ಕನ್ನಡ ಜೀವಂತಿಕೆ ತುಂಬುವ ಭಾಷೆಯಾಗಿದೆ: ಕಪ್ಪನಹಳ್ಳಿ
ಶಿಕಾರಿಪುರ: ಕನ್ನಡ ಭಾಷೆಯು ಜೀವನ ಕೌಶಲ್ಯ, ಬದುಕಿನ ಮೌಲ್ಯ ವನ್ನು ತಿಳಿಸುವ ಜತೆಗೆ ಜೀವಂತಿಕೆ ಯನ್ನು ತುಂಬುವ ಭಾಷೆಯಾಗಿದ್ದು ನೂರಾರು ಶರಣ ಶರಣೆಯರಿಗೆ ಜನ್ಮ ನೀಡಿದ ಶಿಕಾರಿಪುರ ತಾಲೂಕಿ ನಲ್ಲಿ ಕನ್ನಡ ಭಾಷೆಯ ಶಿಕ್ಷಕರಾಗಿ ಸೇವೆ ಸಲ್ಲಿಸುವ ಕಾಯಕಕ್ಕೆ ಹೆಮ್ಮೆ ಪಡಬೇಕಾಗಿದೆ ಎಂದು ಶಿವಮೊಗ್ಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕನ್ನಡ ವಿಷಯ ಪರಿವೀಕ್ಷಕ ಸತೀಶ್ ಕಪ್ಪನಹಳ್ಳಿ ತಿಳಿಸಿದರು.
ಪಟ್ಟಣದ ವಿನಾಯಕ ನಗರ ದಲ್ಲಿನ ವಿಶ್ವಕರ್ಮ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಜಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜನಪದ ಪರಿಷತ್ತು ತಾಲೂಕು ಸಮಿತಿ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಂಗಮೇಶ್ವರ ವಿದ್ಯಾ ಸಂಸ್ಥೆ ದೀನಬಂದು ಪ್ರೌಡಶಾಲೆ ಶಿಕಾರಿಪುರ ವತಿಯಿಂದ ತಾಲೂಕು ಪ್ರೌಢಶಾಲಾ ಮತ್ತು ಉರ್ದು ಶಾಲಾ ಕನ್ನಡ ಬಾಷಾ ಶಿಕ್ಷಕರಿಗೆ ನಡೆದ ಸಾಹಿತ್ಯ ರಸಗ್ರಹಣ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡ ನಾಡು ನುಡಿ ಭಾಷೆಯನ್ನು ಕಟ್ಟುವ ದಿಸೆಯಲ್ಲಿ ಜಿ ಕಸಾಪ ಘಟಕ ಅತ್ಯಂತ ಕ್ರಿಯಾಶೀಲವಾಗಿದ್ದು,ಅಧ್ಯಕ್ಷ ಡಿ. ಮಂಜುನಾಥ್ ಹಲವು ಹೊಸ ಹೊಸ ಕಾರ್ಯಕ್ರಮದ ಮೂಲಕ ಬಾಷೆ ಕಟ್ಟುವ ಪ್ರಯತ್ನದಲ್ಲಿ ರಾಜ್ಯ ಮಟ್ಟದಲ್ಲಿ ಅಸಾದ್ಯವಾದ ಹಲವು ಕಾರ್ಯಕ್ರಮದಿಂದ ಯುವಪೀಳಿಗೆ ಯಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಪ್ರಯತ್ನವನ್ನು ಶ್ಲಾಸಿದ ಅವರು ಹಲವು ವರ್ಷಗಳಿಂದ ಸತತವಾಗಿ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿ ಕಥೆ,ಕವನ, ಲೇಖನ ವನ್ನು ರಚಿಸುವ ಆಸಕ್ತಿಯನ್ನು ಬೆಳೆಸಿ ಮಕ್ಕಳ ಮೂಲಕ ಸಾಹಿತ್ಯದ ಕಂಪನ್ನು ಬೆಳೆಸುತ್ತಿzರೆ. ಇದರೊಂದಿಗೆ ಸಾಹಿತ್ಯ ಹುಣ್ಣಿಮೆ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮೂಲಕ ಕನ್ನಡಪರ ಮನಸ್ಸನ್ನು ಒಗ್ಗೂಡಿಸುತ್ತಿ ರುವ ಡಿ.ಮಂಜುನಾಥ್ ವ್ಯಕ್ತಿ ಯಾಗದೆ ಶಕ್ತಿಯಾಗಿ ಗುರುತಿಸಿ ಕೊಂಡಿzರೆ ಎಂದು ಪ್ರಶಂಸಿಸಿದರು.
