ಜೂ.೨೫: ಉಚಿತ ಸಾಮೂಹಿಕ ರಂಗಪ್ರವೇಶ ಕಾರ್ಯಕ್ರಮ…
ಶಿವಮೊಗ್ಗ: ಸಹಚೇತನ ನಾಟ್ಯಾ ಲಯದಿಂದ ಜೂ.೨೫ ರಂದು ಸಂಜೆ ೫.೩೦ಕ್ಕೆ ಕುವೆಂಪು ರಂಗಮಂದಿರದಲ್ಲಿ ನೃತ್ಯ ಕದಂಬಕಂ ಹೆಸರಿನ ಅಡಿಯಲ್ಲಿ ಉಚಿತ ಸಾಮೂಹಿಕ ರಂಗಪ್ರವೇಶ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಹಾಗೂ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸಹಚೇತನ ನಾಟ್ಯಾಲಯ ಹಲವು ವರ್ಷಗಳಿಂದ ಸಾವಿರಾರು ಜನರಿಗೆ ಭರತನಾಟ್ಯ ವಿದ್ಯೆ ಕಲಿಸಿದೆ. ಇಲ್ಲಿ ಕಲಿತ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿzರೆ. ಭರತ ನಾಟ್ಯ ದಲ್ಲಿ ರಂಗಪ್ರವೇಶ ಬಹಳ ಮುಖ್ಯ ವಾದ ಮತ್ತು ಶಾಸ್ತ್ರೀಯವಾಗಿದೆ. ಈ ರಂಗಪ್ರವೇಶಕ್ಕೆ ಖರ್ಚು ಕೂಡ ಹೆಚ್ಚಾಗುತ್ತದೆ. ಪ್ರತಿಭಾವಂತ ಬಡ ಮಕ್ಕಳಿಗೆ ರಂಗಪ್ರವೇಶ ಮಾಡು ವುದು ಕಷ್ಟವಾಗುತ್ತದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡ ಸಹಚೇತನ ನಾಟ್ಯಾಲಯ ತಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರುವ ಐವರು ಭರತನಾಟ್ಯ ಪ್ರವೀಣರಿಗೆ ಉಚಿತ ವಾಗಿ ಸಾಮೂಹಿಕ ರಂಗಪ್ರವೇಶ ಹಮ್ಮಿಕೊಂಡಿದೆ ಎಂದರು.
ಇಲ್ಲಿ ವ್ಯಾಸಂಗ ಮಾಡಿದ ಡಿ.ಎ. ಸೇಜಲ್, ಶರಣ್ಯ ಎ.ಸಿ. , ಕಾಮಾಕ್ಷಿ ಆರ್.ಪ್ರಭು, ಸಿಂಧುಶ್ರೀ ಅಡಿಗ, ಆರ್. ರಕ್ಷಿತ ಅವರು ಸಾಮೂಹಿಕ ರಂಗಪ್ರವೇಶ ಮಾಡ ಲಿzರೆ. ಇದೊಂದು ಅರ್ಥ ಪೂರ್ಣ ಕಾರ್ಯಕ್ರಮವಾಗಿದೆ. ಬಹುಶಃ ಉಚಿತ ಸಾಮೂಹಿಕ ರಂಗಪ್ರವೇಶ ಹಮ್ಮಿಕೊಂಡಿರು ವುದು ಜಗತ್ತಿನಲ್ಲಿಯೇ ಇದೇ ಪ್ರಥಮವಾಗಿದೆ. ಇದರ ಕೀರ್ತಿ ಸಹಚೇತನ ನಾಟ್ಯಾಲಯದ ನೃತ್ಯ ಗುರು ಸಹನಾ ಚೇತನ್‌ರವರಿಗೆ ಸಲ್ಲುತ್ತದೆ ಎಂದರು.
ನೃತ್ಯಗುರು ಸಹನಾ ಚೇತನ್ ಮಾತನಾಡಿ, ಭರತನಾಟ್ಯ ಕಲಿಕಾ ನಿರತ ವಿದ್ಯಾರ್ಥಿಗಳಿಗೆ ತಮ್ಮ ನೃತ್ಯ ಜೀವನದ ಅತ್ಯಂತ ಮಹತ್ವದ ಘಟ್ಟವೇ ಈ ರಂಗಪ್ರವೇಶವಾ ಗಿದೆ. ನೃತ್ಯವೆಂದರೆ ಅದೊಂದು ಆತ್ಮಾನುಭವದ ಅಭಿವ್ಯಕ್ತಿ. ಆನಂ ದದ ಪರಾಕಾಷ್ಠೆಯ ಅನುಭೂತಿ ಯಾಗಿದೆ. ಗುರುವಿನ ಮಾರ್ಗ ದರ್ಶನದಲ್ಲಿ ಈ ಭಾವಸ್ಪಂದನ ಹೊರಹೊಮ್ಮಿದಾಗ ದೊರಕುವ ಫಲಶ್ರುತಿಯೇ (೩ನೇ ಪುಟಕ್ಕೆ)