ಜೂನ್ ೧೧ ಮತ್ತು ೧೨ : ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ವಿಗ್ರಹ ಪ್ರತಿಷ್ಠಾಪನಾ ಸಮಾರಂಭ …

ಶಿವಮೊಗ್ಗದ ಸವಳಂಗ ರಸ್ತೆ, ಡಿವಿಎಸ್ ಬಡಾವಣೆ ಯಲ್ಲಿ ನೂತನವಾಗಿ ನಿರ್ಮಿ ಸಿರುವ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ವಿಗ್ರಹ ಪ್ರತಿಷ್ಠಾಪನಾ ಸಮಾರಂಭ ಜೂ.೧೧ ಮತ್ತು ೧೨ ರಂದು ವಿಜೃಂಭಣೆಯಿಂದ ನಡೆಯಲಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ದೇವಸ್ಥಾನದ ಪ್ರಮುಖರು ಶ್ರೀ ಚೌಡೇಶ್ವರಿ ದೇವಿ ಮತ್ತು ಶ್ರೀ ನಾಗದೇವರ ನೂತನ ಶಿಲಾ ಮೂರ್ತಿಯ ಅಷ್ಟ ಬಂಧ ಮಹೋತ್ಸವ ನಡೆ ಯಲಿದೆ ಎಂದು ಅವರು ತಿಳಿಸಿದರು.


ದೇವಸ್ಥಾನದ ಹಿನ್ನೆಲೆ :
ಹೊಸಕಟ್ಟೆ ಶ್ರೀ ಚೌಡೇಶ್ವರಿ ದೇವಿಯು ಶಿವಮೊಗ್ಗದ ನವುಲೆಯ ಸಣ್ಣ ದಿಳ್ಳೆಪ್ಪ ಮತ್ತು ದೊಡ್ಡ ದಿಳ್ಳೆಪ್ಪ ಕುಟುಂಬದ ಮನೆ ದೇವರಾಗಿದ್ದು, ಅವರ ಹೆಸರಿನಲ್ಲಿ ಅಂದಾಜು ೨೫ ಎಕರೆ ಜಮೀನಿದ್ದು, ಈಗ ಪ್ರಸ್ತುತ ೧೦ ಎಕರೆ ಜಮೀನಿದೆ. ಸಣ್ಣ ದಿಳ್ಳೆಪ್ಪ ಮತ್ತು ದೊಡ್ಡ ದಿಳ್ಳೆಪ್ಪ ಕುಟುಂಬಗಳು ತುಂಬಾ ಅನ್ಯೋನ್ಯತೆಯಿಂದ ಇದ್ದರು. ಹೀಗಿರುವಾಗ ಒಂದು ದಿನ ಇದ್ದಕ್ಕಿದ್ದಂತೆ ದೊಡ್ಡ ದಿಳ್ಳೆಪ್ಪನವರ ಪತ್ನಿ ಲಕ್ಕಮ್ಮನವರಿಗೆ ವಿಪರೀತ ಸೊಂಟ ನೋವು ಬಂದು ಯಾವ ವೈದ್ಯರಿಗೆ ತೋರಿಸಿದರೂ ಕೂಡ ಅವರ ಆರೋಗ್ಯ ಸುಧಾರಿಸಲಿಲ್ಲ.