ಕನ್ನಡದ ಶಿಕ್ಷಕರು ಮಾತೃಹೃದಯದ ಶಿಕ್ಷಕರಾಗಿದ್ದು, ಪ್ರೀತಿ ವಾತ್ಸಲ್ಯದ ಮೂಲಕ ಮಕ್ಕಳ ಮನಸ್ಸು ಆಕರ್ಷಿಸುವ ವಿಶೇಷ ಗುಣ ಹೊಂದಿzರೆ ನೂರಾರು ಶಿವಶರಣೆಯರು ಜನಿಸಿದ ತಾಲೂಕಿನಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುವ ಅವಕಾಶ ಹಮ್ಮೆಯ ಸಂಗತಿಯಾಗಿದೆ ಎಂದ ಅವರು ಕನ್ನಡ ಭಾಷೆಯು ಪ್ರತಿಯೊಬ್ಬರಿಗೂ ಜೀವನ ಕೌಶಲ್ಯ ಬದುಕಿನ ಮೌಲ್ಯ ತಿಳಿಸುವ ಜತೆಗೆ ಜೀವಂತಿಕೆಯನ್ನು ತುಂಬುವ ಭಾಷೆಯಾಗಿದ್ದು ಶಿಕ್ಷಕರು ಶಿಬಿರದ ಸಂಪೂರ್ಣ ಪ್ರಯೋಜನ ಪಡೆದಲ್ಲಿ ಕನ್ನಡಪರ ಹೊಸ ಪೀಳಿಗೆಯ ಮನಸ್ಸು ಕಟ್ಟಲು ಸಹಕಾರಿಯಾಗಲಿದೆ ಎಂದರು.
ಎಸ್‌ಎಸ್‌ಎಲ್ಸಿ ಪರೀಕ್ಷೆ ಕನ್ನಡ ಫಲಿತಾಂಶದಲ್ಲಿ ಜಿ ೨೯ ನೇ ಸ್ಥಾನಕ್ಕೆ ಕುಸಿದಿರುವುದು ಆತಂಕದ ಸಂಗತಿ ಯಾಗಿದೆ ವಚನದ ಮೂಲಕ ಕನ್ನಡ ಸಾಹಿತ್ಯಕ್ಕೆ ಬಹು ದೊಡ್ಡ ಕೊಡುಗೆ ಯನ್ನು ನೀಡಿದ ತಾಲೂಕು ದ್ವಿತೀಯ ಭಾಷೆ ಕನ್ನಡದಲ್ಲಿ ಜಿ ಮಟ್ಟದಲ್ಲಿ ಕಡೆಯ ಸ್ಥಾನದಲ್ಲಿದೆ ಎಂದ ಅವರು ಈ ಬಗ್ಗೆ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳು ವಂತೆ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಸಾಪ ಜಿಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ಕನ್ನಡದ ಬಗೆಗಿನ ನಿರ್ಲಕ್ಷದಿಂದ ಉರ್ದು ಸಹಿತ ಹಲವು ಶಾಲೆಗಳ ವಿದ್ಯಾರ್ಥಿಗಳಿಗೆ ಓದು ಬರಹ ತೀರಾ ಕಳಪೆಯಾಗಿದ್ದು ಇದರೊಂದಿಗೆ ಹಲವು ಶಾಲೆಗಳಿಗೆ ಶಿಕ್ಷಕರಿಲ್ಲದೆ ಆಡಳಿತ ವ್ಯವಸ್ಥೆಯಿಂದ ಅನ್ಯಾಯವಾಗುತ್ತಿದೆ ಪ್ರಾಥಮಿಕ ಪ್ರೌಢ ಶಾಲಾ ಹಂತದಲ್ಲಿ ಮಾತ್ರ ಮಕ್ಕಳನ್ನು ತಿದ್ದುವ ಜತೆಗೆ ಅಭಿಮಾನ ಮೂಡಿಸಲು ಸಾದ್ಯ ಈ ದಿಸೆಯಲ್ಲಿ ಶಿಕ್ಷಕರು ಸೃಜನಾತ್ಮಕವಾಗಿ ಆಲೋಚಿಸಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ರಘು ಎಚ್.