ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ …
ದಕ್ಷಿಣ ಭಾರತದ ಇತಿಹಾಸದಲ್ಲಿ ಮರೆಯಲಾರದ ಮಹತ್ವದ ದಿನವೇ ಹೈದ್ರಾಬಾದ್ ವಿಮೋಚನಾ ಚಳುವಳಿ. ಇದರ ಫಲವೇ ಕಲ್ಯಾಣ ಕರ್ನಾಟಕ. ಇದು ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ಹೊಸ ಹೆಸರು. ಇದರಲ್ಲಿ ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ, ಯಾದಗಿರಿ ರಾಯಚೂರು ಹಾಗೂ ವಿಜಯನಗರ ಜಿಗಳು ಇವೆ .
ಕಲ್ಯಾಣ ಕರ್ನಾಟಕ ಎಂಬ ಹೆಸರು ಐತಿಹಾಸಿಕ ಹಿನ್ನಲೆ ಹೊಂದಿದ್ದು ಚಾಲುಕ್ಯರಿಂದ (ಕಲ್ಯಾಣಿ ಚಾಲುಕ್ಯರು) ಬಂದಿದೆ. ಅಲ್ಲದೆ ಕಲ್ಯಾಣವು ಚರಿತ್ರೆಯಲ್ಲಿ ಹೆಚ್ಚು ಮಹತ್ವತೆಯನ್ನು ಪಡೆದಿದೆ.
ಈ ಭಾಗದಲ್ಲಿ ಆಳಿದ ಅರಸು ಮನೆತನಗಳ ಚರಿತ್ರೆಯನ್ನು ಒಳಗೊಂಡಿರುವ ವಿಷಯಗಳನ್ನ ಕೃತಿಗಳಲ್ಲಿ ಕಾಣಬಹುದಾಗಿದ್ದು ಕೆಲವನ್ನು ಇಲ್ಲಿ ವಿವರಿಸಿದೆ.
ರಂಜೋಳದ ಸಿಂದರು, ಕುರುಗೋಡು ಸಿಂದರು, ಗೆಜ್ಜಲಗಟ್ಟಿ ದೇಸಾಯಿಗಳು, ನೊಳಂಬರು, ಜರಿಮಲೆ ನಾಯಕರು, ಗುಡೇಕೋಟೆ ಪಾಳೆಯಗಾರರು, ಕನಕಗಿರಿ ಪಾಳೆಯಗಾರರು, ಉಚ್ಚಂಗಿ ಪಾಂಡ್ಯರು, ಆನೆಗೋಂದಿ ಪಾಳೆಯಗಾರರು, ರಾಯಚೂರು ಜಿಯ ಕೆಲವು ನಾಯಕ ಮನೆತನಗಳು, ಕೆಂಚನಗುಡ್ಡದ ನಾಡಗೌಡರು, ಯಲಬುರ್ಗಿ ಸಿಂದರು- ಮೊದಲಾದವರು.
ಇಂದಿನ ಕಲ್ಯಾಣ ಕರ್ನಾಟಕ ಆಗಿನ ಕಾಲದಲ್ಲಿ ಶರಣ ಚಳುವಳಿ ಹಾಗು ವಚನ ಸಾಹಿತ್ಯ ರಚನೆಯ ಕೇಂದ್ರ ಬಿಂದು ಆಗಿತ್ತು. ಅಂತೆಯೇ ಹೈದರಾಬಾದ್ ಕರ್ನಾಟಕ ಎಂಬ ಹೆಸರಿನ ಬದಲಾಗಿ. ಸೂಕ್ತವಾದದ್ದು ಕಲ್ಯಾಣ ಕರ್ನಾಟಕ ಎಂದು ಬದಲಿಸಲಾಯಿತು . ಏಕೆಂದರೆ ಈಗ ಈ ಜಿಗಳಿಗೆ ಹೈದರಾಬಾದ್ ಪ್ರಾಂತ್ಯಕ್ಕಾಗಲಿ, ತೆಲಂಗಾಣಕ್ಕಾಗಲಿ, ಹೈದರಾಬಾದ್ ನಗರಕ್ಕಾಗಲಿ ಯಾವುದೇ ಸಂಬಂಧವೂ ಇಲ್ಲ. ಜನರು ಆಡುವ ನುಡಿಯ ಬುಡದ ಮೇಲೆ ರಾಜ್ಯಗಳ ಎಯನ್ನು ತೀರ್ಮಾನಿಸಬೇಕು ಎಂಬ ಕೂಗು ಬಲವಾಯಿತು. ಈ ಬೇಡಿಕೆಯ ಮೇರೆಗೆ ಒಂದೇ ಬಗೆಯ ನುಡಿಯನ್ನು ಹೆಚ್ಚಾಗಿ ಆಡುವ ಹರವುಗಳನ್ನು ಒಟ್ಟುಗೂಡಿಸಿ ರಾಜ್ಯಗಳನ್ನು ಏರ್ಪಡಿಸಲಾಯಿತು.
