ಜೂ.೯ : ಐಲೆಟ್ಸ್ ಆಸ್ಪತ್ರೆಯಲ್ಲಿ ಮಧುಮೇಹ ತಪಾಸಣೆ ಶಿಬಿರ

ಶಿವಮೊಗ್ಗ: ಸಾಗರ ರಸ್ತೆಯ ಆಯನೂರು ಗೇಟ್ ಬಳಿಯ ಐಲೆಟ್ಸ್ ಡಯಾಬಿಟಿಕ್ ಆಸ್ಪತ್ರೆ ಯು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಸಹಯೋಗದಲ್ಲಿ ಜೂ.೯ ರಂದು ಬೆಳಿಗ್ಗೆ ೯-೩೦ರಿಂದ ೧೨- ೩೦ರ ವರೆಗೆ ಆಸ್ಪತ್ರೆಯಲ್ಲಿ ಸಮಗ್ರ ಡಯಾಬಿಟಿಸ್ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆ ಯ ವೈದ್ಯ ಡಾ. ಪ್ರೀತಂ ಬಿ. ತಿಳಿಸಿzರೆ.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಐಲೆಟ್ಸ್ ಡಯಾ ಬಿಟಿಕ್ ಆಸ್ಪತ್ರೆ ಒಂದೇ ಸೂರಿನಡಿ ಸಮಗ್ರ ಡಯಾಬಿಟಿಸ್ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರದಲ್ಲಿ ಕಣ್ಣಿನ ಉಚಿತ ತಪಾಸಣೆ ಹಾಗೂ ಕಾಲಿನ ನರಗಳ ಪರೀಕ್ಷೆ ಮಾಡಲಾಗುವುದು. ಜೊತೆಗೆ ಕೇವಲ ೩೦೦ರೂ.ನಲ್ಲಿ ವಾರ್ಷಿಕ ಹೆಲ್ತ್ ಕಾರ್ಡ್ ವಿತರಿಸಲಾಗು ವುದು. ಹಾಗೂ ಡಯಾಬಿಟಿಸ್ ರೋಗಿಗಳಿಗೆ ವಿಶೇಷವಾಗಿ ತಯಾ ರಿಸಲಾಗಿರುವ ಆಹಾರವನ್ನು ರಿಯಾಯಿತಿ ದರದಲ್ಲಿ ನೀಡಲಾ ಗುವುದು ಎಂದರು.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಡಾ. ರಾಹುಲ್ ಎನ್. ಎಸ್. ಅವರು ಸರ್ಜರಿ ತಜ್ಞರು. ಅವರು ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ. ವೆರಿಕೋಸ್, ಕೈಕಾಲು ನೋವು, ಮಧು ಮೇಹ ದಿಂದ ಕಾಲಿನಲ್ಲಿ ವಾಸಿಯಾಗದ ಗಾಯಗಳು ಗ್ಯಾಂಗ್ರಿನ್ ಸಮಸ್ಯೆ, ಕಾಲಿನ ನರಗಳ ಪರೀಕ್ಷೆಗಳನ್ನು ಮಾಡುತ್ತಾರೆ ಎಂದರು.


ತಿಂಗಳ ಪ್ರತಿ ೨ನೇ ಶುಕ್ರವಾರ ಸಮಗ್ರ ಡಯಾಬಿಟಿಸ್ ತಪಾಸಣಾ ಶಿಬಿರವಿರುತ್ತದೆ.ಮಧುಮೇಹಿಗಳು ಇದರ ಪ್ರಯೋಜನ ಪಡೆಯ ಬಹುದಾಗಿದೆ. ಪ್ರಮುಖವಾಗಿ ಮಧುಮೇಹದಿಂದ ಕಣ್ಣಿನ ಸಮಸ್ಯೆ ಹಾಗೂ ಪಾದಗಳ ಸಂರ ಕ್ಷಣೆ ಇಲ್ಲದೆ ಸಮಸ್ಯೆ ಉಂಟಾಗು ತ್ತದೆ. ಇದು ಗ್ಯಾಂಗ್ರಿನ್‌ಗೂ ಕಾರಣವಾಗಬಹುದು. ಕಣ್ಣುಗಳು ಕುರುಡಾಗಬಹುದು. ತಪಾಸಣೆ ಯಿಂದ ಇದನ್ನು ತಪ್ಪಿಸಲು ಸಾಧ್ಯ. ಹಾಗಾಗಿ ತಪಾಸಣೆ ಮಾಡಿಸಿಕೊ ಳ್ಳುವುದು ಅತ್ಯಂತ ಸೂಕ್ತವಾಗಿದೆ ಎಂದರು.
ಹೆಲ್ತ್ ಕಾರ್ಡ್ ಮಾಡಿಸುವು ದರಿಂದ ವರ್ಷದಲ್ಲಿ ಎಷ್ಟು ಬಾರಿ ಯಾದರೂ ತಪಾಸಣೆಗೆ ಬರಬ ಹುದು. ತಪಾಸಣೆಯಲ್ಲಿ ಶೇ.೫೦ ರಷ್ಟು ರಿಯಾಯಿತಿ ಇರುತ್ತದೆ. ಮತ್ತು ಒಳರೋಗಿಗಳಿಗೂ ಶೇ.೫೦ ರಷ್ಟು ರಿಯಾಯಿತಿ ಇರುತ್ತದೆ ವರ್ಷಕ್ಕೆ ಕೇವಲ ೩೦೦ರೂ. ಆಗಿದೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಆರ್.ಬಿ. ಪಲ್ಲವಿ, ಡಾ. ಚೇತನ್, ಕುಮಾರ್, ವಿನಯ್ ಮೊದಲಾದವರು ಇದ್ದರು.