ಮೌಂಟೇನ್ ಇನ್ನೋವೇಟಿವ್ ಸ್ಕೂಲ್‌ನಿಂದ ಕರ್ನಾಟಕ ಗತವೈಭವ…

ಶಿವಮೊಗ್ಗ: ಪ್ರತಿಯೊಬ್ಬ ಮಗುವಿನಲ್ಲೂ ತನ್ನದೇ ಆದಂತಹ ಪ್ರತಿಭೆ, ಸಾಮರ್ಥ್ಯ ಇರುತ್ತದೆ. ಪೋಷಕರು ಶೈಕ್ಷಣಿಕವಾಗಿ ತಮ್ಮಿಂದ ಸಾಧ್ಯವಾಗದೇ ಇರುವುದನ್ನು ಮಕ್ಕಳಲ್ಲಿ ನಿರೀಕ್ಷಿಸುವುದು, ಅಲ್ಲದೆ ಇತರೆ ಮಕ್ಕಳ ಬೌದ್ಧಿಕ ಸಾಮಾರ್ಥ್ಯಕ್ಕೆ ಹೋಲಿಸುವುದು ಸರಿಯಲ್ಲ. ಮಕ್ಕಳ ಸಾಮಾರ್ಥ್ಯ, ಆಸಕ್ತಿಯನ್ನು ಗುರುತಿಸಿ ಅದಕ್ಕೆ ಅನುಗುಣವಾಗಿ ಶಿಕ್ಷಣ ನೀಡುವುದು ಅಗತ್ಯ ಎಂದು ಡಿಡಿಪಿಐ ಸಿ.ಆರ್. ಪರಮೇಶ್ವರ್ ಹೇಳಿದರು.


ನಗರದ ಅನುಪಿನಕಟ್ಟೆಯ ಮೌಂಟೇನ್ ಇನ್ನೋವೇಟಿವ್ ಸ್ಕೂಲ್ ವತಿಯಿಂದ ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಗತ ವೈಭವ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಡಾಕ್ಟರ್, ಇಂಜಿನಿಯರ್‌ನಂತಹ ಉನ್ನತ ಹುzಗೆ ಪೂರಕವಾಗುವಂತಹ ಶಿಕ್ಷಣ ಪಡೆಯಲಿ ಎಂದು ನಿರೀಕ್ಷಿಸುವುದು ತಪ್ಪಲ್ಲ. ಆದರೆ ಅನಗತ್ಯವಾಗಿ ಮಕ್ಕಳ ಮೇಲೆ ಮಾನಸಿಕ ಒತ್ತಡ ಹೇರಬಾರದು. ಕ್ರೀಡೆ, ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಮಕ್ಕಳಿಗೆ ಆಸಕ್ತಿ ಇದ್ದಲ್ಲಿ ಅದಕ್ಕೆ ಪೂರಕವಾಗಿ ಪ್ರೋತ್ಸಾಹ ನೀಡಬೇಕೆಂದರು.
ಬಿಇಓ ನಾಗರಾಜ್ ಅವರು ಮಾತನಾಡಿ, ಮಕ್ಕಳಿಗೆ ಅಂಕ ದೊಂದಿಗೆ ಕೌಶಲ್ಯ ಕಲಿಸಬೇಕು. ಶಿಕ್ಷಣ ಮತ್ತು ಅಂಕಗಳು eನವನ್ನು ಬಿಂಬಿಸುತ್ತವೆ. ಆದರೆ ಶಿಕ್ಷಣ ದೊಂದಿಗೆ ಕೌಶಲ್ಯ ಕಲಿತಲ್ಲಿ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವೆಂದು ಹೇಳಿದರು.
ಮೌಂಟೇನ್ ಇನ್ನೋವೇಟಿವ್ ಸ್ಕೂಲ್ ಕೇವಲ ಶೈಕ್ಷಣಿಕವಾಗಿ ಅಷ್ಟೇ ಅಲ್ಲ, ಕ್ರೀಡೆ, ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ತೊಡಗಿಸುವ ಮೂಲಕ ಅವರನ್ನು ಸಮಗ್ರ ವ್ಯಕ್ತಿತ್ವದೊಂದಿಗೆ ರೂಪಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೌಂಟೇನ್ ಇನ್ನೋವೇಟಿವ್ ಎಜುಕೇಷನ್ ಸೊಸೈಟಿ ಶೈಕ್ಷಣಿಕ ನಿರ್ದೇಶಕರಾದ ಟಿ.ಎಸ್. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಶಿಲ್ಪಶ್ರೀ, ಪ್ರಾಂಶುಪಾಲೆ ಶಿಲ್ಪ ಅರವಿಂದ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಿಕ್ಷಕಿ ಸುನೀತಾ ಸ್ವಾಗತಿಸಿ, ನಿರೂಪಿಸಿದರು.