ರಾಜಕೀಯದಲ್ಲಿ ಕಾಗೋಡು ತಿಮ್ಮಪ್ಪ ನಿಜವಾಗಿಯೂ ಭೀಷ್ಮ ಇದ್ದಂತೆ: ಹಾಲಪ್ಪ

ಸಾಗರ : ಕಂಸ ಎಂದು ಕರೆದ ವರ ಬಾಯಲ್ಲೀಗ ಕಾಗೋಡು ತಿಮ್ಮಪ್ಪ ಭೀಷ್ಮ ಆಗಿzರೆ. ಯಡಿ ಯೂರಪ್ಪ ಮತ್ತವರ ಮಕ್ಕಳನ್ನು ಜೈಲಿಗೆ ಕಳಿಸುತ್ತೇವೆ ಎಂದವರ ಬಾಯಲ್ಲೀಗ ಯಡಿಯೂರಪ್ಪ ಪುಣ್ಯಾತ್ಮ ಎನ್ನುವ ಮಾತು ಬರುತ್ತಿದೆ. ಕೆಲವರ ನಾಲಿಗೆ ಹೇಗೆ ಬೇಕಾದರೂ ಹೊರಳುತ್ತದೆ ಎಂದು ಶಾಸಕ ಹಾಲಪ್ಪ ಹರತಾಳು ಹೆಸರು ಹೇಳದೇ ಗೋಪಾಲಕೃಷ್ಣ ಬೇಳೂರಿಗೆ ಟಾಂಗ್ ನೀಡಿzರೆ.
ತಾಲ್ಲೂಕಿನ ಚನ್ನಶೆಟ್ಟಿಕೊಪ್ಪ ದಲ್ಲಿ ಶನಿವಾರ ರಾತ್ರಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್‍ಯ ಕ್ರಮದಲ್ಲಿ ಬೇರೆಬೇರೆ ಪಕ್ಷದಿಂದ ಬಿಜೆಪಿಗೆ ಸೇರ್ಪಡೆ ಗೊಂಡವರನ್ನು ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡುತ್ತಿದ್ದರು.
ಕಳೆದ ಐದು ವರ್ಷದಲ್ಲಿ ನಾನು ಕಾಗೋಡು ತಿಮ್ಮಪ್ಪ ಅವರನ್ನು ಕಟುವಾಗಿ ಟೀಕಿಸಿಲ್ಲ. ರಾಜಕೀಯ ದಲ್ಲಿ ಅವರು ನಿಜವಾಗಿಯೂ ಭೀಷ್ಮ ಇದ್ದಂತೆ. ಫಲಿತಾಂಶವನ್ನು ಬದಲಾಯಿಸುವ ಶಕ್ತಿ ಅವರ ಕೈನಲ್ಲಿರುವುದು ಹೌದು. ಮಹಾ ಭಾರತದಲ್ಲಿ ಭೀಷ್ಮ ಕೌರವ ಪಕ್ಷ ಪಾತಿಯಾಗಿ ಅಧರ್ಮ ಸಹಿಸದೆ ಕೌರವರ ನಾಶಕ್ಕೆ ಕಾರಣವಾಗಿ ದ್ದರು. ಈ ಚುನಾವಣೆಯಲ್ಲಿ ಸಹ ಅಧರ್ಮಕ್ಕೆ ಸೋಲಾಗುತ್ತದೆ ಎಂದು ಹೇಳಿದರು.
ಎರಡು ಬಾರಿ ಶಾಸಕರಾದ ವರು ವಿಧಾನಸಭೆಯಲ್ಲಿ ಒಂದು ಶಬ್ದ ಮಾತನಾಡಿಲ್ಲ. ಅಭಿವೃದ್ದಿ ಯನ್ನೂ ಮಾಡಿಲ್ಲ. ಈಗ ನಾನು ಅಭಿವೃದ್ದಿ ಮಾಡಿಲ್ಲ ಎಂದು ಹೇಳಿ ಕೊಂಡು ತಿರುಗುತ್ತಿzರೆ. ಕ್ಷೇತ್ರ ವ್ಯಾಪ್ತಿಯಲ್ಲಿ ರೈತರು ಬೇರೆಬೇರೆ ಸಂಕಷ್ಟಕ್ಕೆ ಸಿಲುಕಿzರೆ. ಅಭ ಯಾರಣ್ಯ, ಪರಿಭಾವಿತ ಅರಣ್ಯ, ಸಿಂಗಳೀಕ ಅಭಯಾರಣ್ಯ, ಅಂಬಾ ರಗುಡ್ಡ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಹೀಗೆ ಸ್ಥಳೀಯ ರೈತರು ಅನುಭವಿಸುತ್ತಿರುವ ಸಮಸ್ಯೆಗೆ ಮಾವ ಅಳಿಯ ಕಾರಣ. ಅವರ ಅವಧಿಯಲ್ಲಿಯೆ ಕಾನೂನು ಜರಿಗೆ ಬಂದಿದೆ. ಇದಕ್ಕೆ ಬೇಕಾದ ಸಾಕ್ಷಿಯನ್ನು ನಾನು ಕೊಡಲು ಸಿದ್ದನಿದ್ದೇನೆ ಎಂದು ಹೇಳಿದರು.
ಕ್ಷೇತ್ರವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ನೂರಾರು ರಸ್ತೆ, ಕಿರು ಸೇತುವೆ, ಸಮುದಾಯ ಭವನ ನಿರ್ಮಿಸಲಾಗಿದೆ. ಹಸಿರುಮಕ್ಕಿ ಸೇತುವೆ, ತುಮರಿ ಸೇತುವೆ ಕಾಮ ಗಾರಿ ಪ್ರಗತಿಯಲ್ಲಿದೆ. ಆವಿನಹಳ್ಳಿ ಹೋಬಳಿ, ಆನಂದಪುರಂ ಹೋಬ ಳಿಗೆ ಕುಡಿಯುವ ನೀರು ಪೂರೈ ಕೆಗಾಗಿ ಕಾರ್ಯಯೋಜನೆ ರೂಪಿ ಸಿದ್ದು ಅನುಷ್ಟಾನದ ಹಂತದಲ್ಲಿದೆ. ಅಭಿವೃದ್ದಿ ವಿಷಯದಲ್ಲಿ ಯಾವುದೇ ರಾಜಿಯಿಲ್ಲದೆ ಕೆಲಸ ಮಾಡ ಲಾಗುತ್ತಿದ್ದು, ಅಭಿವೃದ್ದಿ ಕೆಲಸ ವನ್ನು ಮೆಚ್ಚಿ ಬೇರೆಬೇರೆ ಪಕ್ಷದಿಂದ ನೂರಾರು ಯುವಕರು ಬಿಜೆಪಿ ಸೇರುತ್ತಿzರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಶಾಂತಪ್ಪ ಗೌಡ, ಅರುಣ ಕುಗ್ವೆ, ಹರೀಶ್ ಮೂಡಳ್ಳಿ, ದೇವೇಂದ್ರಪ್ಪ ಯಲ ಕುಂದ್ಲಿ, ಕಾನುಗೋಡು ಗಣಪತಿ, ಬಂಗಾರಪ್ಪ ಚನ್ನಶೆಟ್ಟಿಕೊಪ್ಪ, ದೇವರಾಜ್, ಅಭಿ, ರಮೇಶ್, ಅಶೋಕ್ ನರಸೀಪುರ, ಬಂಗಾರಪ್ಪ ಗೌತಮಪುರ, ಇದ್ದರು.