ಕರ್ನಾಟಕ ಫಿಲಂ ಅಸೋಸಿಯೇಷನ್ ಅಸ್ಥಿತ್ವಕ್ಕೆ…

2

ಶಿವಮೊಗ್ಗ : ಚಲನ ಚಿತ್ರೋದ್ಯಮದ ಎ ವಿಭಾಗವರನ್ನು ಗಮನದಲ್ಲಿಟ್ಟು ಕೊಂಡು ನೂತನವಾಗಿ ಕರ್ನಾಟಕ ಫಿಲಂ ಅಸೋಸಿಯೇಷನ್ ಆರಂಭಿಸಲಾಗಿದೆ ಎಂದು ಅಸೋಸಿಯೇಷನ್ ಸದಸ್ಯ ಡಾ. ಎನ್.ಎಂ. ಪ್ರಹ್ಲಾದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ಹಿತದೃಷ್ಟಿಯಿಂದ ಹೊಸ ಕಲಾವಿದರು ಹಾಗೂ ಹಿರಿಯ ಕಲಾವಿದರು ಜತೆಗೂಡಿ ಸಂಘ ಸ್ಥಾಪಿಸಲಾಗಿದೆ. ಮೂವಿ ಬ್ಯಾನರ್ ಅಜೀವ ಸದಸ್ಯತ್ವಕ್ಕೆ ೫ ಸಾವಿರ ರೂ., ಮೂವಿ ಟೈಟಲ್ ನೋಂದಣಿಗೆ ೫೦೦ ರೂ. ನಿಗದಿ ಮಾಡಲಾಗಿದೆ ಎಂದರು.
ಸಿನಿಮಾಕ್ಕೆ ಸಂಬಂಧಪಟ್ಟ ಕಲಾವಿದರು, ನಿರ್ದೇಶಕರು, ಕ್ಯಾಮೆರಾಮ್ಯಾನ್, ಡ್ಯಾನ್ಸ್, ಸಂಗೀತ, ಫೈಟ್ ಮಾಸ್ಟರ್ ಹೀಗೆ ಎ ವಿಭಾಗದ ಅಜೀವ ಸದಸ್ಯತ್ವಕ್ಕೆ ೨ ಸಾವಿರ ರೂ. ನೋಂದಣಿ ಶುಲ್ಕ ನಿಗದಿ ಮಾಡಲಾಗಿದೆ. ಇಲ್ಲಿ ಸದಸ್ಯತ್ವ ಪಡೆದವರು ಅಸೋಸಿಯೇಷನ್ ಚುನಾವಣೆ ಯಲ್ಲಿ ಸ್ಪರ್ಧೆ ಮಾಡಬಹುದಾಗಿದೆ. ಮತ ಹಾಕುವ ಹಕ್ಕು ಇರುತ್ತದೆ ಎಂದರು.
ಕಲಾವಿದರಲ್ಲಿಯೂ ಸಾಕಷ್ಟು ಬಡವರಿzರೆ. ಅಂತಹವರಿಗೆ ಫುಡ್ ಕಿಟ್ ಸೌಲಭ್ಯ ನೀಡಲು, ಆರೋಗ್ಯ ವೆಚ್ಚಕ್ಕೆ ೫೦ ಸಾವಿರ ನೆರವು ನೀಡಲು ಚಿಂತನೆ ನಡೆಸಲಾಗಿದೆ. ಎ ಜಿಗಳಲ್ಲಿನ ಕಲಾವಿದರು ಇದರಲ್ಲಿ ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದರು.
ಅಸೋಸಿಯೇಷನ್ ಅಧಕ್ಷ ಎಂ.ಎಸ್. ರವೀಂದ್ರ ಮಾತನಾಡಿ, ಈಗಿರುವ ಫಿಲ್ಮ್ ಛೇಂಬರ್ನ ಸದಸ್ಯತ್ವ ಶುಲ್ಕ ತೀರಾ ದುಬಾರಿ ಯಾಗಿದೆ. ೫೦ ಸಾವಿರದಿಂದ ಲಕ್ಷದವರೆಗೆ ಸದಸ್ಯತ್ವ ಶುಲ್ಕ ಹಾಗೂ ಮೂವಿ ಬ್ಯಾನರ್ ಶುಲ್ಕವನ್ನು ನಿಗದಿ ಮಾಡಲಾಗಿದೆ. ಇದರಿಂದಾಗಿ ಅನೇಕರು ಚಿತ್ರೋದ್ಯಮವೇ ಬೇಡವೆಂದು ಉದ್ಯಮದಿಂದ ಹೊರ ಹೋಗುವ ಸ್ಥಿತಿ ಇದೆ ಎಂದರು.
ಈ ಅಸೋಸಿಯೇಷನ್ ಆರಂಭವಾಗಿ ೫ ತಿಂಗಳಾಗಿದ್ದು, ೩೫೬ ಜನರು ನೋಂದಣಿ ಮಾಡಿ ಕೊಂಡಿzರೆ. ಇಲ್ಲಿ ನೋಂದಾಯಿಸಿಕೊಂಡವರಿಗೆ ಸಿನಿಮಾ ಸೆನ್ಸಾರ್ ಸೇರಿದಂತೆ ಎ ರೀತಿಯ ಕೆಲಸಗಳಿಗೆ ಅಸೋಸಿಯೇಷನ್ ಮಾರ್ಗ ದರ್ಶನ ನೀಡಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ರಾಧಾ, ಮಂಜುನಾಥ ಬೆಳಕೆರೆ, ಮರಿಯಾ ಮೃದುಲಾ, ಚಿರತೆ ನಾಗರಾಜ್, ಹನು ನಿಗಂ ಇದ್ದರು.