ಜೂ.೧೮:ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಸಂಜೆ

ಶಿವಮೊಗ್ಗ : ಸಾಗರ ರಸ್ತೆಯ ಡಾ. ಪಂಡಿತ ಪುಟ್ಟರಾಜಕವಿ ಗವಾಯಿಗ ಳವರ ಕುರುಡು ಮಕ್ಕಳ ಸಂಗೀತ ವಿದ್ಯಾಲಯ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಜೂ. ೧೮ರ ಸಂಜೆ ೬.೩೦ಕ್ಕೆ ಗಾನಲಹರಿ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್‍ಯಕ್ರಮ ಆಯೋಜಿಸಲಾಗಿದೆ.
ರಾಜ್ಯ ಪ್ರಶಸ್ತಿ ಪುರಸ್ಕತ ಪಂ. ಆರ್.ಬಿ. ಸಂಗಮೇಶ್ವರ ಗವಾಯಿ ಗಳು ಅಧ್ಯಕ್ಷತೆ ವಹಿಸಲಿzರೆ. ಶಿಕ್ಷಕಿ ದೀಪಾ ಎಂ. ಕುಪ್ಸದ್ ಅತಿಥಿ ಗಳಾಗಿ ಆಗಮಿಸಲಿzರೆ. ಈ ಸಂದರ್ಭದಲ್ಲಿ ಆಶ್ರಮದ ಅಂಧ ಮಕ್ಕಳಿಂದ ಸಂಗೀತ ಸಂಯೋಜಿತ ಪ್ರಾರ್ಥನೆ ನಡೆಯಲಿದೆ. ಗೋಪಾ ಳದ ನಿಕೇತನ ಭಜನಾ ಮಂಡ ಳಿಯಿಂದ ಭಜನೆ,ಸಿzಪುರದ ಪಂಡಿತ ಗಣಪತಿ ಭಟ್ ಹಾಸಣಗಿ ಅವರ ಶಿಷ್ಯರಾದ ಖ್ಯಾತ ಹಿಂದೂ ಸ್ತಾನಿ ಗಾಯಕಿ ವಿದುಷಿ ಮೇಧಾ ಭಟ್‌ರಿಂದ ಅತಿಥಿ ಗಾಯನ ನಡೆ ಯಲಿದೆ.
ರಾಮಣ್ಣ ಭಜಂತ್ರಿ, ವೀರಭ ದ್ರಯ್ಯ ಶಾಸ್ತ್ರಿ, ಆರ್. ತುಕಾರಾಮ್ ರಂಗಧೋಳ್, ವಿನಾಯಕ ಭಟ್ ಶಿವರಾಜಪ್ಪ, ಸಿದ್ದಣ್ಣ ಬಡಿಗೇರ್, ವೀರಣ್ಣ ಮಾಳೇನಹಳ್ಳಿ ಅವರು ವಿವಿಧ ವಾದ್ಯಗಳೊಂದಿಗೆ ಸಾಥ್ ನೀಡಲಿzರೆ. ಉಸ್ತಾದ್ ಹುಮಾ ಯೂನ್ ಹರ್ಲಾಪುರ್ ನಿರೂಪಿ ಸಲಿzರೆ.