸೇವಾ ಕರ್ತ ರಿಗೆ ಗೌರವಿಸಿದರು. ಕಾರ್ಯ ಕ್ರಮದಲ್ಲಿ ಬೆಂಗಳೂರಿನ ಚಲನ ಚಿತ್ರ ಹಾಸ್ಯ ನಟ ಮೈಸೂರಿನ ರಮಾನಂದ,ಶ್ರೀಮತಿ ವಿ. ಲಕ್ಷೀ ದೇವಿ ಬೆಂಗಳೂರು , ವ್ಹಿ.ಜಿ. ಅಗ್ರಹಾರ, ಹೆಚ್ ಮಲ್ಲಿಕಾ ರ್ಜುನ,ಹೆಚ್ ಕೆ.ಮಂಜುನಾಥ್, ಕೆ ಬಸವರಾಜ, ಗಿರಜ್ಜಿ ನಾಗರಾಜ, ಬಣಕಾರ ರಾಜಶೇಖರ, ಅಲ್ಲದೆ ರಾಜ್ಯದ ನಾನಾ ಭಾಗದಿಂದ ಬಂದ ಕವಿ ಸಾಹಿತಿಗಳು ಉಪಸ್ಥಿತರಿದ್ದರು.