ಇದನ್ನು ದಿಳ್ಳೆಪ್ಪ ಕುಟುಂಬದವರು ಶಿವಮೊಗ್ಗದ ಪ್ರಖ್ಯಾತ ಜ್ಯೋತಿಷಿಗಳ ಬಳಿ ಪ್ರಶ್ನೆ ಹಾಕಿಸಿ ಕೇಳಿದಾಗ, ನಿಮ್ಮ ಜಮೀನಿನಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ಸಣ್ಣ ವಿಗ್ರಹವಿದ್ದು ಅದು ಕೆರೆ ಕಾಮಗಾರಿ ಸಮಯದಲ್ಲಿ ಭೂಮಿಯಲ್ಲಿ ಮುಚ್ಚಿ ಹೋಗಿದೆ. ಅದನ್ನು ಹೊರ ತೆಗೆಸಿ ಅಲ್ಲಿ ಒಂದು ಸಣ್ಣ ಗುಡಿಯನ್ನು ನಿರ್ಮಿಸಿ ಪ್ರತಿಷ್ಠಾಪನೆ ಮಾಡಿ ಪೂಜ ಕಾರ್ಯಗಳನ್ನು ಮಾಡುವಂತೆ ಸಲಹೆ ನೀಡಿದರು. ನಂತರದ ಕೆಲವೇ ತಿಂಗಳುಗಳಲ್ಲಿ ಶ್ರೀ ಚೌಡೇಶ್ವರಿ ದೇವಿಯ ಸಣ್ಣ ದೇವಸ್ಥಾನವನ್ನು ನಿರ್ಮಿಸಿ ಪ್ರತಿಷ್ಠಾಪನೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮ ಗಳನ್ನು ದಿಳ್ಳಪ್ಪ ಮತ್ತು ಕುಟುಂಬದವರು ನಡೆಸಿದರು. ಇದಾದ ನಂತರ ಶ್ರೀಮತಿ ಲಕ್ಕಮ್ಮನವರ ಆರೋಗ್ಯ ಸುಧಾರಿಸಿ, ತದ ನಂತರ ವಯೋ ಸಹಜ ಕಾಯಿಲೆಯಿಂದ ನಿಧನ ಹೊಂದಿದರು.
ಸದರಿ ಎರಡು ದಿಳ್ಳೆಪ್ಪ ಕುಟುಂಬಗಳ ಪ್ರಸ್ತುತ ತಲೆಮಾರಿನ ಸದಸ್ಯರಿಗೆ ವ್ಯಾವಹಾರಿಕವಾಗಿ ಹಾಗೂ ಕುಟುಂಬದಲ್ಲಿ ಸಣ್ಣ ಮಟ್ಟಿನ ಮನಸ್ತಾಪಗಳು ಬರತೊಡಗಿದಾಗ, ಇದನ್ನು ಶಿವಮೊಗ್ಗದ ಮಲವಗೊಪ್ಪ ಶ್ರೀ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಸುರೇಶ್ ಭಟ್ಟರ ಬಳಿ ಪ್ರಸ್ತಾಪ ಮಾಡಿದರು. ಆಗ ಅವರು ಕವಡೆ ಪ್ರಶ್ನೆ ಹಾಕಿದಾಗ ಸದರಿ ಎರಡೂ ಕುಟುಂಬಗಳಿಗೆ ಸೇರಿದ ಜಮೀನಿನಲ್ಲಿರುವ ಶ್ರೀ ಚೌಡೇಶ್ವರಿ ದೇವಿ ಸಣ್ಣ ದೇವಸ್ಥಾನದ ಬಳಿ ನಾಗರ ಕಂದು ಇದ್ದು ಅದನ್ನು ಜೀರ್ಣೋದ್ಧಾರ ಮಾಡಿ ಅದಕ್ಕೊಂದು ಸೂರನ್ನು ಕಲ್ಪಿಸುವ ಉದ್ದೇಶದಿಂದ ಸದರಿ ಕುಟುಂಬ ಗಳಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ನೀವೆ ಸೇರಿ ಶ್ರೀ ಚೌಡೇಶ್ವರಿ ದೇವಿಯ ನೂತನ ವಿಗ್ರಹ ಪ್ರತಿಷ್ಠಾಪನೆ ಹಾಗೂ ಶ್ರೀ ನಾಗದೇವರ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಿದಾಗ ನಿಮ್ಮೆಲ್ಲರ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ತಿಳಿಸಿದರು.