ಎಸ್ ಮಾತನಾಡಿ, ಭಾಷೆ ಉಳಿಸಿ ಬೆಳೆಸುವ ದಿಸೆಯಲ್ಲಿ ಶಿಕ್ಷಕರು ಮಹತ್ವದ ಜವಾಬ್ದಾರಿ ಹೊಂದಿದ್ದು ಪ್ರಾಥಮಿಕ ಶಾಲಾ ಹಂತದಲ್ಲಿಯೇ ಭಾಷೆ ಬಗ್ಗೆ ಪೂರ್ಣ eನ ನೀಡಿದಾಗ ಮಾತ್ರ ಅಭಿಮಾನ ಮೂಡಲಿದೆ ಈ ದಿಸೆ ಯಲ್ಲಿ ತಾ.ಕಸಾಪ ಕಾರ್ಯಕ್ರಮ, ಕಾರ್ಯಾಗಾರ, ಶಿಬಿರದ ಮೂಲಕ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಪ್ರಾಚೀನ-ಆಧುನಿಕ ಕಾವ್ಯ ಓದು ವಿಶ್ಲೇಷಣೆ ಬಗ್ಗೆ ಸಾಹಿತಿ, ತೀರ್ಥಹಳ್ಳಿಯ ವಿಶ್ರಾಂತ ಪ್ರಾಂಶುಪಾಲ ಡಾ.ಬಿ.ಎಂ ಜಯಶೀಲರಿಂದ ಮಾತು ಮಂಥನ, ಹಿರಿಯ ಸಾಹಿತಿ ಹೊಸನಗರದ ವಿಶ್ರಾಂತ ಉಪನ್ಯಾಸಕ ಡಾ.ಶಾಂತಾರಾಮ ಪ್ರಭು ರವರಿಂದ ಭಾಷೆ- ವ್ಯಾಕರಣ, ಶಿವಮೊಗ್ಗದ ಸಾಹಿತಿ, ವಿಶ್ರಾಂತ ಪ್ರಾಂಶುಪಾಲ ಡಾ| ಎಚ್.ಟಿ ಕೃಷ್ಣಮೂರ್ತಿ ರವರಿಂದ ಓದುವ- ಸಾಕಾರ ಗೊಳಿಸುವ ಕ್ರಮ ಹಾಗೂ ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಉಪನ್ಯಾಸಕ, ರಂಗನಿರ್ದೇಶಕ ಜಿ.ಆರ್ ಲವ ರಿಂದ ವಾಚನ-ಪ್ರದರ್ಶನ ನಡೆಯಿತು.
ವೇದಿಕೆಯಲ್ಲಿ ಸಂಗಮೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಿ.ಸಿ ಮಂಜುನಾಥ್,ಕಾರ್ಯದರ್ಶಿ ಜಯಲಕ್ಷ್ಮಿ ಮಂಜನಾಯ್ಕ, ತಾ.ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್ ಹುಚ್ರಾಯಪ್ಪ, ತಾ.ಕರ್ನಾಟಕ ಜನಪದ ಪರಿಷತ್ತು ಅಧ್ಯಕ್ಷ ಬಿ.ಪಾಪಯ್ಯ, ಶಿಕ್ಷಣ ಸಂಯೋಜಕ ಸೋಮಶೇಖರ್,ತಾ.ಪ್ರೌಡಶಾಲಾ ಕನ್ನಡ ಬಾಷಾ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ತಾ.ವಿಶ್ವಕರ್ಮ ಸಮಾಜದ ಅಧ್ಯಕ್ಷ, ನಿವೃತ್ತ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಆಚಾರ್ ಮತ್ತಿತರರು ಉಪಸ್ಥಿತರಿದ್ದರು. ಸತ್ಯನಾರಾಯಣ ಸ್ವಾಗತಿಸಿದರು, ಕರಿಬಸಪ್ಪ ನಿರೂಪಿಸಿ ವಂದಿಸಿದರು.