ಜು.೧೬: ನಗರದ ಸೇಕ್ರೆಡ್ ಹಾರ್ಟ್ ಚರ್ಚ್ನಲ್ಲಿ ಮೌಂಟ್ ಕಾರ್ಮೆಲ್ ಮಹೋತ್ಸವ
ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸೇಕ್ರೆಡ್ ಹಾರ್ಟ್ ಚರ್ಚ್ನಲ್ಲಿ ಜು.೧೬ರ ನಾಳೆ (ಭಾನುವಾರ) ಕಾರ್ಮೆಲ್ ಮಾತೆಯ ಮಹೋತ್ಸವ ಅದ್ಧೂರಿಯಾಗಿ ಜರುಗಲಿದೆ.
ಜು.೧೬ರ ನಾಳೆ (ಭಾನುವಾರ) ಬೆಳಿಗ್ಗೆ ೬.೩೦ಕ್ಕೆ ಪ್ರಥಮ ಪೂಜಾಕಾರ್ಯಗಳು ನಡೆಯಲಿದ್ದು, ನಂತರ ೯.೩೦ಕ್ಕೆ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಫ್ರಾನ್ಸಿನ್ಸ್ ಶೆರಾವೋ ಎಸ್.ಜೆ. ಇವರಿಂದ ಹಬ್ಬದ ಸಾಂಭ್ರಮಿಕ ಪೂಜಾವಿಧಿಗಳು ಮತ್ತು ಪ್ರಭೋದನೆ ಇರುವುದು.
ಅಂದು ಸಂಜೆ ೫.೩೦ಕ್ಕೆ ಜಪಸರ ಪ್ರಾರ್ಥನೆ, ವಿಶೇಷ ಪೂಜೆ ನಂತರ ಕಾರ್ಮೆಲ್ ಮಾತೆಯ ಅಲಂಕೃತ ತೇರಿನ ರಾಜಬೀದಿ ಉತ್ಸವ ನಡಯಲಿದ್ದು, ತದನಂತರ ದೇವಾಲಯದಲ್ಲಿ ಪವಿತ್ರ ಪರಮಪ್ರಸಾದದ ಆರಾಧನೆ ಜರುಗಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಮೆಲ್ ಮಾತೆಯ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಧರ್ಮಕೇಂದ್ರದ ಗುರುಗಳಾದ ರೆ|ಫಾ| ಸ್ಟ್ಯಾನಿ ಡಿಸೋಜ ಅವರು ಕೋರಿದ್ದಾರೆ.
ವಿಶೇಷ ಸೂಚನೆ: ಕಾರ್ಮೆಲ್ ಮಾತೆಗೆ ಹರಕೆ ಪೂಜೆಯನ್ನು ಸಲ್ಲಿಸುವ ಭಕ್ತರು ಹಾಗೂ ದಾನಿಗಳಿಗೆ ಗುರುಗಳ ನಿವಾಸದ ಕಛೇರಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಇದರ ಸದುಪಯೋಗ ಪಡೆಯುವಂತೆ ಪಾಲನಾ ಸಮಿತಿ ಮತ್ತು ಆರ್ಥಿಕ ಸಮಿತಿಯ ಕಾರ್ಯದರ್ಶಿಗಳು ಕೋರಿದ್ದಾರೆ.