ಜು.೨೧: ಬೃಹತ್ ರೈತ ಸಮಾವೇಶ…
ಶಿವಮೊಗ್ಗ: ಹುತಾತ್ಮ ರೈತರ ದಿನಾಚರಣೆ ನಿಮಿತ್ತ ಜು.೨೧ ರಂದು ಬೆಳಿಗ್ಗೆ ೧೧ ಗಂಟೆಗೆ ನರ ಗುಂದದ ವೀರಗಲ್ಲಿನ ಬಳಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳ ಲಾಗಿದೆ ಎಂದು ರಾಜ್ಯ ರೈತ ಸಂಘ ದ ಅಧ್ಯಕ್ಷ ಹೆಚ್.ಆರ್. ಬಸವ ರಾಜಪ್ಪ ಸುದ್ದಿಗೋಷ್ಟಿಯಲ್ಲಿ ಹೇಳಿ ದರು.
ನರಗುಂದ ನವಲಗುಂದ ಘಟನೆ ನಡೆದು ೪೩ ವರ್ಷಗಳಾ ಗಿವೆ. ಇದರ ಅಂಗವಾಗಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳ ಲಾಗಿದ್ದು, ಸಮಾವೇಶದಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸಲು ಮತ್ತು ಹೋರಾಟದ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ ಎಂದರು.
ಪ್ರಮುಖವಾಗಿ ಭೂಸುಧಾ ರಣಾ ಕಾಯಿದೆಯನ್ನು ರೈತಸಂಘ ವಿರೋಧಿಸುತ್ತದೆ. ರೈತರಲ್ಲದವರು ಭೂಮಿ ಖರೀದಿ ಮಾಡಿದರೆ ಕೃಷಿ ಭೂಮಿ ರೈತರ ಕೈತಪ್ಪಲಿದೆ. ಇದ ರಿಂದ ಆಹಾರ ಭದ್ರತೆ ಕಾಡುತ್ತದೆ. ಆದ್ದರಿಂದ ಈ ಕಾಯಿದೆಯನ್ನು ವಾಪಾಸು ತೆಗೆದುಕೊಳ್ಳಬೇಕು. ಇದರ ಜೊತೆಗೆ ರೈತರ ಬೆಳೆಗೆ ವೈಜನಿಕ ಬೆಲೆ ನಿಗದಿ ಮಾಡ ಬೇಕು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾ ರಗಳು ಬರಗಾಲ ಮತ್ತು ಅತಿವೃಷ್ಟಿ ಯನ್ನು ನಿಭಾಯಿಸುವಲ್ಲಿ ಸೋತಿ ವೆ. ಪರಿಹಾರಗಳು ಸಮರ್ಪಕ ವಾಗಿ ನೀಡುತ್ತಿಲ್ಲ. ಜೊತೆಗೆ ರೈತವಿ ರೋಧಿ ಕಾಯಿದೆಗಳನ್ನು ಜರಿಗೆ ತರುತ್ತವೆ. ರೈತ ಆರ್ಥಿಕವಾಗಿ ದಿವಾ ಳಿಯಾಗುತ್ತಿದ್ದಾನೆ. ಆದ್ದರಿಂದ ರೈತರ ಸಂಪೂರ್ಣ ಸಾಲ ವನ್ನು ಮನ್ನಾ ಮಾಡಬೇಕು ಎಂದರು.
ಸರ್ಕಾರದ ಗ್ಯಾರಂಟಿಗಳನ್ನು ರೈತಸಂಘ ಸ್ವಾಗತಿಸುತ್ತದೆ. ಈ ಗ್ಯಾರಂಟಿಗಳು ಬಡವರ ಪರ ಇದೆ. ಆದರೆ ಗ್ಯಾರಂಟಿಗಳಿಗಾಗಿ ಹೊಸ ಸಾಲ ಮಾಡಬಾರದು. ಅನ್ನಭಾಗ್ಯ ಯೋಜನೆಗೆ ಹೊರರಾಜ್ಯದಿಂದ ಅಕ್ಕಿ ತರುವ ಬದಲು ಡಾ. ಸ್ವಾಮಿ ನಾಥನ್ ವರದಿಯಂತೆ ರೈತರ ಉತ್ಪಾದನಾ ವೆಚ್ಚದ ಮೇಲೆ ಲಾಂಭಾಂಶ ಸೇರಿಸಿ ರೈತರಿಂದಲೇ ಭತ್ತ, ರಾಗಿ, ಜೋಳ ಖರೀದಿಸಿ ಅಕ್ಕಿ ಯನ್ನೂ ಮಾಡಿಸಿ ನೀಡಬೇಕು. ಕೇವಲ ಅಕ್ಕಿ ಕೊಡುವುದ ರಿಂದ ಲಾಭವಿಲ್ಲ. ಕಡಿಮೆ ಅಕ್ಕಿ ನೀಡಿ ಅದರ ಜೊತೆಗೆ ರಾಗಿ, ಗೋಧಿ ಸಿರಿಧಾನ್ಯ, ತೆಂಗಿನಕಾಯಿ ಸೇರಿ ದಂತೆ ಉಳಿದ ಧಾನ್ಯಗಳನ್ನು ಕೂಡ ನೀಡಬಹುದು ಎಂದರು.
ರಾಜ್ಯ ಸರ್ಕಾರ ಎಪಿಎಂಸಿ ಕಾಯಿದೆ ಸೇರಿದಂತೆ ಮೂರು ರೈತವಿರೋಧಿ ಕೃಷಿ ಕಾಯಿದೆ ಗಳನ್ನು ವಾಪಾಸು ಪಡೆಯ ಬೇಕು. ಬಗರ್‌ಹುಕುಂ ಸಾಗುವಳಿದಾ ರರಿಗೆ ಹಕ್ಕುಪತ್ರ ನೀಡಬೇಕು. ವಿದ್ಯುತ್ ಕ್ಷೇತ್ರ ಮತ್ತು ಬ್ಯಾಂಕುಗ ಳನ್ನು ಖಾಸಗೀಕರಣ ಮಾಡಬಾ ರದು.ತೆಂಗು ಬೆಳೆಗಾರರಿಗೆ, ಕಬ್ಬು ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಈ ಎಲ್ಲಾ ವಿಷಯ ಗಳನ್ನು ಸಮಾವೇಶದಲ್ಲಿ ಚರ್ಚಿಸ ಲಾಗುವುದು ಎಂದರು.
ಪದಾಧಿಕಾರಿಗಳಾದ ಇ.ಬಿ. ಜಗದೀಶ್, ಎಸ್. ಶಿವಮೂರ್ತಿ, ಹಿಟ್ಟೂರು ರಾಜು, ಸಿ. ಚಂದ್ರಪ್ಪ, ಕಸೆಟ್ಟಿ ರುದ್ರೇಶ್, ಪಿ.ಡಿ. ಮಂಜಪ್ಪ, ಕೆ. ರಾಘವೇಂದ್ರ, ನಾಗರಾಜ್, ಜನೇಶ್ ಇದ್ದರು.