ಅದರ ಪ್ರಕಾರ ಜೂ.೧೧ ಹಾಗೂ ೧೨ ರಂದು ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ನಾಗದೇವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ. ಇದರ ಪೂರ್ವಭಾವಿಯಾಗಿ ದಿನಾಂಕ : ೧೧-೦೬-೨೦೨೩ ನೇ ಭಾನುವಾರ ಸಂಜೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಂದು ಸಂಜೆ ೪-೩೦ ಗಂಟೆಯಿಂದ ಶ್ರೀ ಮಹಾಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದಿ, ಸಪ್ತಶುದ್ಧಿ ರಾಕ್ಷೆಜ್ಞ ಹೋಮ, ಅಹೋರಾಸ್ತ್ರ ಹೋಮ, ವಾಸ್ತು ಹೋಮ, ದಿಗ್ಬಲಿ, ಅಧಿವಾಸ ಪೂಜೆ – ಹೋಮ, ಸಪ್ತವಾಸ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ದಿನಾಂಕ : ೧೨-೦೬-೨೦೨೩ ನೇ ಸೋಮವಾರ, ಬೆಳಿಗ್ಗೆ ೬-೩೦ ಗಂಟೆಗೆ ಗಂಗೆ ಪೂಜೆ, ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ನಾಗ ದೇವರ ವಿಗ್ರಹ ಪ್ರತಿಷ್ಠಾಪನೆ, ಕಲಾಹೋಮ, ಶ್ರೀ ಚೌಡೇಶ್ವರಿ ದೇವಿ ಮೂಲಮಂತ್ರ ಹೋಮ, ಪೂರ್ಣಾಹುತಿ, ಪಂಚಾಮೃತ ಅಭಿಷೇಕ, ಕುಂಭಾಭಿಷೇಕ, ನೈವೇದ್ಯ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ತಿಳಿಸಿದ ಅವರು, ಮಧ್ಯಾಹ್ನ ೧೨-೩೦ ಗಂಟೆಗೆ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಲಿದೆ.
ಕಟ್ಟಡ ನಿರ್ಮಾಣ : ಸುಮಾರು ೧೯ ೪೫ ಅಳತೆಯ ಜಗದಲ್ಲಿ ವಿಶಾಲವಾಗಿ ನಿರ್ಮಿಸಿರುವ ಉಭಯ ದೇವಳಗಳ ದೇವಸ್ಥಾನದ ಕಟ್ಟಡ ನಿರ್ಮಾಣವನ್ನು ಚನ್ನಮುಂಬಾಪುರದ ಕಂಟ್ರ್ಯಾಕ್ಟರ್ ಟಿ. ಚಂದ್ರು ಸುಂದರವಾಗಿ ಮಾಡಿzರೆ. ಗೋಪುರವನ್ನು ರಾಗಿಗುಡ್ಡದ ಕೆ. ಆರ್ಮುಗಂ ನಿರ್ಮಿಸಿ zರೆ.
ವಿಗ್ರಹ ವಿಶೇಷತೆ : ಶ್ರೀ ಚೌಡೇಶ್ವರಿ ದೇವಿ ವಿಗ್ರಹವು ಸುಮಾರು ಎರಡು ಅಡಿ ನಲವತ್ತೊಂದು ಇಂಚು ಎತ್ತರ ಹಾಗೂ ಒಂದೂವರೆ ಅಡಿ ಅಗಲವಿದೆ. ವಿಗ್ರಹವು ವಿಶಾಲವಾದ ನಗುಮುಖ ದಿಂದ ಕೂಡಿದ್ದು, ಬಲಗೈಯ ಭಾಗದಲ್ಲಿ ಅಭಯಹಸ್ತ, ತ್ರಿಶೂಲ, ಎಡಗೈಯ ಭಾಗದಲ್ಲಿ ಕುಂಕುಮದ ಭರಣಿ, ಡಮರುಗವನ್ನು ಹೊಂದಿದೆ. ವಿಶೇಷ ಶಕ್ತಿಯನ್ನು ಹೊಂದಿರುವ ಶ್ರೀ ಚೌಡೇಶ್ವರಿ ದೇವಿಯು ಹಲವು ಮಕ್ಕಳಿಲ್ಲದ ಭಕ್ತಾದಿಗಳಿಗೆ ಸಂತಾನ ಭಾಗ್ಯ ನೀಡಿ ಸಂತಾನ ಶ್ರೀ ಚೌಡೇಶ್ವರಿ ದೇವಿ ಎಂದೂ ಸಹ ಪ್ರಸಿದ್ಧಿ ಪಡೆದಿದೆ.


ದಾವಣಗೆರೆ ಜಿ ಹೊನ್ನಾಳಿ ತಾಲ್ಲೂಕಿನ ಶ್ರೀ ಗುರುಕೃಪಾ ಶಿಲ್ಪಕಲಾ ಮಂದಿರದ ಎಂ.ಕೆ. ಮಾಲ ತೇಶ್ ಆಚಾರ್ ಶ್ರೀ ಚೌಡೇಶ್ವರಿ ದೇವಿ ಹಾಗೂ ನಾಗದೇವರ ವಿಗ್ರಹಗಳನ್ನು ಸುಂದರವಾಗಿ ನಿರ್ಮಾಣ ಮಾಡಿzರೆ.
ಸಾರ್ವಜನಿಕರು ಹಾಗೂ ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ನಾಗ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅವರು ಕೋರಿzರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : ೯೯೮೬೨೭೫೧೩೯, ೯೬೩೨೬೬೬೧೩೬ ಗಳಿಗೆ ಸಂಪರ್ಕಿಸಬಹುದು.
ದೇವಸ್ಥಾನದ ವಿಳಾಸ :
ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ, ಜೆ.ಎನ್.ಎನ್. ಸಿ. ಕಾಲೇಜು ಹಿಂಭಾಗ, ಡಿವಿಎಸ್ ಬಡಾವಣೆ, ಸವಳಂಗ ರಸ್ತೆ, ಶಿವಮೊಗ್ಗ.
ಶಿವಮೊಗ್ಗ ಬಸ್ ನಿಲ್ದಾಣದಿಂದ ಸುಮಾರು ಐದು ಕಿ.ಮೀ. ರೈಲು ನಿಲ್ದಾಣದಿಂದ ಮೂರು ಕಿ.ಮೀ. ಅಂತರವಿದೆ.
ಹಿಮವಂತ