ಆಗ ಕನ್ನಡಿಗರು ಇರುವ ಹರವುಗಳನ್ನು ಸೇರಿಸಿ ಮೈಸೂರು ರಾಜ್ಯ ಎಂದು ಮಾಡಲಾಯಿತು. ಮುಂದೆ ಕರ್ನಾಟಕ ರಾಜ್ಯ ಎಂದು ೧೯೭೩ರಲ್ಲಿ ಹೆಸರು ಮಾರ್ಪಟ್ಟಿತು. ಹಾಗೆಯೇ ೧೯೪೮. ಸೆ.೧೭ ನಿಜಮರ ಬಂಧನದಿಂದ ಸ್ವತಂತ್ರ್ಯಪಡೆದು ಹೈರ್ದಾಬಾದ್ ಕರ್ನಾಟಕವು ಇಂದು ಕಲ್ಯಾಣ ಕರ್ನಾಟಕವೆಂಬುದು, ಇದಕ್ಕೆ ಕಾಣೀಭೂತರು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ೨೦೧೯ರ ವಿಮೋಚನಾ ದಿನಾಚರಣೆಯಂದು ಹೈದರಾಬಾದ್ ಕರ್ನಾಟಕ ಪ್ರಾಂತ್ಯವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರು. ಆ ಮೂಲಕ ಹಳೆಯ ಹೈದರಾಬಾದ್ ಕರ್ನಾಟಕ ವಿಮೋಚನೆ ದಿನದ ಹೆಸರು ಬದಲಾವಣೆ ಮಾತ್ರವಲ್ಲದೆ ಅದರ ಒಟ್ಟು ಬದುಕಿನ ನೈಜ ಇತಿಹಾಸ ಶೋಧನೆಗೆ ಹಾದಿ ಹಾಕಿಕೊಟ್ಟರುವುದು ಈ ಭಾಗದ ಜನರಿಗೆ ಸಂತಸ ತಂದಿದೆ.
ವಿಶೇಷವೆಂದರೆ ಇಲ್ಲಿ ಪ್ರತಿವರ್ಷ ಎರಡು ಸ್ವಾತಂತ್ರ್ಯೋತ್ಸವಗಳು. ಒಂದು, ಆ.೧೫. ಮತ್ತೊಂದು, ಸೆ.೧೭. ಅದರಂತೆ ಇಂದು ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ. ಸರ್ಕಾರವೇ ಈ ಬಾರಿ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಅಮೃತ ಮಹೋತ್ಸವ ಘೋಷಿಸಿದೆ. ಅಂದಹಾಗೆ. ಕಲ್ಯಾಣ ಕರ್ನಾಟಕವೆಂದು ಹೊಸ ಹೆಸರಿನಿಂದ ನಾಮಕರಣ ಮಾಡಿ ಮೂರು ವರ್ಷಗಳೇ ಕಳೆದುಹೋದವು. ಆದರೆ ಇವತ್ತಿಗೂ ಯಾವುದೇ ಹೊಸತಿನ ಕಲ್ಯಾಣವಿಲ್ಲ. ಇಂದು ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಇಂದಿಗೂ ೩೭೧ಜೆ ಸಮರ್ಪಕ ಜರಿ ಆಗಿಲ್ಲ. ಅಭಿವೃದ್ಧಿ ಮಂಡಳಿಯಲ್ಲಿ ಅಗತ್ಯ ಸಿಬ್ಬಂದಿ ಸಹ ಇಲ್ಲದೆ ಅಭಿವೃದ್ಧಿ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ.
ಆದಾಗ್ಯೂ ಈ ಭಾಗದ ಜನರು ಸದಾಶಯದೊಂದಿಗೆ ಕಲ್ಯಾಣದ ನೀರೀಕ್ಷೆಯಲ್ಲಿ ಕಾಯುತ್ತಿರುವುದು ನಿಜ. ಉದ್ಯೋಗ,ನೀರಾವರಿ, ಶಿಕ್ಷಣ, ಆರೋಗ್ಯ, ಸಾಮಾಜಿಕ ನ್ಯಾಯದ ಸೌಕರ್ಯ ಸರಕಾರದಿಂದ ದೊರೆಯ ಬೇಕಿದೆ. ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ನಿಮಿತ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವಿಶೇಷ ಕಾರ್ಯಕ್ರಮಕ್ಕೆ ಚಾಲನಿ ನೀಡಿ, ಏಕೀಕರಣದ ರೂವಾರಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪ್ರತಿಮೆಗೆಮಾಲಾರ್ಪಣೆ ನಂತರ ಧ್ವಜರೋಹಣ ಮಾಡಿದರು.
೩೭೧ಜೆ ಸೌಲಭ್ಯಗಳ ಮನವರಿಕೆ, ಕಾಂಗ್ರೆಸ್ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಮುಂದೆ ಹೆಚ್ಚಿನ ಅಭಿವೃದ್ಧಿ ಕುರಿತು ಅನುದಾನ ಬಿಡುಗಡೆ ಘೋಷಣೆ ಮುಂತಾದ ಕಾರ್ಯಗಳಿಗೆ ಚಾಲನೆ ನೀಡಿದರು.