ಕರಾಟೆ: ಗೇರುಪುರ ಇಂದಿರಾಗಾಂಧಿ ವಸತಿ ಶಾಲೆ ಮಕ್ಕಳು ರಾಜ್ಯಮಟ್ಟಕ್ಕೆ ಆಯ್ಕೆ
ಶಿವಮೊಗ್ಗ: ಸೆ.೨೩ರಂದು ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆ ಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ನಡೆದ ಶಿವಮೊಗ್ಗ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಗಾಡಿಕೊಪ್ಪದ ಹಿಂದುಳಿದ ವರ್ಗದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ, ಗೇರುಪುರ ಮಕ್ಕಳು ಭಾಗವಹಿಸಿ ಉತ್ತಮ ಪದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿಜೇತ ಮಕ್ಕಳ ವಿವರ : ಅಂಕಿತಾ ಡಿ.ಕೆ., ೯ನೇತರಗತಿ, ಪ್ರಥಮ ಸ್ಥಾನ. ಕೀರ್ತಿ ಸಿ.ಬಿ,. ೭ನೇ ತರಗತಿ, ಪ್ರಥಮ ಸ್ಥಾನ. ತನು ಶ್ರೀ ಓ.ವೈ,. ೭ನೇ ತರಗತಿ, ದ್ವಿತೀಯ ಸ್ಥಾನ.ಪಲ್ಲವಿ ಕೆ , ೯ನೇ ತರಗತಿ, ದ್ವಿತೀಯ ಸ್ಥಾನ. ಅನುe ಟಿ.ಆರ್. ೭ನೇ ತರಗತಿ, ತೃತೀಯ ಸ್ಥಾನ. ಶ್ವೇತಾ ಕೆ.ಎಸ್., ೯ನೇ ತರಗತಿ, ತೃತೀಯ ಸ್ಥಾನ. ಅಂಕುಶ್ ಸಿ.ಎಸ್., ೯ನೇ ತರಗತಿ, ತೃತೀಯ ಸ್ಥಾನ ಪಡೆದಿರುತ್ತಾರೆ.
ವಿಜೇತ ಮಕ್ಕಳಿಗೆ ಹಾಗೂ ತರಬೇತುದಾರರಾದ ಮುರುಳಿ ಸಣ್ಣಕ್ಕಿಯವರಿಗೆ ಶಾಲೆಯ ಪ್ರಾಂಶುಪಾಲ ಯೋಗೇಶ್ ಹೆಚ್ ಹೆಬ್ಬಳಗೆರೆ ಅಭಿನಂದಿಸಿzರೆ.