ಬಿಎಸ್‌ವೈ ಆಶೀರ್ವಾದ ಪಡೆದ ಕೆ.ಬಿ.ಅಶೋಕ್‌ನಾಯ್ಕ

ಶಿವಮೊಗ್ಗ: ಶಿಕಾರಿಪುರ ವಿಧಾ ನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಸಿಎಂ ಬಿ.ಎಸ್. ಯಡಿ ಯೂರಪ್ಪ ಪುತ್ರ ಬಿ.ವೈ. ವಿಜ ಯೇಂದ್ರ ಬುಧವಾರ ನಾಮಪತ್ರ ಸಲ್ಲಿಸುತ್ತಿದ್ದು, ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ ನಾಯ್ಕ ಪಾಲ್ಗೊಂ ಡಿದ್ದರು.
ಬಿ.ವೈ.ವಿಜಯೇಂದ್ರ ನಾಮ ಪತ್ರ ಸಲ್ಲಿಕೆ ಕಾರ್ಯಕ್ರಮದ ಮುನ್ನ ನಡೆದ ಪ್ರಚಾರದಲ್ಲಿ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕನಾಯ್ಕ ಅವರು ಪಾಲ್ಗೊಂ ಡಿದ್ದರು. ಕಾರ್ಯಕರ್ತರ ಜತೆ ಯಲ್ಲಿ ಪ್ರಚಾರ ನಡೆಸಿದ ಅವರು ವಿಜಯೇಂದ್ರ ಅವರ ಗೆಲುವಿಗೆ ಶುಭಕೋರಿದರು.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚುನಾವಣೆ ಮತ್ತು ಪ್ರಚಾರ ಕಾರ್ಯದ ಬಗ್ಗೆ ಸಮಾಲೋಚನೆ ನಡೆಸಿ ಆಶೀರ್ವಾದ ಪಡೆದರು. ಲೋಕಸಭೆ ಸದಸ್ಯ ಬಿ.ವೈ. ರಾಘವೇಂದ್ರ ಅವರೊಂದಿಗೆ ಗ್ರಾಮಾಂತರ ಕ್ಷೇತ್ರದ ಪ್ರವಾಸದ ಕುರಿತು ಚರ್ಚಿಸಿದರು.
ಗ್ರಾಮಾಂತರ ಕ್ಷೇತ್ರ ಪ್ರಭಾರಿ ಎಸ್.ದತ್ತಾತ್ರಿ ಅವರು ಶಿಕಾರಿಪುರ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಅವರ ಗೆಲುವಿಗೆ ಶುಭಕೋರಿ ದರು. ಇದೇ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಆಶೀರ್ವಾದ ಪಡೆದರು. ಲೋಕ ಸಭೆ ಸದಸ್ಯ ಬಿ.ವೈ.ರಾಘವೇಂದ್ರ ಉಪಸ್ಥಿತರಿದ್ದರು